ಗೃಹಲಕ್ಷ್ಮೀ ಯೋಜನೆ : ಇದೇ ಕಾರಣಕ್ಕೆ 9 ಲಕ್ಷ ಜನರಿಗೆ ಸಿಗಲ್ಲ ಗೃಹಲಕ್ಷ್ಮೀ ಮೊದಲ ಕಂತಿನ ಹಣ

ಬೆಂಗಳೂರು : ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಇದೀಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಗೃಹಿಣಿಯರಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ (DBT) ಸರಕಾರ ಜಮೆ ಮಾಡುತ್ತಿದೆ.  ಆದರೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದ 9,44,155 ಅರ್ಜಿದಾರರಿಗೆ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಿಲ್ಲ. ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರಣ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿಲ್ಲಿ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಈಗಾಗಲೇ ಸಪ್ಟೆಂಬರ್‌ ತಿಂಗಳಿನಲ್ಲಿ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಆದರೆ ಅರ್ಜಿ ಸಲ್ಲಿಸಿದ್ದ ಎಲ್ಲರಿಗೂ ಕೂಡ ಹಣ ಜಮೆ ಆಗಿಲ್ಲ.

Gruha lakshmi Yojana 9 lakh people will not get the money for the first installment for this Reason
Image Credit to Original Source

ಎಪಿಎಲ್‌, ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುದಾರರ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು 2,000 ರೂ.‌ಗಳನ್ನು ರಾಜ್ಯ ಸರಕಾರ ವರ್ಗಾವಣೆ ಮಾಡುತ್ತಿದೆ. ಆದರೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಿದ್ದ 9,44,155 ಅರ್ಜಿದಾರರು ಹಣ ಪಡೆದಿಲ್ಲ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ : ಗೃಹಿಣಿಯರಿಗೆ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಯಾವ ಕಾರಣಕ್ಕೆ ಹಣ ವರ್ಗಾವಣೆ ಆಗಿಲ್ಲ ಅನ್ನೋ ಕುರಿತು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಂಕಿಅಂಶಗಳ ಮಾಹಿತಿ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರ ಪೈಕಿ ಸಾವಿನ ಕಾರಣದಿಂದ 3082 ಅರ್ಜಿದಾರರ ಅರ್ಜಿಯನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೊ ಪರಿಶೀಲನೆ ವಿಫಲವಾಗಿದೆ. ಇನ್ನು ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರು ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕಾರಗೊಂಡಿದ್ದು, ಸರಿ ಪಡಿಸುವ ಕಾರ್ಯ ನಡೆಯುತ್ತಿದೆ.

ಇನ್ನು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ 5,96,268 ಫಲಾನುಭವಿ ಖಾತೆಯ ಜೊತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲ. ಇನ್ನು 2,17,536 ಫಲಾನುಭವಿಗಳ ಬ್ಯಾಂಕ್‌ ಖಾತೆಯನ್ನು ಆಧಾರ್‌ ಕಾರ್ಡ್‌ ಜೊತೆಗೆ ಯಶಸ್ವಿಯಾಗಿ ಲಿಂಕ್‌ ಮಾಡಲಾಗಿದೆ. ಈ ಕುರಿತು ಸಿಡಿಪಿಒಗೆ ಮಾಹಿತಿ ನೀಡಿ ಉಳಿದ ಫಲಾನುಭವಿಗಳ ಆಧಾರ್‌ ನೀಡಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗದೇ ಇರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಸುಮಾರು 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ಹೊಂದಾಣಿಕೆ ಆಗುತ್ತಿಲ್ಲ. ಜೊತೆಗೆ ಬ್ಯಾಂಕುಗಳ ಮೂಲಕ ಇ-ಕೆವೈಸಿ ಮಾಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇನ್ನು 9,766 ನಮೂದಿಸಿದ ಡೇಟಾದಿಂದ ಉಂಟಾದ ವಿಳಂಬವನ್ನು ಸೇವಾ ಸಿಂಧು ಮರುಪರಿಶೀಲಿಸಲಾಗುತ್ತಿದೆ.

Gruha lakshmi Yojana 9 lakh people will not get the money for the first installment for this Reason
Image Credit to Original Source

ರಾಜ್ಯದಲ್ಲಿ ಇದುವರೆಗೆ ಒಟ್ಟು 1.8 ಕೋಟಿ ಅರ್ಹ ಫಲಾನುಭವಿಗಳಿಗೆ 2169 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ. ಜಮೆ ಮಾಡಲಾಗಿದೆ. ಅಲ್ಲದೇ ಅಕ್ಟೋಬರ್ 4 ರವರೆಗೆ ಸರ್ಕಾರವು 93 ಲಕ್ಷ ಫಲಾನುಭವಿಗಳ ಖಾತೆಗೆ ತಲಾ 2000 ರೂ. ಜಮೆ ಆಗಿದೆ.

ಸದ್ಯ 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಕ್ರಮಕೈಗೊಳ್ಳಲಾಗಿದೆ. ಇದೀಗ ಅಕ್ಟೋಬರ್ 2ನೇ ವಾರದಲ್ಲಿ 2ನೇ ಕಂತಿನ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಮೊದಲ ಕಂತಿನ ಹಣ ವರ್ಗಾವಣೆ ಆಗದ ಮಹಿಳೆಯರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಲು ಸಮಸ್ಯೆ ಪರಿಪಡಿಸಲಾಗುತ್ತದೆ.

ಇದನ್ನೂ ಓದಿ : APL, BPL ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮಹತ್ವದ ಸೂಚನೆ

ಅಕ್ಟೋಬರ್ 2ನೇ ವಾರದಲ್ಲಿ ಗೃಹ ಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಮೊದಲ ಕಂತಿನ ಹಣ ಸಿಗದಿರುವ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವಲ್ಲಿನ ಸಮಸ್ಯೆ ಸರಿಪಡಿಸಿಕೊಳ್ಳಲು ಸರ್ಕಾರದ ಸಲಹೆ ಎರಡೂ ಕಂತುಗಳನ್ನು ಒಟ್ಟಿಗೆ ಖಾತೆಗೆ ಜಮಾ ಮಾಡಲಾಗುತ್ತದೆ.

Gruha lakshmi Yojana 9 lakh people will not get the money for the first installment for this Reason

Comments are closed.