ನಟ ದರ್ಶನ್‌ ತೂಗುದೀಪ್‌, ಜಗ್ಗೇಶ್‌, ಮುನಿರತ್ನ ಬಂಧನ ಸಾಧ್ಯತೆ ? ಸ್ಯಾಂಡಲ್‌ವುಡ್‌ಗೆ ಹುಲಿ ಉಗುರಿನ ಸಂಕಷ್ಟ

ಸ್ಯಾಂಡಲ್ ವುಡ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa, ನವರಸ ನಾಯಕ ಜಗ್ಗೇಶ್ (Actor Jaggesh) ಹಾಗೂ ನಿರ್ಮಾಪಕ ಮುನಿರತ್ನ (producer Munirathna) ಎದೆಯಲ್ಲೂ ನಡುಕ ಉಂಟಾಗಿದೆ.

ಪ್ರಾಣಿಜನ್ಯವನ್ನು ಅಲಂಕಾರಿಕ ಆಭರಣವಾಗಿ ಧರಿಸಿದ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಕಂಬಿ ಹಿಂದೆ ಸೇರಿದ್ದಾರೆ. ವರ್ತೂರು ಸಂತೋಷ್ ಹುಲಿ ಉಗುರು (Tiger Claw) ಧರಿಸಿದ್ದು ವಿವಾದವಾಗಿ ಅಪರಾಧ ಎಂದಾಗುತ್ತಿದ್ದಂತೆ ಸ್ಯಾಂಡಲ್ ವುಡ್  (sandalwood)ಎದೆಯಲ್ಲಿ ನಡುಕ ಎದುರಾಗಿದೆ. ಅದ್ಯಾಕೆ ಅಂತಿರಾ ಈ ಸ್ಟೋರಿ ಓದಿ.

ಸಮಾಜದಲ್ಲಿ ಏನೇ ಬೆಳವಣಿಗೆಯಾದರೂ ಅದಕ್ಕೂ ಸ್ಯಾಂಡಲ್ ವುಡ್ ಗೂ ಒಂದಿಲ್ಲೊಂದು ಲಿಂಕ್ ಇದ್ದೇ ಇರುತ್ತೆ. ಈಗ ಹುಲಿ ಉಗುರು ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ವಿವಾದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸ್ಯಾಂಡಲ್ ವುಡ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan Thoogudeepa, ನವರಸ ನಾಯಕ ಜಗ್ಗೇಶ್ (Actor Jaggesh) ಹಾಗೂ ನಿರ್ಮಾಪಕ ಮುನಿರತ್ನ (producer Munirathna) ಎದೆಯಲ್ಲೂ ನಡುಕ ಉಂಟಾಗಿದೆ. ವರ್ತೂರು ಸಂತೋಷ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೊದಲು ಚರ್ಚೆಗೆ ಬಂದಿದ್ದೇ ನಟ ದರ್ಶನ್ ಹೆಸರು.

Arrest of actor Darshan Thoogudeepa Jaggesh Munirathna is possible tiger Claw Pendant issues for Sandalwood Actors 
Image Credit to Original Source

ಇದನ್ನೂ ಓದಿ : ದಸರಾ ಹಬ್ಬಕ್ಕೆ ಬ್ಲೂ ಸೀರೆಯಲ್ಲಿ ಸ್ಪೆಶಲ್ ಪೋಟೋಶೂಟ್: ಮತ್ತೊಮ್ಮೆ ಮಿಂಚಿದ ರಾಕಿಂಗ್ ನಟ ಯಶ್, ರಾಧಿಕಾ ಪಂಡಿತ್

ನಟ ದರ್ಶನ್ ಹುಲಿ ಉಗುರು ಧರಿಸಿದ್ದ ಪೋಟೋಗಳು ಅದಾಗಲೇ ಸಾಕಷ್ಟು ಭಾರಿ ವೈರಲ್ ಆಗಿದೆ. ಹೀಗಾಗಿ ನಟ ದರ್ಶನ್ ಆರೇಸ್ಟ್ ಆಗ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ. ಅದರಲ್ಲೂ ನಟ ದರ್ಶನ್ ಅರಣ್ಯ ಇಲಾಖೆ ರಾಯಭಾರಿಯಾಗಿದ್ದವರು. ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕೃಷಿ ಇಲಾಖೆಯ ರಾಯಭಾರಿಯೂ ಆಗಿದ್ದವರು. ಅವರು ಹುಲಿ ಉಗುರು ಧರಿಸಿದ ಪೋಟೋ ಇದೆ.

ಹೀಗಾಗಿ ಅವರ ಮನೆಯನ್ನು ಚೆಕ್ ಮಾಡಬೇಕು. ಅವರ ಮೇಲೂ ಕ್ರಮವಾಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಒಂದು ಹೆಜ್ಜೆ ಮುಂದೇ ಹೋಗಿರೋ ಕೆಲ ಸಂಘಟನೆಯ ಕಾರ್ಯಕರ್ತರು ದೂರು ಕೂಡ ನೀಡಿದ್ದಾರೆ. ಇದರ ಮಧ್ಯೆ ನವರಸ ನಾಯಕ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾಧ್ಯಮ ವೊಂದಕ್ಕೆ ನೀಡಿದ ಸಂದರ್ಶನ ಈಗ ತೀವ್ರ ಚರ್ಚೆಗೆ ಗುರಿಯಾಗಿದೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ

ಸಂದರ್ಶನದಲ್ಲಿ ಮಾತನಾಡಿದ ಜಗ್ಗೇಶ್, ನಾನು ಹುಲಿಯಂತೆ ಬಾಳಬೇಕು ಎಂಬ ಕಾರಣಕ್ಕೆ ನನ್ನ ತಾಯಿ ನನಗೆ ಒರಿಜನಲ್ ಹುಲಿ ಉಗುರು ಕಟ್ಟಿಸಿ ಕೊಟ್ಟಿದ್ದರು. ಇದು ನನ್ನ ಕತ್ತಿನಲ್ಲಿರೋದು ಒರಿಜನಲ್ ಹುಲಿ ಉಗುರು ಎಂದು ತೋರಿಸಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದ್ದು, ಹಾಗಿದ್ದರೇ ನಟ ಜಗ್ಗೇಶ್ ಕೂಡ ಕಾನೂನು ಕ್ರಮ ಎದುರಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Arrest of actor Darshan Thoogudeepa Jaggesh Munirathna is possible tiger Claw Pendant issues for Sandalwood Actors 
Image Credit to Original Source

ಇದಲ್ಲದೇ ನಿರ್ಮಾಪಕ ಮುನಿರತ್ನ ಹುಲಿ ಉಗುರು ಧರಿಸಿದ ಪೋಟೋ ಕೂಡ ವೈರಲ್ ಆಗಿದ್ದು ಮಾಜಿ ಸಚಿವರೂ ಕಾನೂನು ಕ್ರಮ ಎದುರಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಾನೂನು ಎಲ್ಲರಿಗೂ ಒಂದೇ ಇರಬೇಕು.

ಸ್ವತಃ ಪ್ರಾಣಿಪ್ರೇಮಿಯಾಗಿರೋ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದಕ್ಕೆ ಶಿಕ್ಷೆಯಾಗುತ್ತೆ ಅನ್ನೋದಾದರೇ ಜಗ್ಗೇಶ್, ದರ್ಶನ್ ಹಾಗೂ ಮುನಿರತ್ನ, ಗೌರಿಗದ್ದೆಯ ಅವಧೂತ ವಿನಯ್ ಗುರೂಜಿಯವರ ಮೇಲೂ ಕ್ರಮವಾಗಬೇಕು ಎಂದು ಜನರು ಟೀಕಿಸುತ್ತಿದ್ದಾರೆ. ದರ್ಶನ್ ಹಾಗೂ ಜಗ್ಗೇಶ್ ಮನೆ ಮೇಲೂ ದಾಳಿ ಮಾಡಬೇಕು. ಅವರ ಮೇಲೂ ಕ್ರಮಕೈಗೊಳ್ಳಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.

ಇದನ್ನೂ ಓದಿ : ಬಂಗಾಳಿ ಬ್ಯೂಟಿ ನಟಿ ಐಂದ್ರಿತಾ ರೈ ಹೊಸ ಪೋಟೋಶೂಟ್

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಟ್ಯಾಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ದರ್ಶನ್ ಅಥವಾ ಜಗ್ಗೇಶ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಚರ್ಚೆ ಅರಂಭವಾಗಿದೆ.

ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮೇಲೆ ಒತ್ತಡ ಸೃಷ್ಟಿಯಾಗಿದ್ದು, ವರ್ತೂರು ಸಂತೋಷ್ ಮೇಲೆ ಕ್ರಮಕೈಗೊಂಡಷ್ಟೇ ಸುಲಭವಾಗಿ ದರ್ಶನ್ ಹಾಗೂ ಜಗ್ಗೇಶ್ ಮೇಲೆ ಕ್ರಮವಾಗುತ್ತಾ ಕಾದುನೋಡಬೇಕಿದೆ.

Arrest of actor Darshan Thoogudeepa, Jaggesh, Munirathna is possible ? tiger Claw Pendant issues for Sandalwood Actors 

Comments are closed.