TVS Ronin special edition bike launched : ರೇಸರ್ ಬೈಕ್‌ಗಳ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಟಿವಿಸ್ ಕಂಪೆನಿಯ ರೋನಿನ್ ಸ್ಪೆಷನ್ ಎಡಿಷನ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿಎ. ಈಗಾಗಲೇ ವಿಶೇಷ ವಿನ್ಯಾಸ, ಔಟ್‌ಲುಕ್ ನಿಂದಲೇ ಬೈಕ್ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಟಿವಿಎಸ್ ಮೋಟಾರ್ ಕಂಪನಿ ಇಂದು ರೋನಿನ್ ವಿಶೇಷ ಆವೃತ್ತಿಯನ್ನು ರೂ.1,72,700 (ಎಕ್ಸ್ ಶೋ ರೂಂ) ನಲ್ಲಿ ಬಿಡುಗಡೆ ಮಾಡಿದೆ.
ಟಿವಿಎಸ್ ಕಂಪೆನಿ ಕಳೆದ ಹಲವು ವರ್ಷಗಳಿಂದಲೂ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಟಿವಿಟ್ ವಿಕ್ಟರ್ ಬೈಕ್ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇದೀಗ ರೇಸ್ ಬೈಕ್‌ಗಳ ಕ್ಷೇತ್ರಕ್ಕೆ ಟಿವಿಎಸ್ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಟಿವಿಎಸ್ ರೋನಿನ್ ಬೈಕುಗಳು ಗ್ರಾಹಕರ ಗಮನ ಸೆಳೆದಿದೆ.

ಟಿವಿಎಸ್ ರೋನಿನ್ ವಿಶೇಷ ಆವೃತ್ತಿಯು ಹೊಸ ಗ್ರಾಫಿಕ್ಸ್ ಜೊತೆಗೆ ಮಾರುಕಟ್ಟೆಗೆ ಬರಲಿದೆ. ಟ್ರಿಪಲ್ ಟೋನ್ ವಿನ್ಯಾಸವನ್ನು ಹೊಂದಿದ್ದು, ಬೂದು, ಬಿಳಿ ಮತ್ತು ದ್ವಿತೀಯಕ ಮತ್ತು ಕೆಂಪು ಮೂರನೇ ಟೋನ್ ಗಳನ್ನು ಒಳಗೊಂಡಿದೆ. ವಿಶೇಷವಾಗಿ ಚಕ್ರದ ರಿಮ್ ‘TVS RONIN’ ಬ್ರ್ಯಾಂಡಿಂಗ್ ಒಳಗೊಂಡಿದೆ.

ಇದನ್ನು ಓದಿ : ಕೇವಲ ರೂ 6.50 ಲಕ್ಷ ಬೆಲೆಗೆ ಭಾರತದಲ್ಲಿ ಬಿಡುಗಡೆ ಆಯ್ತು ನಿಸ್ಸಾನ್ ಮ್ಯಾಗ್ನೈಟ್ EZ-Shift AMT
ಬೈಕ್‌ಗೆ ಕೆಳ ಭಾಗವು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿದ್ದು, ಹೆಡ್‌ಲ್ಯಾಂಪ್‌ಗೆ ಕಪ್ಪು ಥೀಮ್ ಅಳವಡಿಸಲಾಗಿದೆ. ವಿಶೇಷ ಆವೃತ್ತಿಯು ಯುಎಸ್‌ಬಿ ಚಾರ್ಜರ್, ವೈಸರ್ ಮತ್ತು ಹೊಸ ಇಎಫ್‌ಐ ಕವರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಬೈಕ್‌ನಲ್ಲಿ ಒದಗಿಸಲಾಗಿದೆ. ಅದ್ರಲ್ಲೂ 4-ವಾಲ್ವ್, 225.9cc ಎಂಜಿನ್ ಒಳಗೊಂಡಿದೆ.

ಟಿವಿಎಸ್ ರೋನಿನ್ 20.4PS ಗರಿಷ್ಠ ಶಕ್ತಿ ಮತ್ತು 19.93Nm ಗರಿಷ್ಠ ಟಾರ್ಕ್ ಜೊತೆಗೆ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್ ಒಳಗೊಂಡಿದೆ. ಜೊತೆಗೆ ಗೇರ್ ಬದಲಾಯಿಸಲು ವಿಶೇಷ ಅನುಭವವನ್ನು ಸವಾರರಿಗೆ ನೀಡುತ್ತದೆ. ಟಿವಿಎಸ್ ಕಂಪೆನಿ ಹೇಳಿಕೊಂಡಿರುವ ಪ್ರಕಾರ ಬೈಕ್ 45.0 km/l ಮೈಲೇಜ್ ನೀಡಲಿದೆ. ಅಷ್ಟೇ ಅಲ್ಲದೇ ಎಬಿಎಸ್ ಸೌಲಭ್ಯದ ಜೊತೆಗೆ ಸುರಕ್ಷತೆಯನ್ನು ಒದಗಿಸಲಿದೆ.
ಇದನ್ನೂ ಓದಿ : ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅಡ್ವೆಂಚರ್ ಹೊಸ ಬೈಕ್: ಮೊದಲ ಲುಕ್‌ಗೆ ಗ್ರಾಹಕರು ಫೀದಾ
ಟಿವಿಎಸ್ ರೋನಿನ್ ಬೈಕ್ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ N160, ಸುಜುಕಿ Gixxer SF, ಹೋಂಡಾ PCX160, TVS ಅಪಾಚೆ RTR 200 Fi E100 ಬೈಕ್‌ಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಟಿವಿಎಸ್ ರೋನಿನ್ ಮಾರುಕಟ್ಟೆಯ ಬೆಲೆ :
ಟಿವಿಎಸ್ ರೋನಿನ್ ಎಸ್ಎಸ್ – 1,49,200 ರೂ
ಟಿವಿಎಸ್ ರೋನಿನ್ ಡಿಎಸ್ – 1,56,700 ರೂ
ಟಿವಿಎಸ್ ರೋನಿನ್ ಟಿಡಿ – 1,68,950 ರೂ
ಟಿವಿಎಸ್ ರೋನಿನ್ ವಿಶೇಷ ಆವೃತ್ತಿ – 1,72,700 ರೂ
ಇದನ್ನೂ ಓದಿ : ಕೇವಲ 25,000 ರೂಪಾಯಿಗೆ ಬುಕ್ ಮಾಡಿ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್
TVS Ronin special edition bike launched at just Rs 172700