ಸೋಮವಾರ, ಏಪ್ರಿಲ್ 28, 2025
HomeSportsCricketICC World Cup 2023 : ಅಫ್ಘಾನಿಸ್ತಾನ ಗೆಲುವಿನ ಹಿಂದಿದೆ ಟೀಂ ಇಂಡಿಯಾ ಆಟಗಾರ‌ ಅಜಯ್...

ICC World Cup 2023 : ಅಫ್ಘಾನಿಸ್ತಾನ ಗೆಲುವಿನ ಹಿಂದಿದೆ ಟೀಂ ಇಂಡಿಯಾ ಆಟಗಾರ‌ ಅಜಯ್ ಜಡೇಜಾ ಚಾಣಾಕ್ಷತೆ !

- Advertisement -

ಮುಂಬೈ : ಏಕದಿನ ವಿಶ್ವಕಪ್‌ 2023 (ICC World Cup 2023) ರಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನದ (Afghanistan vs pakistan) ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಮುಂದಿನ ಪಂದ್ಯಗಳಲ್ಲಿಯೇ ಇದೇ ಆಟವನ್ನು ಮುಂದುವರಿಸಿದ್ರೆ ಅಫ್ಘಾನಿಸ್ತಾನ ತಂಡ ಸೆಮಿಫೈನಲ್‌ಗೆ ಎಂಟ್ರಿ ಕೊಡಬಹುದು. ಕ್ರಿಕೆಟ್‌ ಶಿಶುಗಳ ಈ ಸಾಧನೆಯ ಹಿಂದೆ ಭಾರತೀಯ ಆಟಗಾರ ಅಜೆಯ್‌ ಜಡೇಜಾ (Ajay Jadeja)ಚಾಣಾಕ್ಷತೆ ಅಡಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ 2 ಪಂದ್ಯಗಳನ್ನು ಗೆದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ ವಿಶ್ವಕಪ್‌ ಅಂಕಪಟ್ಟಿಯಲ್ಲಿ 6 ಸ್ಥಾನದಲ್ಲಿದೆ. ಆದ್ರೆ ಅಂಕಗಳನ್ನು ನೋಡಿದ್ರೆ ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳ ಜೊತೆಗೂ ಸಮಾನ ಅಂಕಗಳನ್ನು ಹೊಂದಿದೆ.

ICC World Cup 2023 Team India player Ajay Jadeja  smartness behind Afghanistan victory
Image Credit : ICC

ಅಫ್ಘಾನಿಸ್ತಾನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ದ 6 ವಿಕೆಟ್‌ಗಳ ಅಂತರದಿಂದ ಸೋಲನ್ನು ಕಂಡಿತ್ತು. ನಂತರ ಭಾರತ ವಿರುದ್ದ ಪಂದ್ಯ ಆಡಿರುವ ಅಫ್ಘಾನಿಸ್ತಾನ 8 ವಿಕೆಟ್‌ಗಳ ಅಂತರದ ಸೋಲನ್ನು ಕಂಡಿದೆ. ಆದರೆ ಇಂಗ್ಲೆಂಡ್‌ ತಂಡದ ವಿರುದ್ದದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಇಂಗ್ಲೆಂಡ್‌ ತಂಡಕ್ಕೆ 69 ರನ್‌ಗಳ ಅಂತರದಿಂದ ಗೆದ್ದು ಸೋಲಿನ ರುಚಿ ತೋರಿಸಿದೆ.

ICC World Cup 2023 Team India player Ajay Jadeja  smartness behind Afghanistan victory
Image Credit : ICC

ಆದರೆ ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 149 ರನ್‌ ಗಳ ಅಂತರದಿಂದ ಸೋಲನ್ನು ಕಂಡಿತ್ತು. ಆದರೆ ಇದೀಗ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ನಡೆದ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಜಯಿಸುವ ಮೂಲಕ ಕ್ರಿಕೆಟ್‌ ಜಗತ್ತು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಇದನ್ನೂ ಓದಿ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ ಸ್ಟೋರಿ

ಇತ್ತೀಚಿನ ವರ್ಷಗಳ ಅಫ್ಘಾನಿಸ್ತಾನ ತಂಡ ಉತ್ತಮ ಆಟದ ಪ್ರದರ್ಶನ ನೀಡುತ್ತಿದೆ. ಅದ್ರಲ್ಲೂ ಅಫ್ಘಾನಿಸ್ತಾನ ತಂಡಕ್ಕೆ ಭಾರತದ ಮಾಜಿ ನಾಯಕ ಅಜೆಯ್‌ ಜಡೇಜಾ ಮೆಂಟರ್‌ ಆಗಿ ಸೇರ್ಪಡೆಗೊಂಡಿರುವು ತಂಡಕ್ಕೆ ಆನೆ ಬಲಬಂದಂತಾಗಿದೆ. ಅಜೆಯ್‌ ಜಡೇಜಾ ಅವರ ಮಾರ್ಗದರ್ಶನದಲ್ಲಿ ಅಫ್ಘಾನಿಸ್ತಾನ ಆಟಗಾರರು ಭರ್ಜರಿ ಆಟದ ಪ್ರದರ್ಶನ ನೀಡುತ್ತಿದ್ದಾರೆ.

ICC World Cup 2023 Team India player Ajay Jadeja  smartness behind Afghanistan victory
Image Credit : ICC

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅಫ್ಘಾನಿಸ್ತಾನ ತಂಡದ ಮೆಂಟರ್‌ ಆಗಿ ಆಯ್ಕೆಯಾಗಿರುವ ಅಜೆಯ್‌ ಜಡೇಜ್‌ ವಿಶ್ವಕಪ್‌ ಪಂದ್ಯಾವಳಿಗೆ ತಂಡವನ್ನು ಸಜ್ಜುಗೊಳಿಸಿದ್ದಾರೆ. ಭಾರತ ಪಿಚ್, ಎದುರಾಳಿಗಳನ್ನು ಕಟ್ಟಿಹಾಕುವ ಸೂತ್ರ. ಒಗ್ಗಟ್ಟಿನ ಮಂತ್ರ ಸೇರಿದಂತೆ ಹಲವು ರೀತಿಯಲ್ಲಿಯೂ ತಮ್ಮ ಅನುಭವವನ್ನು ಆಟಗಾರರಿಗೆ ಪಾಠ ಮಾಡಿದ್ದಾರೆ.

ಇದನ್ನೂ ಓದಿ : IND Vs BAN : ಸಂಕಷ್ಟಕ್ಕೆ ಸಿಲುಕಿದ ರೋಹಿತ್‌ ಶರ್ಮಾ : ಭಾರತ ತಂಡ ನಾಯಕನ ವಿರುದ್ದ ದಾಖಲಾಯ್ತು 3 ಪ್ರಕರಣ

ಅಜೇಯ್‌ ಜಡೇಜಾ ಟೀಂ ಇಂಡಿಯಾದ ಸರ್ವಶ್ರೇಷ್ಟ ಆಟಗಾರ. ನಾಯಕನಾಗಿಯೂ ತಂಡವನ್ನು ಮುನ್ನೆಡೆಸಿದ್ದಾರೆ. 1992 ರಿಂದ 20೦೦ರ ವರೆಗೆ ಭಾತ ತಂಡವನ್ನು ಪ್ರತಿನಿಧಿಸಿದ್ದಾರೆ. ಭಾರತ ತಂಡದ ಪರ ಅವರು 15 ಟೆಸ್ಟ್‌, 196 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಮ್ಯಾಚ್‌ ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ ಅಜಯ್‌ ಜಡೇಜಾ ಅವರನ್ನು ಬಿಸಿಸಿಐ ಕ್ರಿಕೆಟ್‌ನಿಂದ ಬ್ಯಾನ್‌ ಮಾಡಿತ್ತು.

ICC World Cup 2023 Team India player Ajay Jadeja  smartness behind Afghanistan victory
Image Credit : ICC

ಅಜೆಯ್‌ ಜಡೇಜಾ ಅವರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ ನಂತರ ನಿಷೇಧದ ಅವಧಿಯನ್ನು ಐದು ವರ್ಷಕ್ಕೆ ಇಳಿಕೆ ಮಾಡಿತ್ತು. ಆದರೆ ದೆಹಲಿ ನ್ಯಾಯಾಲಯವು 2003ರ ಜನವರಿ 27 ರಂದು ನಿಷೇಧವನ್ನು ತೆಗೆದು ಹಾಕಿತ್ತು. ಆದರೆ ದುರದೃಷ್ಟವಶಾತ್‌ ಅವರಿಗೆ ಮತ್ತೆಂದೂ ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ : ನ್ಯೂಜಿಲೆಂಡ್‌ ವಿರುದ್ದ ಭಾರತ ಗೆಲ್ಲಿಸಿದ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ವಿರುದ್ದ ಅಭಿಮಾನಿಗಳು ಗರಂ

ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ನಂತರದಲ್ಲಿ ಅಜೆಯ್‌ ಜಡೇಜಾ ಅವರು 2015 ರಲ್ಲಿ ದೆಹಲಿ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಕೆಲಸ ಮಾಡಿದ್ದರು. ಅಲ್ಲದೇ ಕ್ರಿಕೆಟ್‌ ವಿಶ್ಲೇಷಕರಾಗಿಯೂ ಜಡೇಜಾ ಕೆಲಸ ಮಾಡಿದ್ದರು. ಸದ್ಯ ಅಜೆಯ್‌ ಜಡೇಜಾ ಅವರು ಅಫ್ಘಾನಿಸ್ತಾನ ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ICC World Cup 2023 Team India player Ajay Jadeja  smartness behind Afghanistan victory
Image Credit : ICC

ಅಜೆಯ್‌ ಜಡೇಜಾ ಅವರು 15 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 24 ಇನ್ನಿಂಗ್ಸ್‌ಗಳಲ್ಲಿ ಅವರು 576 ರನ್‌ ಬಾರಿಸಿದ್ದಾರೆ. ಟೆಸ್ಟ್‌ ಪಂದ್ಯದಲ್ಲಿ ಅತ್ಯಧಿಕ 96 ರನ್‌ ಬಾರಿಸಿದ್ದು, 4 ಅರ್ಧಶತಕ ಸಿಡಿಸಿದ್ದಾರೆ. ಇನ್ನು 196 ಏಕದಿನ ಪಂದ್ಯಗಳ ಪೈಕಿ 179 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿದ್ದು 35 ಬಾರಿ ಅಜೇಯರಾಗಿ ಉಳಿದಿದ್ದಾರೆ. ಒಟ್ಟು 5358 ರನ್‌ ಗಳಿಸಿದ್ದು, ಅತ್ಯಧಿಕ 119ರನ್‌ ಗಳಿಸಿದ್ದಾರೆ. 1 ಶತಕ ಸಿಡಿಸಿದ್ದು, 30 ಅರ್ಧಶತಕ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ ಮಾಡಿರುವ ಜಡೇಜಾ 20 ವಿಕೆಟ್‌ ಕಬಳಿಸಿದ್ದಾರೆ.

 

ICC World Cup 2023 Team India player Ajay Jadeja smartness behind Afghanistan victory

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular