ಅಮೆಜಾನ್ ಬಿಗ್ ಸೇಲ್ : ಕೇವಲ 14,449 ರೂಪಾಯಿಗೆ ಸಿಗುತ್ತೆ ಜಿಯೋ ಲ್ಯಾಪ್‌ಟಾಪ್‌

ಅಮೆಜಾನ್‌ ಇ- ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಜಿಯೋಬುಕ್‌ ಲ್ಯಾಪ್‌ಟಾಪ್‌  (Jio Laptop) ಗಳ ಮೇಲೆ ಬಾರೀ ರಿಯಾಯಿತಿ ಘೋಷಣೆ ಮಾಡಿದೆ. ಕೇವಲ 14,999 ರೂಗಳಲ್ಲಿ ಲ್ಯಾಪ್‌ಟಾಪ್‌ ಖರೀದಿಸಬಹುದಾಗಿದೆ.

ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಸ್ಮಾರ್ಟ್‌ ಪೋನ್‌, ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಬಾರೀ ಡಿಸ್ಕೌಂಟ್‌ ಘೋಷಣೆ ಮಾಡಿದೆ. ಅದ್ರಲ್ಲೂ ಅಮೆಜಾನ್‌ ಇ- ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಜಿಯೋಬುಕ್‌ ಲ್ಯಾಪ್‌ಟಾಪ್‌  (Jio Laptop) ಗಳ ಮೇಲೆ ಬಾರೀ ರಿಯಾಯಿತಿ ಘೋಷಣೆ ಮಾಡಿದೆ. ಕೇವಲ 14,999 ರೂಗಳಲ್ಲಿ ಲ್ಯಾಪ್‌ಟಾಪ್‌ ಖರೀದಿಸಬಹುದಾಗಿದೆ.

ರಿಲಯನ್ಸ್‌ ಜಿಯೋ ಕಂಪೆನಿ ಇತ್ತೀಚಿಗಷ್ಟೇ ಜಿಯೋಬುಕ್‌ ಲ್ಯಾಪ್‌ಟಾಪ್‌ (Jio Book Laptop) ಅನ್ನು ಕಳೆದ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿದೆ. ಅಗಸ್ಟ್‌ನಿಂದ ಈ ಲ್ಯಾಪ್‌ಟಾಪ್‌ ಗ್ರಾಹಕರ ಕೈ ಸೇರಿದೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಅಗ್ಗದ ದರದಲ್ಲಿ ಲ್ಯಾಪ್‌ಟಾಪ್‌ ಮಾರಾಟ ಮಾಡುತ್ತಿದೆ.

Jio Laptop for just Rs 14,449 Amazon Great indian festiva 2023
Image Credit to Original Source

ಜಿಯೋಬುಕ್‌ ಲ್ಯಾಪ್‌ಟಾಪ್‌ನ ಮೂಲ ಬೆಲೆ 16,499 ರೂ. ಆದರೆ ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್‌ ಕೇವಲ 14,999 ರೂಗಳಲ್ಲಿ ಲಭ್ಯವಿದೆ. ರಿಲಯನ್ಸ್‌ ಬಿಡುಗಡೆ ಮಾಡಿರುವ ಈ ಜಿಯೋಬುಕ್‌ ಲ್ಯಾಪ್‌ಟಾಪ್‌ 4G LTE ಬೆಂಬಲವನ್ನು ನೀಡುತ್ತದೆ. ಅಷ್ಟೇ ಅಲ್ಲದೇ jioBook 11.6-ಇಂಚಿನ HD ಆಂಟಿ-ಗ್ಲೇರ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೇ Mediatek MT 8788 Octa Core/2.0 GHz/ ARM V8-A 64-ಬಿಟ್, 4GB RAM ಮತ್ತು 64GB ಸ್ಟೋರೇಜ್ ಮೂಲಕ ಚಾಲಿತವಾಗಿದೆ.

ಇದನ್ನೂ ಓದಿ : ಕೇವಲ 8 ಸಾವಿರಕ್ಕೆ 5G ಮೊಬೈಲ್‌, ಜೊತೆಗೆ 50MP ಕ್ಯಾಮೆರಾ : ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌

ಇನ್ನು ಕಂಪನಿಯು ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ ಬಳಕೆದಾರರಿಗೆ 256GB ವರೆಗೆ ವಿಸ್ತರಿಸಬಹುದಾದ ಸಂಗ್ರಹಣೆಯನ್ನು ನೀಡುತ್ತದೆ. ಜೊತೆಗೆ ಸ್ಟೀರಿಯೋ ಸ್ಪೀಕರ್‌ ಇನ್ಫಿನಿಟಿ ಕೀಬೋರ್ಡ್ ಮತ್ತು ದೊಡ್ಡ ಟಚ್‌ಪ್ಯಾಡ್ ಅನ್ನು ಲ್ಯಾಪ್‌ ಟಾಪ್‌ ಒಳಗೊಂಡಿದೆ. ಜೊತೆಗೆ JioBook ಇಂಟರ್‌ಕನೆಕ್ಟೆಡ್ 4G SIM ಕಾರ್ಡ್ ಹೊಂದಿದೆ.

Jio Laptop for just Rs 14,449 Amazon Great indian festiva 2023
Image credit to Original Source

ಲ್ಯಾಪ್‌ಟಾಪ್‌ನಲ್ಲಿಯೇ ಜಿಯೋ ಸಿಎಮ್‌ ಬಳಕೆ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹೈಸ್ಪೀಡ್‌ ಇಂಟರ್‌ನೆಟ್‌ ಸೌಲಭ್ಯವನ್ನು ಪಡೆಯಬಹುದಾಗಿದೆ. ಗ್ರಾಹಕರು ಜಿಯೋ ವೆಬ್‌ಸೈಟ್‌ ಅಥವಾ ಮೈ ಜಿಯೋ ಅಪ್ಲಿಕೇಶನ್‌ನ ಮೂಲಕವೂ ಸಿಮ್‌ ಕಾರ್ಡ್‌ಅನ್ನ ಆಕ್ಟಿವೇಟ್‌ ಮಾಡಬಹುದಾಗಿದೆ.

ಇನ್ನು ಜಿಯೋಬುಕ್‌ ಲ್ಯಾಪ್‌ಟಾಪ್‌ ಡ್ಯುಯಲ್‌ -ಬ್ಯಾಂಡ್‌ Wi-Fi (2.4GHz ಮತ್ತು 5GHz) ಬೆಂಬಲವನ್ನು ಒಳಗೊಂಡಿದೆ. ಲ್ಯಾಪ್‌ಟಾಪ್ ಜಿಯೋ ಓಎಸ್ ಸಪೋರ್ಟ್‌ ಮಾಡುತ್ತದೆ. JioOS 75 ಶಾರ್ಟ್‌ಕಟ್‌ಗಳು, ಸ್ಥಳೀಯ ಅಪ್ಲಿಕೇಶನ್‌ಗಳಿಗೆ ಬೆಂಬಲ ನೀಡುತ್ತದೆ. ಇನ್ನು ಲ್ಯಾಪ್‌ಟಾಪ್ 8+ ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ : 8GB Ram 64MP ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ OPPO F21 Pro

ಜಿಯೋ ಲ್ಯಾಪ್‌ಟಾಪ್ ರಿಲಯನ್ಸ್‌ ಜಿಯೋ ಪರಿಚಯಿಸಿರುವ ಮೊದಲ ಲ್ಯಾಪ್‌ಆಪ್‌ ಇದಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿಯೇ ಈ ಲ್ಯಾಪ್‌ಟಾಪ್ ಅನ್ನು ಸಿದ್ದಪಡಿಸಲಾಗಿದೆ ಎಂದು ಜಿಯೋ ಹೇಳಿಕೊಂಡಿದೆ. ಇನ್ನು ಕಲಿಕೆಗಾಗಿ ಈ ಲ್ಯಾಪ್‌ಟಾಪ್‌ ಹೆಚ್ಚು ಸೂಕ್ತ ಎನಿಸಿಕೊಂಡಿದೆ.

ಜಿಯೋ ಕಂಪನಿ ಪರಿಚಯಿಸಿದ ಲ್ಯಾಪ್‌ಟಾಪ್ ಬಿಡುಗಡೆ ಆದ ಸಂದರ್ಭದಲ್ಲಿ ಲ್ಯಾಪ್‌ ಟಾಪ್‌ ಖರೀದಿ ಮಾಡುವ ಗ್ರಾಹಕರಿಗೆ 1500 ರೂ. ಹೆಚ್ಚುವರಿ ಕೊಡುಗೆಗಳನ್ನು ನೀಡಲಾಗುತ್ತಿತ್ತು. ಅಲ್ಲದೇ ಲ್ಯಾಪ್‌ಟಾಪ್‌ನ ಜೊತೆಗೆ ಉಚಿತ ಬ್ಯಾಕ್‌ಪ್ಯಾಕ್‌, ಕ್ವಿಕ್‌ಹೀಲ್‌ ಆಂಟಿವೈರಸ್‌ ಸೆಕ್ಯುರಿಟಿ, ಡಿಜಿಬಾಕ್ಸ್‌ ಲಾಗ್‌ಇನ್‌ ಸೇರಿದಂತೆ ಹಲವು ಆಫರ್‌ಗಳನ್ನು ನೀಡುತ್ತಿದೆ.

Jio Laptop for just Rs 14,449 Amazon Great indian festiva 2023
Image Credit to Original Source

ಜಿಯೋ ಕಂಪೆನಿ ಇದೀಗ ಭಾರತದ ಟೆಲಿಕಾಂ ಇಂಡಸ್ಟ್ರೀಯಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು, ಭಾರತ ನಂ. ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ. ಜಿಯೋ ನೆಟ್‌ವರ್ಕ್‌ ಪರಿಚಯಿಸಿದ ಬೆನ್ನಲ್ಲೇ ಭಾರತದಲ್ಲಿ ಮೊಬೈಲ್‌ ಕರೆಗಳ ಬೆಲೆ ಹಾಗೂ ಇಂಟರ್‌ನೆಟ್‌ ಬೆಲೆಯಲ್ಲಿ ಬಾರೀ ಇಳಿಕೆಯಾಗಿತ್ತು.

ಇದನ್ನೂ ಓದಿ : ಆ್ಯಪಲ್ ಐಪೋನ್‌ 11 ಪ್ರೋ Max ಬೆಲೆಯಲ್ಲಿ ಬಾರೀ ಇಳಿಕೆ : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸುವರ್ಣಾವಕಾಶ

ಅಷ್ಟೇ ಅಲ್ಲದೇ ಗೂಗಲ್‌ ಸಹಭಾಗಿತ್ವದಲ್ಲಿ ಮೊಬೈಲ್‌ ಪೋನ್‌ ಗಳನ್ನು ಕೂಡ ಜಿಯೋ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಜಿಯೋ ಲ್ಯಾಪ್‌ಟಾಪ್‌ ಅನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಅಮೆಜಾನ್‌ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಅಮೆಜಾನ್‌ ಆಫರ್‌ ಮಾತ್ರವಲ್ಲದೇ ಇತರ ಹಲವು ಸೌಲಭ್ಯಗಳಿವೆ.

ಜಿಯೋಬುಕ್‌ ಲ್ಯಾಪ್‌ಟಾಪ್‌ ಖರೀದಿಸುವ ಗ್ರಾಹಕರು ವಿವಿಧ ಬ್ಯಾಂಕಿನ ಕ್ರಿಡಿಟ್‌ ಕಾರ್ಡ್‌ ಬಳಕೆ ಮಾಡುವ ಮೂಲಕ ಹೆಚ್ಚುವರಿಯಾಗಿ 1,500 ರೂ. ಇಳಿಕೆ ಮಾಡಬಹುದಾಗಿದೆ. ಜಿಯೋ ಲ್ಯಾಪ್‌ಟಾಪ್‌ ಮೇಲೆ ವಿವಿಧ ಬ್ಯಾಂಕುಗಳು ಆಫರ್‌ ನೀಡಿದ್ದು, ಇಎಂಐ ಮೂಲಕವೂ ಖರೀದಿ ಮಾಡಲು ಅವಕಾಶವಿದೆ.

Jio Laptop for just Rs 14,449 Amazon Great indian festiva 2023

Comments are closed.