ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅಡ್ವೆಂಚರ್ ಹೊಸ ಬೈಕ್: ಮೊದಲ ಲುಕ್‌ಗೆ ಗ್ರಾಹಕರು ಫೀದಾ

ರಾಯಲ್ ಎನ್‌ಫೀಲ್ಡ್ ತನ್ನ ಬಹು ನಿರೀಕ್ಷಿತ ಅಡ್ವೆಂಚರ್ ಬೈಕ್ ಹಿಮಾಲಯನ್ 452 (Himalayan 452) ಕುರಿತ ಕುತೂಹಲಕ್ಕೆ ತೆರೆ ಎಳೆದಿದೆ. ಸದ್ಯ ಈ ಬೈಕ್‌ ನವೆಂಬರ್‌ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ರಾಯಲ್‌ ಎಲ್‌ಫೀಲ್ಡ್‌ ಹಿಮಾಲಯನ್‌ (Royal Enfield Himalayan) ಮಾದರಿಯ ಬೈಕ್‌ನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆಡ್ವೇಂಚರ್‌ ಮಾದರಿಯ ಈ ಬೈಕನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 (Royal Enfield Himalayan 452) ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ.

Royal Enfield Himalayan 452 Adventure Bike First Look Impresses Customers Great Features Attractive Price
Image Credit to Original Source

ಈಗಾಗಲೇ ರಾಯಲ್‌ ಎನ್‌ಫೀಲ್ಡ್‌ ಕಂಪೆನಿಯು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅಡ್ವೆಂಚರ್ ಬೈಕ್ ಪೋಟೋಗಳನ್ನು ರಿವೀಲ್‌ ಮಾಡಿದೆ. ಹಳೆಯ ಮಾದರಿಗೆ ಹೋಲಿಕೆ ಮಾಡಿದ್ರೆ, ಮರು ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ : ಕೇವಲ 25,000 ರೂಪಾಯಿಗೆ ಬುಕ್‌ ಮಾಡಿ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್

ರಾಯಲ್ ಎನ್‌ಫೀಲ್ಡ್ ತನ್ನ ಬಹು ನಿರೀಕ್ಷಿತ ಅಡ್ವೆಂಚರ್ ಬೈಕ್ ಹಿಮಾಲಯನ್ 452 ಕುರಿತ ಕುತೂಹಲಕ್ಕೆ ತೆರೆ ಎಳೆದಿದೆ. ಸದ್ಯ ಈ ಬೈಕ್‌ ನವೆಂಬರ್‌ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಈ ಹಿಂದಿನ ಮಾದರಿಗಳಿಗೆ ಹೋಲಿಕೆ ಮಾಡಿದ್ರೆ ಹಿಮಾಲಯನ್ 452 ಆಕರ್ಷಕವಾಗಿ ಕಾಣುತ್ತಿದೆ.

Royal Enfield Himalayan 452 Adventure Bike First Look Impresses Customers Great Features Attractive Price
Image Credit To original Source

ರಾಯಲ್ ಎನ್‌ಫೀಲ್ಡ್ ಅಪ್‌ಲೋಡ್ ಮಾಡಿದ ಚಿತ್ರವು ಕ್ರೋಮ್ ಪ್ಯಾನೆಲ್‌ ಜೊತೆಗೆ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಸಹ ಒಳಗೊಂಡಿದೆ. ರಾಯಲ್‌ ಎನ್‌ಫೀಲ್ಡ್‌ ಹಂಚಿಕೊಂಡಿರುವ ಈ ಪೋಟೋದಲ್ಲಿ ಪೋರ್ಕ್‌ ಕವರ್‌ ಹೊಂದಿರುವ ಮುಂಭಾಗದ ಲುಕ್‌ ಗಮನ ಸೆಳೆಯುತ್ತಿದೆ

ಇದನ್ನೂ ಓದಿ : ಒಂದೇ ಚಾರ್ಜ್‌ 550ಕಿ.ಮೀ. ಮೈಲೇಜ್‌ : ಮಾರುತಿ ಸುಜುಕಿ EVX ಎಲೆಕ್ಟ್ರಿಕ್ SUV ಫೀಚರ್ಸ್‌ ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ

ಈ ಬೈಕ್‌ ಅಡ್ವೇಂಚರ್‌ಗೆ ಹೇಳಿ ಮಾಡಿಸಿದ ಹಾಗಿದೆ, ಆಫ್-ರೋಡ್ ಟೈರ್‌ಗಳಿಂದ ಸುತ್ತುವ 21-ಇಂಚಿನ ಮಲ್ಟಿ-ಸ್ಪೋಕ್ ಚಕ್ರಗಳನ್ನು ಒಳಗೊಂಡಿದೆ. ಅದ್ರಲ್ಲೂ ಮುಂಬರುವ ಹಿಮಾಲಯನ್‌ ಮಾದರಿಯಲ್ಲಿ ಮರುವಿನ್ಯಾಸ ಗೊಳಿಸಲಾಗಿದೆ. ಫೆಂಡರ್‌ಗಳು ಮತ್ತು ಸ್ಪ್ಲಿಟ್ ಸೀಟ್-ಸೆಟಪ್ ಹೊಂದಿರುವ ಇಂಧನ ಟ್ಯಾಂಕ್ ಅನ್ನು ಒಳಗೊಂಡಿದೆ.

Royal Enfield Himalayan 452 Adventure Bike First Look Impresses Customers Great Features Attractive Price
Image Credit : Abhishek Handattu

ಹಿಮಾಲಯನ್ ಬ್ರ್ಯಾಂಡಿಂಗ್‌ ಲೋಗೋ ಬೈಕ್‌ ಮುಂಭಾಗದ ಮಡ್‌ಗಾರ್ಡ್‌ನಲ್ಲಿದೆ. ಇಂಧನದ ಟ್ಯಾಂಕ್‌ ಸೈಡ್‌ ಫ್ಯಾನಲ್‌ ಹಾಗೂ ಹಿಂಭಾಗದ ಫೆಂಡರ್‌ಗಳಲ್ಲಿ ಕೂಡ ಹಿಮಾಲಯನ್‌ ಗ್ರಾಫಿಕ್ಸ್‌ ಮನ ಸೆಳೆಯುತ್ತಿದೆ.

Royal Enfield Himalayan 452 Adventure Bike First Look Impresses Customers Great Features Attractive Price
Image Credit : Abhishek Handattu

ಇದನ್ನೂ ಓದಿ : ತಾಂತ್ರಿಕ ಸಮಸ್ಯೆ 34 ಲಕ್ಷಕ್ಕೂ ಅಧಿಕ ಕಾರುಗಳನ್ನು ವಾಪಾಸ್‌ ಪಡೆಯಲಿದೆ ಹ್ಯುಂಡೈ, ಕಿಯಾ ಕಂಪೆನಿ

ರಾಯಲ್‌ ಎನ್‌ಫೀಲ್ಡ್‌ ಕಂಪೆನಿಯು ಅಪ್‌ಲೋಡ್‌ ಮಾಡಿರುವ ಚಿತ್ರವು ಕ್ರೋಮ್‌ ಪ್ಯಾನೆಲ್‌ ಜೊತೆಗೆ ಅಪ್‌ಸ್ಟೆಪ್ಟ್‌ ಎಕ್ಸಾಸ್ಟ್‌ ಒಳಗೊಂಡಿದೆ. ಹಿಮಾಲಯನ್ 452 451.65 cc, ಲಿಕ್ವಿಡ್-ಕೂಲ್ಡ್ ಎಂಜಿನ್‌ ಒಳಗೊಂಡಿದೆ. 40 bhp ಮತ್ತು 45 Nm ನ ಗರಿಷ್ಠ ವಿದ್ಯುತ್ ಉತ್ಪಾದನೆ ಮತ್ತು ಗರಿಷ್ಠ ಟಾರ್ಕ್ ಅನ್ನು ಹೊಂದಿದೆ.

Royal Enfield Himalayan 452 Adventure Bike First Look Impresses Customers Great Features Attractive Price
Image Credit : Abhishek Handattu

ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್ 452 ಬೈಕ್ ಬೆಲೆ ಸುಮಾರು 2.80 ಲಕ್ಷ ರೂ. (ಎಕ್ಸ್ ಶೋ ರೂಂ) ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಈ ಹೊಸ ಬೈಕ್‌ 390 ಅಡ್ವೆಂಚರ್ (KTM), G310 GS (BMW), Adventure (Yezdi) ಹಾಗೂ ಬಿಡುಗಡೆ ಆಗಲಿರುವ XPulse 400 (Hero) ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Royal Enfield Himalayan 452 Adventure Bike First Look Impresses Customers Great Features Attractive Price

Comments are closed.