ಕೇವಲ 25,000 ರೂಪಾಯಿಗೆ ಬುಕ್‌ ಮಾಡಿ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಟಾಟಾ ಸಫಾರಿ ಫೇಸ್‌ಲಿಫ್ಟ್‌ (Tata Safari facelift) ಮತ್ತು ಟಾಟಾ ಹ್ಯಾರಿಯರ್‌ ಫೇಸ್‌ ಲಿಫ್ಟ್‌ (Tata Harrier facelift) ಕಾರನ್ನು ಇದೀಗ ಅತ್ಯಂತ ಕಡಿಮೆ ಬೆಲೆ ಮನೆಗೆ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಕೇವಲ 25000 ರೂಪಾಯಿ ಕೊಟ್ಟು ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್‌ ಅನ್ನು ಬುಕ್‌ ಮಾಡಬಹುದಾಗಿದೆ.

ಟಾಟಾ  ಮೋಟಾರ್ಸ್‌ನ ( Tata Motors) ಲಕ್ಷುರಿ ಕಾರು ಎನಿಸಿಕೊಂಡಿರುವ ಟಾಟಾ ಸಫಾರಿ ಫೇಸ್‌ಲಿಫ್ಟ್‌ (Tata Safari facelift) ಮತ್ತು ಟಾಟಾ ಹ್ಯಾರಿಯರ್‌ ಫೇಸ್‌ ಲಿಫ್ಟ್‌ (Tata Harrier facelift) ಕಾರನ್ನು ಇದೀಗ ಅತ್ಯಂತ ಕಡಿಮೆ ಬೆಲೆ ಮನೆಗೆ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಕೇವಲ 25000 ರೂಪಾಯಿ ಕೊಟ್ಟು ಟಾಟಾ ಸಫಾರಿ ಮತ್ತು ಟಾಟಾ ಹ್ಯಾರಿಯರ್‌ ಅನ್ನು ಬುಕ್‌ ಮಾಡಬಹುದಾಗಿದೆ.

Tata Safari Tata Harrier facelift booking Just Rs 25000
Image Credit : Tata Motors

ಟಾಟಾ ಮೋಟಾರ್ಸ್ ಇಂದು ಟಾಟಾ ಸಫಾರಿ ಫೇಸ್‌ಲಿಫ್ಟ್ ಮತ್ತು ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್‌ ಅನ್ನು ಕೇವಲ 25,000 ಟೋಕನ್ ಮೊತ್ತ ನೀಡಿ ಬುಕಿಂಗ್‌ ಮಾಡಬಹುದಾಗಿದೆ ಎಂದು ಘೋಷಣೆ ಮಾಡಿದೆ. ಟಾಟಾ ಮೋಟಾರ್ಸ್‌ನ ಅಧಿಕೃತ ಡೀಲರ್‌ಗಳಲ್ಲಿ ಅಥವಾ ಟಾಟಾ ಮೋಟಾರ್ಸ್‌ ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಬುಕ್‌ ಮಾಡಬಹುದಾಗಿದೆ.

Tata Safari Tata Harrier facelift booking Just Rs 25000
Image Credit : Tata Motors

ಟಾಟಾ ಸಫಾರಿ ಫೇಸ್‌ಲಿಫ್ಟ್ ಅನ್ನು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಸೇರಿ ಒಟ್ಟು ನಾಲ್ಕು ರೂಪಾಂತರಗಳಲ್ಲಿ ಈ ಕಾರನ್ನು ಬಿಡುಗಡೆ ಮಾಡಿದೆ. ಕಾರಿನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ.

ಇದನ್ನೂ ಓದಿ : ಒಂದೇ ಚಾರ್ಜ್‌ 550ಕಿ.ಮೀ. ಮೈಲೇಜ್‌ : ಮಾರುತಿ ಸುಜುಕಿ EVX ಎಲೆಕ್ಟ್ರಿಕ್ SUV ಫೀಚರ್ಸ್‌ ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ

ಹೊಸ ಮಾದರಿಯ ಕಾರಿನಲ್ಲಿ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಗೆಸ್ಚರ್-ನಿಯಂತ್ರಿತ ಚಾಲಿತ ಟೈಲ್‌ಗೇಟ್, 10.3- ಇಂಚಿನ ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 13 JBL ಮೋಡ್‌ಗಳು ಮತ್ತು 19-ಇಂಚಿನ ಮಿಶ್ರಲೋಹಗಳೊಂದಿಗೆ ಹರ್ಮನ್ ಸುಧಾರಿತ ಆಡಿಯೊ ವರ್ಕ್ಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Tata Safari Tata Harrier facelift booking Just Rs 25000
Image Credit : Tata Motors

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ನಾಲ್ಕು ರೂಪಾಂತರಗಳನ್ನು ಒಳಗೊಂಡಿದೆ. ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್‌ಲೆಸ್. SUV ಈಗ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನೊಂದಿಗೆ ADAS, ಏಳು ಏರ್‌ಬ್ಯಾಗ್‌ಗಳು, ಸ್ಮಾರ್ಟ್ ಇ-ಶಿಫ್ಟರ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು ಮತ್ತು ಡ್ಯುಯಲ್-ಸೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಸೇರಿದಂತೆ ಹಲವು ವೈಶಿಷ್ಠ್ಯತೆಗಳನ್ನು ನೀಡಲಾಗಿದೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ಎಸ್‌ಯುವಿಗಳ ಪವರ್‌ಟ್ರೇನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. 2.0-ಲೀಟರ್ ಕ್ರಿಯೋಟೆಕ್ ಡೀಸೆಲ್ ಎಂಜಿನ್‌ ಒಳಗೊಂಡಿದೆ. ಕಾರಿನಲ್ಲಿ 170PS ಗರಿಷ್ಠ ಶಕ್ತಿಯನ್ನು ಮತ್ತು 350Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸರಣ ಆಯ್ಕೆಗಳಲ್ಲಿ 6-ಸ್ಪೀಡ್ MT ಮತ್ತು 6-ಸ್ಪೀಡ್ AT ಆಯ್ಕೆಗಳು ಸೇರಿವೆ. ಎಸ್‌ಯುವಿಗಳು ಮೂರು ಡ್ರೈವ್ ಮೋಡ್‌ಗಳನ್ನು ಒಳಗೊಂಡಿದೆ.

Tata Safari Tata Harrier facelift booking Just Rs 25000
Image Credit : Tata Motors

ಟಾಟಾ ಸಫಾರಿ ಫೇಸ್‌ಲಿಫ್ಟ್ ಮಹೀಂದ್ರಾ XUV700, MG ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತದೆ. ಇನ್ನು ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಮಹೀಂದ್ರ ಸ್ಕಾರ್ಪಿಯೊ-ಎನ್ ಮತ್ತು ಎಂಜಿ ಹೆಕ್ಟರ್‌ಗೆ ಪ್ರತಿಸ್ಪರ್ಧಿಯಾಗಿದೆ.

ಇದನ್ನೂ ಓದಿ : ಹೊಸ ಸ್ವಿಫ್ಟ್‌ ಅನಾವರಣಗೊಳಿಸಿದ ಮಾರುತಿ ಸುಜುಕಿ : ಅತ್ಯಂತ ಕಡಿಮೆ ಬೆಲೆ ಅತ್ಯಾಧುನಿಕ ತಂತ್ರಜ್ಞಾನ

ಹೊಸ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಹೊಸ ಹ್ಯಾರಿಯರ್‌ ಹಾಗೂ ಟಾಟಾ ಸಫಾರಿ ಕಾರುಗಳನ್ನು ಗ್ರಾಹಕರು ಇಂದಿನಿಂದಲೇ ಬುಕ್‌ ಮಾಡಬಹುದಾಗಿದ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಮಾಹಿತಿ ನೀಡಿದ್ದಾರೆ.

Tata Safari Tata Harrier facelift booking Just Rs 25000
Image Credit : Tata Motors

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಇತರ ಕಂಪೆನಿಗಳ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಅದ್ರಲ್ಲೂ ಎಲೆಕ್ಟ್ರಿಕ್‌ ಕಾರುಗಳು ಕೂಡ ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

Tata Safari Tata Harrier facelift booking Just Rs 25,000

Comments are closed.