ಜನರು ಸಾಮಾನ್ಯವಾಗಿ ಯಾವುದೇ ವಿಚಾರದ ಮಾಹಿತಿ ಬೇಕಾಗಿದ್ರೆ ಗೂಗಲ್ ಸರ್ಜ್(Google Search) ಅಥವಾ ಯೂಟ್ಯೂಬ್ (Youtube) ಮೊರೆ ಹೋಗುತ್ತಾರೆ. Google ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಆದರೆ ಗೂಗಲ್ನಲ್ಲಿ ಈ ವಿಚಾರವನ್ನು ಸರ್ಚ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ (bank balance) ಹಣ ಖಾಲಿ ಆಗುತ್ತಂತೆ.
ವಿಶ್ವದ ಅತೀ ದೊಡ್ಡ ಸರ್ಜ್ ಇಂಜಿನ್ ಎನಿಸಿಕೊಂಡಿರುವ ಗೂಗಲ್ ಸರ್ಚ್ ಬಳಕೆ ಮಾಡವರು ವಿರಳಾತಿವಿರಳ. ಯಾವುದೇ ವಿಚಾರದ ಕುರಿತ ಮಾಹಿತಿಯು ಗೂಗಲ್ನಲ್ಲಿ ಲಭ್ಯವಿದೆ. ಇದೇ ಕಾರಣಕ್ಕೂ ಎಲ್ಲರೂ ಕೂಡ ಗೂಗಲ್ ಅವಲಂಭಿಸಿಕೊಂಡು ಇರುತ್ತಾರೆ. ಆದರೆ ಗೂಗಲ್ ಎಷ್ಟು ಅನುಕೂಲಕರವೋ, ಅಷ್ಟೇ ಅಪಾಯಕಾರಿಯೂ ಹೌದು.

ಗೂಗಲ್ ಸರ್ಜ್ ಇಂಜಿನ್ನಲ್ಲಿ ಕೆಲವೊಂದು ವಿಚಾರಗಳನ್ನು ಯಾವುದೇ ಕಾರಣಕ್ಕೂ ಹುಡುಕ ಬಾರದು. ಕೆಲವೊಂದು ಸರ್ಜ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇನ್ನೂ ಕೆಲವೊಂದು ವಿಚಾರಗಳಿಂದಾಗಿ ನಮ್ಮ ಬ್ಯಾಂಕ್ ಬ್ಯಾಲೆನ್ಸ್ಗೆ ಕನ್ನ ಹಾಕಲಾಗುತ್ತದೆ. ಹಾಗಾದ್ರೆ ಗೂಗಲ್ನಲ್ಲಿ ಯಾವೆಲ್ಲಾ ವಿಚಾರಗಳನ್ನು ಹುಡುಕಬಾರದು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : 8GB Ram 64MP ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ OPPO F21 Pro
ಸಾಮಾನ್ಯವಾಗಿ ಗೂಗಲ್ ಸರ್ಚ್ ಪುಟ ತೆರೆದಾಗಿ ಸಾಕಷ್ಟು ಲಿಂಕ್ಗಳು ಕಾಣಿಸಿಕೊಳ್ಳುತ್ತದೆ. ಅದ್ರಲ್ಲಿ ಯಾವುದೇ ಅಧಿಕೃತ ವೆಬ್ಸೈಟ್ಗಳಿಂದ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ ಯಾವುದೇ ಸಮಸ್ಯೆ ಇಲ್ಲ. ಗೂಗಲ್ ಸರ್ಚ್ನಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಸ್ಪ್ಯಾಮ್ ಲಿಂಕ್ಗಳನ್ನು ಕ್ಲಿಕ್ ಮಾಡಿದಾ ಅಪಾಯ ಗ್ಯಾರಂಟಿ.
ಸಾಮಾನ್ಯವಾಗಿ ಸ್ಪ್ಯಾಮ್ ಅಥವಾ ಮಾಲ್ವೇರ್ ವೆಬ್ಸೈಟ್ ಗಳು ಪ್ರಾಯೋಜಿತ ಹೆಸರಿನೊಂದಿಗೆ ಕಾಣಿಸಿಕೊಳ್ಳುತ್ತವೆ. ಈ ವೆಬ್ಸೈಟ್ನ ಪುಟಗಳು ತೆರೆಯುತ್ತಿದ್ದಂತೆಯೇ ಕುಕೀಗಳು ಮಾಲ್ವೇರ್ ವೆಬ್ಸೈಟ್ ತೆರೆಯುತ್ತದೆ. ಒಂದೊಮ್ಮೆ ಇಂತಹ ಮಾಲ್ವೇರ್ ಪುಟದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ್ರೆ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.
ಇದನ್ನೂ ಓದಿ : ವಾಟ್ಸಾಪ್ ಹೊಸ ಫೀಚರ್ಸ್, ಪಾಸ್ವರ್ಡ್ ಇಲ್ಲದೇ ಆಗುತ್ತೆ ಲಾಗಿನ್ : ಹೊಸ ಪಾಸ್ ಕೀ ವೈಶಿಷ್ಟ್ಯದ ಬಗ್ಗೆ ನಿಮಗೆಷ್ಟು ಗೊತ್ತು ?
ಶ್ರೀಮಂತರಾಗಬೇಕು ಅನ್ನೋದು ಹಲವರ ಕನಸು. ಇದಕ್ಕಾಗಿ ಬಹುತೇಕರು ಶ್ರಮವಹಿಸಿ ದುಡಿಯುತ್ತಾರೆ. ಆದ್ರೆ ಇನ್ನೂ ಕೆಲವರು ಇದಕ್ಕಾಗಿ ಗೂಗಲ್ನಲ್ಲಿ ಹುಡುಕಾಟ ನಡೆಸುತ್ತಾರೆ. ಆದ್ರೆ ಗೂಗಲ್ನಲ್ಲಿ ಸುಲಭವಾಗಿ ಹಣಗಳಿಸುವ ಮಾರ್ಗಗಳ ಕುರಿತು ಹುಡುಕಾಟ ನಡೆಸುವುದು ಕೂಡ ಅಪಾಯಕಾರಿ.

ಗೂಗಲ್ನಲ್ಲಿ ಹಣಗಳಿಸುವ ಮಾರ್ಗಗಳ ಕುರಿತು ಹುಡುಕಾಟ ನಡೆಸಿದಾಗ, ಸಾಕಷ್ಟು ಲಿಂಕ್ಗಳು ಗೂಗಲ್ನಲ್ಲಿ ತೆರೆದುಕೊಳ್ಳುತ್ತವೆ. ಆದರೆ ಇದರಲ್ಲಿ ಕೆಲವೊಂದು ನಕಲಿ ಲಿಂಕ್ಗಳಾಗಿರುವ ಸಾಧ್ಯತೆಯಿದೆ. ಇಂತಹ ಲಿಂಕ್ಗಳು ಮಾಲ್ವೇರ್ (Malware ) ಆಗಿ ಕನ್ವರ್ಟ್ ಆಗಿ ನಿಮ್ಮ ಗೌಪ್ಯ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ.
ಕೆಲವರು ತಮ್ಮ ಸಿಬಿಲ್ ಸ್ಕೋರ್ (Cibil Score) ಚೆಕ್ ಮಾಡಲು ಗೂಗಲ್ ಮೊರೆ ಹೋಗುತ್ತಾರೆ. ಅದ್ರಲ್ಲೂ ಸಿಬಿಎಲ್ ಸ್ಕೋರ್ ಉಚಿತವಾಗಿ ಪಡೆಯಬಹುದು ಅನ್ನುವ ಲಿಂಕ್ಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಆದರೆ ಗೂಗಲ್ನಲ್ಲಿ ಕಾಣಿಸುವ ಉಚಿತ ಲಿಂಕ್ಗಳು ನಕಲಿ ಆಗಿರುವುದೇ ಹೆಚ್ಚು. ಇಂತಹ ನಕಲಿ ಲಿಂಕ್ಗಳನ್ನು ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣಕ್ಕೆ ಕುತ್ತು ಬರುವ ಸಾಧ್ಯತೆಯಿದೆ.
ಇದನ್ನೂ ಓದಿ : ಅಮೆಜಾನ್ ಬಿಗ್ ಸೇಲ್ : ಕೇವಲ 14,449 ರೂಪಾಯಿಗೆ ಸಿಗುತ್ತೆ ಜಿಯೋ ಲ್ಯಾಪ್ಟಾಪ್
ಒಂದೊಮ್ಮೆ ನೀವು ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಅಂತಾ ಅಂದುಕೊಂಡಿದ್ರೆ ಆರ್ಬಿಐನಿಂದ ಅನುಮೋದನೆ ಪಡೆದಿರುವ ಕ್ರಿಡಿಟ್ ಬ್ಯೂರೋಗಳ ಮೂಲಕವೇ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಉತ್ತಮವಾದ ವಿಧಾನ. ಮಾತ್ರವಲ್ಲ ನಿಮಗೆ ಯಾವುದೇ ರೀತಿಯಲ್ಲಿಯೂ ಮೋಸ ಆಗುವ ಸಾಧ್ಯತೆ ತೀರಾ ಕಡಿಮೆ.
Google search terms can empty your bank account