ಭಾನುವಾರ, ಏಪ್ರಿಲ್ 27, 2025
Hometechnologyಕಾರು ಅಪಘಾತವಾದ್ರೆ ಜೀವ ಉಳಿಸುತ್ತೆ ಗೂಗಲ್‌ ! ಭಾರತದಲ್ಲಿ ರಿಲಿಸ್‌ ಆಯ್ತು ಗೂಗಲ್‌ ಫಿಕ್ಸೆಲ್‌ ಫೀಚರ್ಸ್‌

ಕಾರು ಅಪಘಾತವಾದ್ರೆ ಜೀವ ಉಳಿಸುತ್ತೆ ಗೂಗಲ್‌ ! ಭಾರತದಲ್ಲಿ ರಿಲಿಸ್‌ ಆಯ್ತು ಗೂಗಲ್‌ ಫಿಕ್ಸೆಲ್‌ ಫೀಚರ್ಸ್‌

- Advertisement -

ಅಪಘಾತಗಳು ಯಾವಾಗ ಆಗುತ್ತೆ ಅಂತಾ ಊಹಿಸೋದಕ್ಕೂ ಸಾಧ್ಯವಿಲ್ಲ. ರಸ್ತೆ ಅಪಘಾತದ ಸಂದರ್ಭದಲ್ಲಿ ಅದೆಷ್ಟೋ ಮಂದಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯದೇ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ರೀಗ ಕಾರು ಅಪಘಾತವಾದ್ರೆ ನಿಮ್ಮ ಜೀವವನ್ನು ಉಳಿಸುವ ಕಾರ್ಯವನ್ನು ಮಾಡಲು ಗೂಗಲ್‌ ( Google ) ಸಜ್ಜಾಗಿದೆ. ನಿಮ್ಮಗೆ ಅಚ್ಚರಿ ಅನಿಸಿದ್ರೂ ಇದು ಸತ್ಯ.

ಗೂಗಪ್‌ ಈಗಾಗಲೇ ಗೂಗಲ್‌ ಫಿಕ್ಸೆಲ್‌ ಮಾದರಿಯ ಮೊಬೈಲ್‌ ಪೋನ್‌ಗಳನ್ನು ಭಾರತದಲ್ಲಿಯೂ ಬಿಡುಗಡೆ ಮಾಡಿದೆ. ಆದ್ರೆ ಅಮೇರಿಕಾದ ಗ್ರಾಹಕರಿಗೆ ವಿಶಿಷ್ಟವಾಗಿರುವ ಫೀಚರ್ಸ್‌ ಅನ್ನೂ ಗೂಗಲ್‌ ಫಿಕ್ಸೆಲ್‌ ಪರಿಚಯಿಸಿತ್ತು. ಕಾರುಗಳು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಗೂಗಲ್‌ ಫಿಕ್ಸೆಲ್‌ ಮೊಬೈಲ್‌‌ (Car Crash Detection on Google Fixel 4a ) ಜೀವ ಉಳಿಸುವ ಕಾರ್ಯವನ್ನು ಮಾಡುತ್ತಿದೆ.

car accident Google will save lives, Car Crash Detection on Google Fixel 4a features released in India
Image Credit to Original Source

ಗೂಗಲ್‌ ಫಿಕ್ಸೆಲ್‌, ಒಂದೊಮ್ಮೆ ಕಾರ್ ಕ್ರ್ಯಾಶ್ ಆಗುವ ವೇಳೆಯಲ್ಲಿ ಅಪಘಾತದ ಮುನ್ಸೂಚನೆಯನ್ನು ಅರಿತು, ತುರ್ತು ಸೇವೆಗಳಿಗೆ ಡಯಲ್‌ ಮಾಡುತ್ತದೆ. ಗೂಗಲ್‌ ಸಂಸ್ಥೆಯ ಈ ಆವಿಷ್ಕಾರ ಇಷ್ಟು ದಿನಗಳ ಕಾಲ ಅಮೇರಿಕಾಕ್ಕೆ ಮಾತ್ರವೇ ಸೀಮಿತವಾಗಿತ್ತು. ಆದ್ರೀಗ ಭಾರತದಲ್ಲಿ ಈ ಫೀಚರ್ಸ್‌ ಪರಿಚಯ ವಾಗಲಿದೆ. ಭಾರತ ಮಾತ್ರವಲ್ಲದೇ ಆಸ್ಟ್ರೀಯಾ, ಬೆಲ್ಜಿಯಂ, ಪೋರ್ಚುಗಲ್‌ ಮತ್ತು ಸ್ವಿಟ್ಜರ್ಲೆಂಡ್‌ ದೇಶಗಳಲ್ಲಿ ಜಾರಿಗೆ ತರುತ್ತಿದೆ.

ಇದನ್ನೂ ಓದಿ : Xiaomi 12 Pro 5G ಮೊಬೈಲ್‌ಗೆ ಬಾರೀ ಡಿಸ್ಕೌಂಟ್‌ : 62,999 ರೂ. ಮೊಬೈಲ್‌ ಕೇವಲ ರೂ.27,999ಕ್ಕೆ ಸೇಲ್

ಗೂಗಲ್‌ ಫಿಕ್ಸ್‌ 4a ಮತ್ತು Pixel Fold ಗ್ಲೋಬಲ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸುರಕ್ಷತಾ ಫೀಚರ್ಸ್‌ ಕೇವಲ Pixel 4a ಮತ್ತು ನಂತರದ ಸಾಧನಗಳಲ್ಲಿ ಮತ್ತು Pixel Fold ನಲ್ಲಿ ಲಭ್ಯವಿದೆ. 2019 ರಲ್ಲಿಯೇ ಗೂಗಲ್‌ ಈ ಕಾರ್ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಘೋಷಿಸಿತ್ತು. ಆದರೆ ತಡವಾಗಿ ಭಾರತಕ್ಕೆ ಈ ಫೀಚರ್ಸ್‌ ಅನ್ನು ಗೂಗಲ್‌ ನೀಡುತ್ತಿದೆ.

car accident Google will save lives, Car Crash Detection on Google Fixel 4a features released in India
Image Credit to Original Source

ಭಾರತದಲ್ಲಿನ ಮೊಬೈಲ್‌ ಪೋನ್‌ ಬಳಕೆದಾರರಿಗೆ ಸುರಕ್ಷತಾ ವೈಶಿಷ್ಟ್ಯವು Pixel 4a, Pixel 6a, Pixel 7, Pixel 7 Pro, Pixel 7a, Pixel 8, ಮತ್ತು Pixel 8 Pro ನಲ್ಲಿ ಮಾತ್ರ ಲಭ್ಯವಿರುತ್ತದೆ. ಇನ್ನೊಂದು ವೈಶಿಷ್ಟ್ಯತೆ ಎಂದ್ರೆ, ಇಂಗ್ಲಿಷ್, ಡ್ಯಾನಿಶ್, ಡಚ್, ಇಟಾಲಿಯನ್, ಜಪಾನೀಸ್ ಸೇರಿದಂತೆ 11 ಭಾಷೆಗಳಲ್ಲಿ ಮಾತ್ರ ಪ್ರವೇಶಿಸಬಹುದಾಗಿದೆ. ಕಾರು ಅಪಘಾತ ಪತ್ತೆ ವೈಶಿಷ್ಟ್ಯವು ಹಿಂದಿಯಲ್ಲಿ ಇನ್ನೂ ಲಭ್ಯವಿಲ್ಲ.

ಇದನ್ನೂ ಓದಿ : Oppo A79 5G : 50MP ಕ್ಯಾಮೆರಾ, 5G ಮೊಬೈಲ್‌, ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಒಪ್ಪೋ ಎ 79 5ಜಿ

ಗೂಗಲ್‌ ಪರಿಚಯಿಸುತ್ತಿರುವ ಪಿಕ್ಸೆಲ್‌ ಕಾರ್‌ ಕ್ರ್ಯಾಶ್‌ ಡಿಟೆಕ್ಷನ್‌ ಸದ್ಯ ಗೂಗಲ್‌ ಫಿಕ್ಸೆಲ್‌ನಲ್ಲಿ ಮಾತ್ರವೇ ಪರಿಚಯಿಸಲಾಗುತ್ತಿದೆ. ಕಾರು ಅಪಘಾತದ ಸಂದರ್ಭದಲ್ಲಿ ಫಿಕ್ಸೆಲ್‌ ನಿಮ್ಮ ಸಹಾಯಕ್ಕೆ ನಿಲ್ಲಲಿದೆ. ಆದರೆ ನಿಮ್ಮ ಪೋನ್‌ನಲ್ಲಿ ಲೊಕೇಷನ್‌, ಮೈಕ್ರೋಪೋನ್‌ ಅನುಮತಿಯ ಅಗ್ಯವಿರುತ್ತದೆ. ನಿಮ್ಮ ಪೋನ್‌ ರಕ್ಷಣೆಯನ್ನು ನೀಡಲು ಇವುಗಳು ಕಡ್ಡಾಯ.

car accident Google will save lives, Car Crash Detection on Google Fixel 4a features released in India
Image Credit to Original Source

ನಿಮ್ಮ ಮೊಬೈಲ್‌ ಪೋನ್‌ ಸಿಮ್‌ ಅನ್ನು ಒಳಗೊಂಡಿದ್ದರೆ, ನಿಮಗೆ ಖಂಡಿತವಾಗಿಯೂ ರಕ್ಷಣೆ ದೊರೆಯಲಿದೆ. ಸುರಕ್ಷತಾ ವೈಶಿಷ್ಟ್ಯವು ಕಾರ್ ಅಪಘಾತ ಪತ್ತೆಹಚ್ಚಲು ಅಕ್ಸೆಲೆರೊಮೀಟರ್, ಸ್ಥಳ ಮತ್ತು ಮೈಕ್ರೊಫೋನ್‌ಗಳನ್ನು ಬಳಸುತ್ತದೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆ : ಡಾರ್ಕ್‌ವೆಬ್‌ನಲ್ಲಿ 81 ಕೋಟಿ ಭಾರತೀಯರ ಮಾಹಿತಿ ಮಾರಾಟ

ಒಂದೊಮ್ಮೆ ಕಾರು ಕ್ರ್ಯಾಶ್‌ ಆದಲ್ಲಿ, ನಿಮ್ಮ ಫಿಕ್ಸೆಲ್‌ ಮೊಬೈಲ್‌ ಪೋನ್‌ಗಳು ಸ್ವಯಂ ಚಾಲಿತವಾಗಿ ಸ್ಥಳೀಯ ತುರ್ತು ಸೇವೆಗಳನ್ನು ಡಯಲ್‌ ಮಾಡುತ್ತವೆ. ಇದರಿಂದಾಗಿ 60 ಸೆಕೆಂಡ್‌ಗಳಲ್ಲಿ ನಿಮ್ಮ ರಕ್ಷಣೆಗಾಗಿ ಡಯಲ್‌ ಮಾಡುತ್ತದೆ. ನಾನು ಪರವಾಗಿಲ್ಲ ಎಂದು ಟೈಪ್‌ ಮಾಡಿದಾಗ, ನೋ ಕ್ರ್ಯಾಶ್‌ ಹಾಗೂ ಮೈನರ್‌ ಕ್ರಾಶ್ಸ್‌ ಕಾಲ್ 112″ ಎಂಬ ಮೂರು ಆಯ್ಕೆಗಳಿರುತ್ತವೆ.

ನೀವು ತುರ್ತು ಸಂದರ್ಭಗಳಿಗೆ ಕರೆ ಮಾಡಿದ ಸಂದರ್ಭದಲ್ಲಿ ನೀವು ವೈದ್ಯಕೀಯ, ಅಗ್ನಿಶಾಮಕ ಅಥವಾ ಪೊಲೀಸ್‌ ಸಹಾಯವೇ ಎಂಬ ಆಯ್ಕೆಯನ್ನು ನೀವು ಮಾಡಬೇಕಾಗುತ್ತೆ. ನಿಮ್ಮ ಪೋನ್‌ ಲಾಕ್‌ ಆಗಿರುವ ವೇಳೆಯಲ್ಲಿ ಇತರರಿಗೆ ನಿಮ್ಮ ಮೊಬೈಲ್‌ ಕೂಡ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಆದರೆ ಈಗಾಗಲೇ ಹಲವು ದೇಶಗಳು ನಕಲಿ ತುರ್ತು ಡಯಲ್‌ಗಳ ವಿರುದ್ದ ಈಗಾಗಲೇ ಕಟ್ಟುನಿಟ್ಟಾದ ನಿಯಮ ರೂಪಿಸಿದೆ.

If there is a car accident Google will save lives, Car Crash Detection on Google Fixel 4a features released in India

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular