ದಿನಭವಿಷ್ಯ 14 ಅಕ್ಟೋಬರ್‌ 2023 : ಸೂರ್ಯಗ್ರಹಣದಿಂದ ಇಂದು ಯಾವ ರಾಶಿಗೆ ಶುಭ

Horoscope Today : ಇಂದು ಅಕ್ಟೋಬರ್‌ 14 2023 ಶನಿವಾರ. ದ್ವಾದಶ ರಾಶಿಗಳ ಮೇಲೆ ಇಂದು ಹಸ್ತಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಮಹಾಲಯ ಅಮವಾಸ್ಯೆಯು ಎದುರಾಗಲಿದೆ.

Horoscope Today : ಇಂದು ಅಕ್ಟೋಬರ್‌ 14 2023 ಶನಿವಾರ. ದ್ವಾದಶ ರಾಶಿಗಳ ಮೇಲೆ ಇಂದು ಹಸ್ತಾ ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಮಹಾಲಯ ಅಮವಾಸ್ಯೆಯು ಎದುರಾಗಲಿದೆ. ಇದರಿಂದಾಗಿ ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹರಾಶಿಯ ಮೇಲೆ ಅನಿರೀಕ್ಷಿತ ಫಲಿತಾಂಶವನ್ನು ಎದುರಿಸಬೇಕಾಗಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಹಿರಿಯ ಅಧಿಕಾರಿಗಳ ಜೊತೆಗೆ ಸಂಘರ್ಷ ಬೇಡ. ವೈವಾಹಿಕ ಜೀವನ ಮಧುರತೆಯಿಂದ ಕೂಡಿರಲಿದೆ. ಸಾಮಾಜಿಕ ವಲಯದಲ್ಲಿ ನಿಮ್ಮ ಬಗೆಗಿನ ಗೌರವ ಹೆಚ್ಚಲಿದೆ. ಸ್ನೇಹಿತರ ಜೊತೆಗೆ ದೂರ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಬಾಕಿ ಉಳಿದಿರುವ ಸರಕಾರಿ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ.

ವೃಷಭರಾಶಿ ದಿನಭವಿಷ್ಯ
ಕೆಲವು ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಯಾರ ಬಳಿಯಲ್ಲಾದ್ರೂ ಸಾಲವಾಗಿ ಪಡೆದುಕೊಂಡಿದ್ರೆ ಅದನ್ನು ಹಿಂದಿರುಗಿಸುತ್ತೀರಿ. ಸಂಗಾತಿಯ ಜೊತೆಗೆ ಸುಮಧುರ ಸಂಜೆಯನ್ನು ಕಳೆಯುವಿರಿ. ಕೆಲವು ಅನಿರೀಕ್ಷಿತ ಪ್ರಯೋಜನಗಳು ನಿಮಗೆ ದೊರೆಯಲಿದೆ. ಉದ್ಯಮಿಗಳಿಗೆ ಅಧಿಕ ಶ್ರಮ ಅಗತ್ಯ.

ಮಿಥುನರಾಶಿ ದಿನಭವಿಷ್ಯ
ಸ್ನೇಹಿತರ ಜೊತೆಗೆ ಸಮಯವನ್ನು ಕಳೆಯುವಿರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಜನರನ್ನು ಭೇಟಿಯಾಗಬೇಕಾಗುತ್ತದೆ. ಸ್ನೇಹಿತರ ಜೊತೆಗೆ ಸಮಯವನ್ನು ಕಳೆಯುವಿರಿ. ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುತ್ತದೆ. ನೌಕರರು ಅಧಿಕಾರಿಗಳ ಜೊತೆಗಿನ ವಿವಾದ ಇಂದು ಕೊನೆಗೊಳ್ಳಲಿದೆ.

ಇದನ್ನೂ ಓದಿ : ರೈತರು ಸಾಲ ಮರು ಪಾವತಿ ಮಾಡುವಂತಿಲ್ಲ: ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರಕಾರ

ಕರ್ಕಾಟಕರಾಶಿ ದಿನಭವಿಷ್ಯ
ಸಾಮಾಜಿಕ ಕ್ಷೇತ್ರದಲ್ಲಿ ಸಾರ್ವಜನಿಕರ ಬೆಂಬಲ ಪಡೆಯುತ್ತೀರಿ. ಪಾಲುದಾರಿಕೆಯಿಂದ ವ್ಯವಹಾರವನ್ನು ನಡೆಸುತ್ತಿದ್ದರೆ ಅದರಿಂದ ಇಂದು ಅಧಿಕ ಲಾಭ ದೊರೆಯಲಿದೆ. ತಂದೆಯ ಸಹಾಯದಿಂದ ಯಾವುದೇ ಕೆಲಸ ಮಾಡಿದ್ರೂ ಅಧಕ ಲಾಭ ದೊರೆಯಲಿದೆ. ಮನಸಿನ ಆತಂದ ಇಂದ ದೂರವಾಗಲಿದೆ.

ಸಿಂಹರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಶ್ರಮಿಸಬೇಕಾಗುತ್ತದೆ. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಾತುಗಳ ಬಗ್ಗೆ ಎಚ್ಚರಿಕೆವಹಿಸಿ. ಹೂಡಿಕೆಗಳು ಭವಿಷ್ಯದಲ್ಲಿ ನಿಮಗೆ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ.

ಕನ್ಯಾರಾಶಿ ದಿನಭವಿಷ್ಯ
ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಪ್ರಯತ್ನಗಳಲ್ಲಿ ಇಂದು ಯಶಸ್ಸನ್ನು ಪಡೆಯಲಿದ್ದೀರಿ. ಯಾವುದೇ ಭಯಪಡದೆ ಕೆಲಸ ಕಾರ್ಯಗಳನ್ನು ಇಂದು ಪೂರ್ಣಗೊಳಿಸಿ. ಅನಿರೀಕ್ಷಿತವಾಗಿ ಯಶಸ್ಸು ಪಡೆಯುವ ಸಾಧ್ಯತೆಯಿದೆ. ನಿಮ್ಮ ಆಲೋಚನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ತುಲಾರಾಶಿ ದಿನಭವಿಷ್ಯ
ಸ್ನೇಹಿತರೊಂದಿಗೆ ದೂರ ಪ್ರಯಾಣಕ್ಕೆ ತೆರಳಲು ಯೋಚಿಸಿದ್ದರೆ ಇಂದು ಹೆಚ್ಚು ಲಾಭ ತಂದುಕೊಡಲಿದೆ. ಸಂಗಾತಿಯ ಸಲಹೆ ಹಲವು ರೀತಿಯಲ್ಲಿ ಅನುಕೂಲಕರ. ಅತ್ತೆಯ ಜೊತೆಗಿನ ಮನಸ್ತಾಪ ಇಂದು ಕೊನೆಯಾಗಲಿದೆ. ಪ್ರೇಮ ಜೀವನವು ಸುಖಮಯವಾಗಿ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.

Horoscope Today 14 October 2023 Solar eclipse for which zodiac sign is good today
Image Credit to Original Source

ವೃಶ್ಚಿಕರಾಶಿ ದಿನಭವಿಷ್ಯ
ಬಿಡುವಿಲ್ಲದ ಕೆಲಸದ ಒತ್ತಡದ ನಡುವಲ್ಲೂ ಕುಟುಂಬ ಸದಸ್ಯರಿಗಾಗಿ ಸಮಯವನ್ನು ಮೀಸಲಿಡಿ. ಯಾರೊಂದಿಗೂ ನೀವು ವಾದಕ್ಕೆ ಇಳಿಯ ಬೇಡಿ. ಅನೇಷ ವಿಷಯಗಳಲ್ಲಿ ಇಂದು ವಿಶೇಷ ಲಾಭವನ್ನು ಪಡೆಯಲಿದ್ದೀರಿ. ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ ಪಡೆಯುವಿರಿ.

ಧನಸ್ಸುರಾಶಿ ದಿನಭವಿಷ್ಯ
ಹೊಸ ಜನರ ಭೇಟಿಯಿಂದ ವ್ಯವಹಾರಕ್ಕೆ ಲಾಭವಾಗಲಿದೆ. ಕೆಲಸದ ವಿಚಾರದಲ್ಲಿ ನೀವು ಸಾಕಷ್ಟು ಜಾಗರೂಕರಾಗಿ ಇರಬೇಕು. ಕುಟುಂಬ ಸದಸ್ಯರ ಜೊತೆಗೆ ಮಾತುಕತೆಯಿಂದ ವಿವಾಹಕ್ಕೆ ಎದುರಾಗಿರುವ ತೊಡಕುಗಳು ಪರಿಹಾರ ಆಗಲಿದೆ. ಹೊಸ ಜನರ ಭೇಟಿಯಿಂದ ಹಲವು ರೀತಿಯಲ್ಲಿ ಅನುಕೂಲಕರ.

ಇದನ್ನೂ ಓದಿ : RBL ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್‌ಗೆ ಭಾರಿ ದಂಡ ವಿಧಿಸಿದ RBI

ಮಕರರಾಶಿ ದಿನಭವಿಷ್ಯ
ಕುಟುಂಬದ ವ್ಯವಹಾರದಲ್ಲಿ ತಂದೆಯ ಸಲಹೆಯನ್ನು ಪಡೆಯಬೇಕು. ಕಚೇರಿಯಲ್ಲಿ ಮೇಲಾಧಿಕಾರಿಗಳ ಜೊತೆಗಿನ ಉತ್ತಮ ಸಂಬಂಧ ಭಡ್ತಿಯನ್ನು ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಮಧುರತೆ ಇರುತ್ತದೆ. ಮಾತುಗಳ ಮೇಲೆ ಹಿಡಿತ ಇರಲಿ, ಇಲ್ಲವಾದ್ರೆ ಸಂಬಂಧಗಳಲ್ಲಿ ಬಿರುಕು ಮೂಡಲಿದೆ.

ಕುಂಭರಾಶಿ ದಿನಭವಿಷ್ಯ
ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂತೋಷಕ್ಕಾಗಿ ಹಣವನ್ನು ವ್ಯಯಿಸಬೇಕಾಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಭೂಮಿ, ವಾಹನ ಖರೀದಿಗೆ ಯೋಗ್ಯವಾದ ಕಾಲ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಿರಿ. ಹೂಡಿಕೆಗಳಲ್ಲಿ ಅಧಿಕ ಲಾಭ ದೊರೆಯಲಿದೆ.

ಮೀನರಾಶಿ ದಿನಭವಿಷ್ಯ
ಹೊಸ ಹೂಡಿಕೆಗಳು ಇಂದು ಲಾಭವನ್ನು ತಂದುಕೊಡಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ. ವ್ಯವಹಾರ ಕ್ಷೇತ್ರದಲ್ಲಿ ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ಸಂತಸ ತರಲಿದೆ. ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 14 October 2023 Solar eclipse for which zodiac sign is good today

Comments are closed.