ಸೋಮವಾರ, ಏಪ್ರಿಲ್ 28, 2025
Homehoroscopeದಿನಭವಿಷ್ಯ 25 ಅಕ್ಟೋಬರ್‌ 2023 : ವೃದ್ದಿಯೋಗದಿಂದ ಈ ರಾಶಿಯವರಿಗೆ ಅನುಕೂಲ

ದಿನಭವಿಷ್ಯ 25 ಅಕ್ಟೋಬರ್‌ 2023 : ವೃದ್ದಿಯೋಗದಿಂದ ಈ ರಾಶಿಯವರಿಗೆ ಅನುಕೂಲ

- Advertisement -

Horoscope Today : ಇಂದು ಅಕ್ಟೋಬರ್‌ 25, 2023  ಬುಧವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶತಭಿಷಾ ನಕ್ಷತ್ರವು ದ್ವಾದಶರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ವೃದ್ದಿಯೋಗದಿಂದ ಮಿಥುನ, ಕರ್ಕಾಟಕ ರಾಶಿಯವರಿಗೆ ಅದೃಷ್ಟ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12  ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ನಿಮ್ಮ ಪಾಲಿಗೆ ಇಂದು ಮಂಗಳಕರವಾದ ದಿನ. ಹಣಕಾಸಿನ ವಿಚಾರದಲ್ಲಿ ಸಕರಾತ್ಮಕ ಫಲಿತಾಂಶವನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕೆಲಸದ ಸ್ಥಳದಲ್ಲಿ ಬೆಂಬಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಚೇತರಿಕೆ ಕಂಡುಬರಲಿದೆ.

ವೃಷಭರಾಶಿ ದಿನಭವಿಷ್ಯ
ನೀವು ತುಂಬಾ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಆರೋಗ್ಯವು ಕ್ಷೀಣಿಸುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳು ಅಪೂರ್ಣವಾಗುವ ಸಂಭವ. ಕೆಲಸದಲ್ಲಿ ಉತ್ಸಾಹದ ಕೊರತೆಯಿಂದ ಹಿಂದಿನ ಯೋಜನೆಗಳನ್ನು ಮುಂದೂಡಿಕೆ ಮಾಡಬೇಕಾಗುತ್ತದೆ. ಹಣಕಾಸಿನ ಸಂಬಂಧಗಳು ಹಾಳಾಗುವ ಸಾಧ್ಯತೆಯಿದೆ.

ಮಿಥುನರಾಶಿ ದಿನಭವಿಷ್ಯ
ನಿಮ್ಮ ಜೀವನದಲ್ಲಿ ಇಂದು ಅನಿರೀಕ್ಷಿತ ಘಟನೆಗಳು ಸಂಭವಿಸಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ನಿಮ್ಮ ಗೌರವ ವೃದ್ದಿಸಲಿದೆ. ಬೇರೆಯವರ ಕಾರಣಕ್ಕೆ ನೀವು ತೊಂದರೆಯನ್ನು ಅನುಭವಿಸುವಿರಿ. ಭವಿಷ್ಯದಲ್ಲಿ ಆರ್ಥಿಕ ಲಾಭವನ್ನು ಪಡೆಯುವಿರಿ. ಹಿಂಜರಿಕೆ ಇಲ್ಲದೇ ಹೂಡಿಕೆ ಮಾಡುವುದು ಉತ್ತಮ.

ಕರ್ಕಾಟಕರಾಶಿ ದಿನಭವಿಷ್ಯ
ಭಾವನಾತ್ಮಕವಾಗಿ ನೀವು ಗೊಂದಲಕ್ಕೆ ಒಳಗಾಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಯಾವುದೇ ತೊಂದರೆ ಇಲ್ಲ. ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ. ಕುಟುಂಬದ ಸದಸ್ಯರ ಜೊತೆಗೆ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಎದುರಾಗಲಿದೆ. ಹಣಕಾಸಿನ ಲಾಭವನ್ನು ಕಳೆದುಕೊಳ್ಳುವಿರಿ.

ಇದನ್ನೂ ಓದಿ : ಬೆಂಗಳೂರಿನಲ್ಲಿ 3 ದಿನ ವಿದ್ಯುತ್‌ ಕಡಿತ : ಯಾವ ಪ್ರದೇಶಗಳಲ್ಲಿ, ಯಾವ ದಿನ ಪವರ್‌ ಕಟ್‌, ಇಲ್ಲಿದೆ ಸಂಪೂರ್ಣ ಮಾಹಿತಿ

ಸಿಂಹರಾಶಿ ದಿನಭವಿಷ್ಯ
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಪೂರ್ವಜರ ಆಸ್ತಿ ವಿಚಾರದಲ್ಲಿ ತೊಡಕುಗಳು ಉಂಟಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿ ಇರುತ್ತೀರಿ. ಹೊಸ ಹೂಡಿಕೆಗಳಿಂದ ಲಾಭ.

Horoscope Today October 25 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ನಿಧಾನ ಕೆಲಸ ಕಾರ್ಯಗಳಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಯಾರೊಂದಿಗೂ ನೀವು ಜಗಳಕ್ಕೆ ಇಳಿಯಬೇಡಿ. ತಪ್ಪು ನಿರ್ಧಾರಗಳು ನಿಮಗೆ ಹಾನಿಯನ್ನು ಉಂಟು ಮಾಡುವ ಸಾಧ್ಯತೆಯಿದ. ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಉದಾಸೀನತೆಯಿಂದ ಹೊರಬರುವುದು ಉತ್ತಮ.

ತುಲಾರಾಶಿ ದಿನಭವಿಷ್ಯ
ಹೊಸ ವ್ಯವಹಾರಗಳಲ್ಲಿ ಹೂಡಿಕೆಗೆ ಮನಸ್ಸು ಮಾಡುವಿರಿ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸ್ನೇಹಿತರು ಅಥವಾ ಸಂಬಂಧಿಕರಿಂದ ಸಮಸ್ಯೆ ಸಾಧ್ಯತೆ. ನಿಮ್ಮ ಹೃದಯದ ರಹಸ್ಯವನ್ನು ಯಾರೊಂದಿಗೂ ಹೇಳಬೇಡಿ. ಸಂಗಾತಿಯಿಂದ ಸಂತಸ. ಮಂಗಳಕರವಾದ ದಿನ.

ಇದನ್ನೂ ಓದಿ : ಗೂಗಲ್‌ನಲ್ಲಿ ಈ ವಿಚಾರ ಹುಡುಕಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ !

ವೃಶ್ಚಿಕರಾಶಿ ದಿನಭವಿಷ್ಯ
ಆಧ್ಯಾತ್ಮಿಕವಾಗಿ ತುಂಬಾ ಗಟ್ಟಿಯಾಗುತ್ತೀರಿ. ಇತರ ದಿನಗಳಿಗೆ ಹೋಲಿಕೆ ಮಾಡಿದ್ರೆ ಇಂದು ಕೆಲಸ ಕಾರ್ಯಗಳು ವಿಳಂಭವಾಗಲಿದೆ. ಖರ್ಚು ಹೆಚ್ಚಾದಂತೆ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುತ್ತದೆ. ದಾನವನ್ನು ಮಾಡುವಿರಿ. ಇದೇ ಕಾರಣದಿಂದ ನೀವು ಹೆಚ್ಚು ಲಾಭವನ್ನು ಪಡೆಯುತ್ತೀರಿ.

ಧನಸ್ಸುರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಶುಭದಾಯಕ. ಕೆಲವು ಸಂಬಂಧಗಳ ಜೊತೆಗೆ ನೀವು ಜಾಗರೂಕರಾಗಿ ಇರಬೇಕು. ಸಾಮಾಜಿಕ ಕ್ಷೇತ್ರಗಳಲ್ಲಿ ಇಂದು ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಪ್ರೇಮ ಜೀವನವು ಸಂತಸದಿಂದ ಕೂಡಿರಲಿದೆ. ದೂರ ಪ್ರಯಾಣವು ಶುಭದಾಯಕವಾಗಿರಲಿದೆ.

ಮಕರರಾಶಿ ದಿನಭವಿಷ್ಯ
ಆರ್ಥಿಕವಾಗಿ ಲಾಭ. ಪ್ರತಿಕೂಲ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಯೊಂದು ದೈನಂದಿನ ಜೀವನದ ಮೇಲೆ ಪರಿಣಾಮವನ್ನು ಬೀರಲಿದ. ನಿಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಡಿಮೆಯಾಗಲಿದೆ.

ಇದನ್ನೂ ಓದಿ:  ದಸರಾ ಶಾಲೆ ರಜೆ ವಿಸ್ತರಣೆಯಿಲ್ಲ : ಅಕ್ಟೋಬರ್‌ 25 ರಿಂದ ಕರ್ನಾಟಕದಲ್ಲಿ ಶಾಲೆಗಳು ಪುನರಾರಂಭ

ಕುಂಭರಾಶಿ ದಿನಭವಿಷ್ಯ
ಉದ್ಯೋಗಿಗಳು ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗೌರವ ಪಡೆಯಲಿದ್ದಾರೆ. ಕುಟುಂಬದ ಸದಸ್ಯರ ಬಗ್ಗೆ ಭಿನ್ನಾಭಿಪ್ರಾಯ ಮೂಡಲಿದೆ. ಬಾಕಿ ಇರುವ ಕೆಲಸ ಕಾರ್ಯಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ. ಆಯಾದಿಂದ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಇತರರನ್ನು ಹೆಚ್ಚು ಅವಲಂಭಿಸಬೇಡಿ.

ಮೀನರಾಶಿ ದಿನಭವಿಷ್ಯ
ಅತೀಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆಯಿದೆ. ಮನೆದೇವರ ಪೂಜೆಯಿಂದ ಸಂಕಷ್ಟಗಳು ಪರಿಹಾರ. ದೂರದ ಬಂಧುಗಳ ಭೇಟಿಯಿಂದ ಮಾನಸಿಕವಾದ ನೆಮ್ಮದಿ. ವ್ಯವಹಾರಿಕ ಕ್ಷೇತ್ರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ. ಸಹೋದ್ಯೋಗಿಗಳ ಸಹಕಾರದಿಂದ ಹೆಚ್ಚು ಅನುಕೂಲ.

Horoscope Today October 25 2023 Zordic Sign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular