Xiaomi 12 Pro 5G ಮೊಬೈಲ್‌ಗೆ ಬಾರೀ ಡಿಸ್ಕೌಂಟ್‌ : 62,999 ರೂ. ಮೊಬೈಲ್‌ ಕೇವಲ ರೂ.27,999ಕ್ಕೆ ಸೇಲ್

ಶಿಯೋಮಿ ಕಂಪೆನಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಶಿಯೋಮಿ 12 ಪ್ರೋ ( Xiaomi 12 Pro 5G ) ಮೊಬೈಲ್ ಕ್ರೋಮಾದಲ್ಲಿ 27,999 ರೂ‌.ಗಳಿಗೆ ಲಭ್ಯವಿದೆ.

ಶಿಯೋಮಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಶಿಯೋಮಿ ಕಂಪೆನಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಶಿಯೋಮಿ 12 ಪ್ರೋ ( Xiaomi 12 Pro 5G ) ಮೊಬೈಲ್ ಕ್ರೋಮಾದಲ್ಲಿ 27,999 ರೂ‌.ಗಳಿಗೆ ಲಭ್ಯವಿದೆ.

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999
Image Credit : Xiaomi

ಭಾರತದಲ್ಲಿ ಶಿಯೋಮಿ 12 ಪ್ರೋ 5G ಮೊಬೈಲ್‌ ಭಾರತದ ಮಾರುಕಟ್ಟೆಯಲ್ಲಿ ರೂ.62,999ಕ್ಕೆ ಬಿಡುಗಡೆ ಆಗಿತ್ತು. ಆದ್ರೀಗ ಕ್ರೋಮಾದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಕೇವಲ ರೂ.27,999ಕ್ಕೆ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಇಷ್ಟೊಂದು ಕಡಿಮೆ ಬೆಲೆಗೆ ಈ ಮೊಬೈಲ್‌ ಮಾರಾಟವಾಗುತ್ತಿರುವುದು ಇದೇ ಮೊದಲು.

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999
Image Credit to Original Source

ಈ ಆಫರ್‌ನಲ್ಲಿ ಯಾವುದೇ ಷರತ್ತುಗಳನ್ನು, ನಿಯಮಗಳನ್ನೂ ವಿಧಿಸದೇ ಶಿಐೋಮಿ 12 Pro ಮಾರಾಟವಾಗುತ್ತಿದೆ. ಅಲ್ಲದೇ ಫ್ಲಾಟ್ ರಿಯಾಯಿತಿಯನ್ನು ಒದಗಿಸುತ್ತಿದೆ. ಒಂದೊಮ್ಮೆ ನೀವು ಆನ್‌ಲೈನ್‌ನಲ್ಲಿ ಈ ಮೊಬೈಲ್‌ ಖರೀದಿ ಮಾಡಿದ್ರೆ ನಿಮಗೆ ಬರೋಬ್ಬರಿ 35,000 ರೂಪಾಯಿ ವರೆಗೆ ಭರ್ಜರಿ ರಿಯಾಯಿತಿ ದೊರೆಯಲಿದೆ.

ಇದನ್ನೂ ಓದಿ : ₹ 10,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 50MP ಕ್ಯಾಮೆರಾ 6000mAh ಬ್ಯಾಟರಿ ಸ್ಮಾರ್ಟ್‌ಪೋನ್‌ : ಅಮೆಜಾನ್ ಸೇಲ್ ನಲ್ಲಿ ಭರ್ಜರಿ ಆಫರ್‌

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999
Image Credit : Xiaomi

Xiaomi 12 Pro 5G 8GB RAM + 256GB ಸ್ಟೋರೇಜ್ ಮಾದರಿಯಲ್ಲಿ ಲಭ್ಯವಿದೆ. ಅಲ್ಲದೇ ಅಮೆಜಾನ್‌ (Amazon) ಶಿಯೋಮಿ 12 Pro 5G ಮೊಬೈಲ್‌ ಪೋನ್‌ ಅನ್ನು ರೂ. 39,999 ಗೆ ಮಾರಾಟ ಮಾಡುತ್ತಿದ್ರೆ, ಫ್ಲಿಪ್‌ಕಾರ್ಟ್ ರೂ 49,999ಕ್ಕೆ ಮಾರಾಟ ಮಾಡುತ್ತಿದೆ. ಈ ಎರಡೂ ಆನ್‌ಲೈನ್‌ ಶಾಪಿಂಗ್‌ಗಳಿಗೆ ಹೋಲಿಕೆ ಮಾಡಿದ್ರೆ ಕ್ರೋಮಾ ಸೇಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.

ಈ 5 ಕಾರಣಕ್ಕೆ ನೀವು ಶಿಯೋಮಿ 12 Pro 5G ಖರೀದಿಸಬಹುದು  :

ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡಿರುವ ಶಿಯೋಮಿ ( Xiaomi) ಫೋನ್ ಖರೀದಿಸಲು ಪ್ರಮುಖ ಕಾರಣ ಮೊಬೈಲ್‌ನ ಕಾರ್ಯಕ್ಷಮತೆ. ಪ್ರಮುಖವಾಗಿ ಸ್ನಾಪ್‌ಡ್ರಾಗನ್ 8 Gen 1 ಚಿಪ್‌ಸೆಟ್ ಅನ್ನು ಒಳಗೊಂಡಿದ್ದು, ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದೆ.ಕ್ಯಾಮರಾ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ.

ಇದನ್ನೂ ಓದಿ : ದೀಪಾವಳಿ ಬಿಗ್‌ ಸೇಲ್‌ನಲ್ಲಿ ಆಪಲ್‌ ಐಪೋನ್ 15 ಮೇಲೆ ಭರ್ಜರಿ ಡಿಸ್ಕೌಂಟ್‌

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999
Image Credit : Xiaomi

ರೂ 30,000 ಬೆಲೆಯ ಮೊಬೈಲ್‌ ಪೋನ್‌ಗಳಿಗೆ ಹೋಲಿಕೆ ಮಾಡಿದ್ರೆ ಇತರ ಕಂಪೆನಿಯ ಮೊಬೈಲ್‌ ಪೋನ್‌ಗಳಿಗಿಂತ ಶಿಯೋಮಿ ಉತ್ತಮವಾಗಿದೆ. ಶಿಯೋಮಿ 12 ಪ್ರೋ 5G ಸ್ಮಾರ್ಟ್‌ಪೋನ್‌ ಹಿಂಭಾಗದಲ್ಲಿ ಮೂರು 50-ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿದೆ.

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999
Image Credit : Xiaomi

ಅಷ್ಟೇ ಅಲ್ಲದೇ ಒಂದು ಟೆಲಿಫೋಟೋ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಹೊಂದಿದೆ. ಆದರೆ ಕಡಿಮೆ ಬೆಳಕಿನ ಪೋಟೋಗಳು ಮಾತ್ರ ಅಷ್ಟು ಚೆನ್ನಾಗಿ ಬರುವುದಿಲ್ಲ. ಆದರೆ ಕಂಪೆನಿಯು 120W ವೇಗದ ಚಾರ್ಜರ್ ನೀಡುತ್ತಿದ್ದು, ಅತೀ ವೇಗದಲ್ಲಿ ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದೆ. ಅಲ್ಲದೇ 4,600mAh ಬ್ಯಾಟರಿಯನ್ನು ಒಳಗೊಂಡಿದೆ.

ಇದನ್ನೂ ಓದಿ : ಅಮೆಜಾನ್ ಬಿಗ್ ಸೇಲ್ : ಕೇವಲ 14,449 ರೂಪಾಯಿಗೆ ಸಿಗುತ್ತೆ ಜಿಯೋ ಲ್ಯಾಪ್‌ಟಾಪ್‌

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999
Image Credit : Xiaomi

120Hz AMOLED LTPO 6.73-ಇಂಚಿನ ಪರದೆ ಹೊಂದಿದೆ. ಮೊಬೈಲ್‌ ಗಟ್ಟಿಯಾದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ನಿಂದ ರಕ್ಷಿಸಲಾಗಿದೆ. ಅತ್ಯತ್ತಮ HD ಗುಣಮಟ್ಟದ ಅನುಭವವನ್ನು ಹೊಂದಬಹುದಾಗಿದ್ದು, ಡಾಲ್ಫಿ ವಿಷನ್‌ ಮತ್ತ HDR10+ ಪ್ರಮಾಣೀಕರಿಸಲ್ಪಟ್ಟಿದೆ. ಇನ್ನು ಸ್ಟೀರಿಯೋ ಸ್ಪೀಕರ್‌ಗಳು ಮತ್ತು IP53 ರೇಟಿಂಗ್‌ಗೆ ಬೆಂಬಲ ಹೊಂದಿದೆ.

Xiaomi 12 Pro 5G mobile Big Discount in Croma, Rs 62,999 The mobile is on sale for just Rs.27,999

Comments are closed.