IND vs BAN : ಸಂಕಷ್ಟಕ್ಕೆ ಸಿಲುಕಿದ ರೋಹಿತ್‌ ಶರ್ಮಾ : ಭಾರತ ತಂಡ ನಾಯಕನ ವಿರುದ್ದ ದಾಖಲಾಯ್ತು 3 ಪ್ರಕರಣ

ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma)ಪಂದ್ಯಕ್ಕೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ರೋಹಿತ್‌ ಶರ್ಮಾ ವಿರುದ್ದ 3 ಪ್ರಕರಣಗಳು ದಾಖಲಾಗಿವೆ.

ಭಾರತ ತಂಡ ವಿಶ್ವಕಪ್‌ನಲ್ಲಿ ತನ್ನ 4ನೇ ಪಂದ್ಯವನ್ನು ಬಾಂಗ್ಲಾದೇಶ ತಂಡದ ವಿರುದ್ದ ಆಡಲಿದೆ. ಈಗಾಗಲೇ ಟೀಂ ಇಂಡಿಯಾ ಕಠಿಣ ಅಭ್ಯಾಸವನ್ನು ನಡೆಸಿದೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma)ಪಂದ್ಯಕ್ಕೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ರೋಹಿತ್‌ ಶರ್ಮಾ ವಿರುದ್ದ 3 ಪ್ರಕರಣಗಳು ದಾಖಲಾಗಿವೆ.

ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ರೋಹಿತ್‌ ಶರ್ಮಾ ನಂತರದ ಪಂದ್ಯಗಳಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾ ತಂಡದ ವಿರುದ್ದವೂ ತಮ್ಮ ಆರ್ಭಟ ಮುಂದುವರಿಸುವ ನಿರೀಕ್ಷೆಯಿದೆ. ಆದರೆ ಟೀಂ ಇಂಡಿಯಾ ನಾಯಕನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

World Cup 2023 india vs Bangladesh 3 cases registered against Team India captain Rohit Sharma for driving a Lamborghini car
Image Credit to Original Source

ಭಾರತ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯದ ನಂತರದಲ್ಲಿ ಅವರು ಲ್ಯಾಂಬೋರ್ಗಿನಿ ಕಾರು ಚಲಾಯಿಸಿದ್ದೇ ಇದೀಗ ಸಂಕಷ್ಟ ತಂದೊಡ್ಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ನಂತರ ರೋಹಿತ್‌ ಶರ್ಮ ಹೆಲಿಕಾಫ್ಟರ್‌ ಮೂಲಕ ಅಹಮದಾಬಾದ್‌ನಿಂದ ಮುಂಬೈಗೆ ತೆರಳಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ವಾಡಾ ನಿಷೇಧದ ಭೀತಿ !

ಎರಡು ದಿನಗಳನ್ನು ತನ್ನ ಕುಟುಂಬದವರ ಜೊತೆಗೆ ಕಳೆದಿದ್ದ ರೋಹಿತ್‌ ಶರ್ಮಾ ಮುಂಬೈನಿಂದ ಪುಣೆಗೆ ಪ್ರಯಾಣಿಸುವ ವೇಳೆಯಲ್ಲಿ ಅವರು ನೀಲಿಬಣ್ಣದ ಲಂಬೋರ್ಗಿನಿ ಕಾರನ್ನು ಚಲಾಯಿಸಿದ್ದಾರೆ. ಆದರೆ ಅತೀ ವೇಗದಲ್ಲಿ ಚಾಲನೆ ಮಾಡಿದ್ದಕ್ಕೆ ಪೊಲೀಸರು ಇದೀಗ ರೋಹಿತ್‌ ಶರ್ಮಾ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ರೋಹಿತ್ ಶರ್ಮಾ ಅವರು 200 ಕಿಮೀ/ಗಂಟೆಗಿಂತ ಹೆಚ್ಚು ವೇಗದಲ್ಲಿ ಕಾರು ಚಾಲನೆ ಮಾಡಿದ್ದಾರೆ. ಅಲ್ಲದೇ ಕೆಲವೊಂದು ಕಡೆಗಳಲ್ಲಿ ವೇಗವು ಗಂಟೆಗೆ 215 ಕಿಮೀಗೆ ತಲುಪಿದ್ದರು. ಇದೀಗ ವೇಗದ ಚಾಲನೆಯ ಹಿನ್ನೆಲೆಯಲ್ಲಿ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿದ್ದು, ರೋಹಿತ್‌ ಶರ್ಮಾ ಅವರು ಕಾರಿನಲ್ಲಿ ಅತೀ ವೇಗದಲ್ಲಿ ಚಾಲನೆ ಮಾಡುವುದು ಸೂಕ್ತವಲ್ಲ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ವಿಶ್ವಕಪ್‌ನಲ್ಲಿ ಭಾಗಿಯಾಗಿರುವ ಅವರು ಕಾರಿನ ಬದಲು ತಂಡದ ಬಸ್ಸಿನ ಜೊತೆಗೆ ಪ್ರಯಾಣಿಸಬೇಕು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಈಗಾಗಲೇ ಟೀಂ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ದ ಸ್ಪೋಟಕ ಆಟ ಪ್ರದರ್ಶಿಸಿದ್ದು, ಅಪ್ಘಾನಿಸ್ತಾನದ ವಿರುದ್ದ ಶತಕ ಸಿಡಿಸಿದ್ದರುWorld Cup 2023 india vs Bangladesh 3 cases registered against Team India captain Rohit Sharma for driving a Lamborghini car

ಇನ್ನು ಪುಣೆಯ ಪಿಚ್‌ ಬ್ಯಾಟಿಂಗ್‌ ಗೆ ಹೆಚ್ಚು ಸಹಕಾರಿಯಾಗಿದೆ. ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ನಾಳೆ ಆರ್ಭಟಿಸುವ ಸಾಧ್ಯತೆಯಿದೆ. ಒಂದೊಮ್ಮೆ ಟೀಂ ಇಂಡಿಯಾ ಈ ಹಿಂದಿನ ಸಂಘಟನಾತ್ಮಕ ಆಟವನ್ನು ಆಡಿದ್ರೆ ಖಂಡಿತವಾಗಿಯೂ ಬಾಂಗ್ಲಾ ವಿರುದ್ದ ಸುಲಭ ಗೆಲುವು ದಾಖಲಿಸಲಿದೆ.

ಇದನ್ನೂ ಓದಿ : ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ದ ಐತಿಹಾಸಿಕ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ

ಭಾರತ ತಂಡ ಸಂಭಾವ್ಯ XI :
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್) ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ ಮೊಹಮ್ಮದ್ ಶಮಿ/ ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ ತಂಡ ಸಂಭಾವ್ಯ XI:
ಲಿಟ್ಟನ್ ದಾಸ್, ತಂಝಿದ್ ತಮೀಮ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶಿಫಿಕುರ್ ರಹೀಮ್ (ವಿಕೆಟ್‌ ಕೀಪರ್), ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ

ವಿಶ್ವಕಪ್‌ 2023 ತಂಡಗಳು:

ಭಾರತ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ , ರವಿಚಂದ್ರನ್ ಅಶ್ವಿನ್‌

ಬಾಂಗ್ಲಾದೇಶ
ಲಿಟ್ಟನ್ ದಾಸ್, ತಂಝಿದ್ ಹಸನ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್‌ ಕೀಪರ್), ತೌಹಿದ್ ಹೃದಯೋಯ್, ಮಹ್ಮುದುಲ್ಲಾ, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೊರಿಫುಲ್ ಹಸನ್ ಇಸ್ಲಾಂ, ತಂಝೀಮ್ ಹಸನ್ , ಮಹೇದಿ ಹಸನ್, ನಸುಮ್ ಅಹಮದ್

World Cup 2023 india vs Bangladesh : 3 cases registered against Team India captain Rohit Sharma for driving a Lamborghini car

Comments are closed.