ಕರ್ನಾಟಕದಲ್ಲಿ ರೇಷನ್‌ ಅಂಗಡಿಗಳು ನವೆಂಬರ್‌ 10 ರಿಂದ ಬಂದ್‌ : ಇನ್ಮುಂದೆ ಅಕ್ಕಿ ಬದಲು ನಗದು ಸಿಗೋದು ಅನುಮಾನ

ಕೇಂದ್ರ ಸರಕಾರ ಗರೀಬ್‌ ಕಲ್ಯಾಣ ಯೋಜನೆಯ (Pradhan Mantri Garib Kalyan Yojana) ಅಡಿಯಲ್ಲಿ ಪಡಿತರ ಕುಟುಂಬದ ಪ್ರತೀ ಸದಸ್ಯನಿಗೂ ಕೂಡ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಆದರೆ ರಾಜ್ಯ ಸರಕಾರ ಮಹತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು.

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳು ಇದೀಗ ರಾಜ್ಯ ಸರಕಾರಕ್ಕೆ ತಲೆನೋವು ತರಿಸಿದೆ. ರಾಜ್ಯ ಸರಕಾರ ರೇಷನ್‌ ಬದಲು ಅಕ್ಕಿ ನೀಡುವ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನವೆಂಬರ್‌ 10 ರಿಂದ ಕರ್ನಾಟಕದಲ್ಲಿನ ಅನ್ನಭಾಗ್ಯ ರೇಷನ್‌ ಅಂಗಡಿಗಳು (Anna Bhagya Ration shops)  ಬಂದ್‌ ಆಗಲಿವೆ.

Anna Bhagya Ration shops in Karnataka closed from November 10 Doubt that DBT cash will be received instead of rice from now on
Image Credit to Original Source

ಕೇಂದ್ರ ಸರಕಾರ ಗರೀಬ್‌ ಕಲ್ಯಾಣ ಯೋಜನೆಯ (Pradhan Mantri Garib Kalyan Yojana) ಅಡಿಯಲ್ಲಿ ಪಡಿತರ ಕುಟುಂಬದ ಪ್ರತೀ ಸದಸ್ಯನಿಗೂ ಕೂಡ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಆದರೆ ರಾಜ್ಯ ಸರಕಾರ ಮಹತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದ್ರೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರ ಅಕ್ಕಿ ಬದಲು ನಗದು ನೀಡುತ್ತಿದೆ.

ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಮುಂದಾದ ವೇಳೆಯಲ್ಲಿ ಅಕ್ಕಿಯ ಸಮಸ್ಯೆ ತಲೆದೋರಿತ್ತು. ಇದೇ ಕಾರಣಕ್ಕೆ ಕೇಂದ್ರ ಸರಕಾರದ ಪಾಲಿನ ಐದು ಕೆಜಿ ಅಕ್ಕಿಯನ್ನು ಪಡಿತರ ಕೇಂದ್ರಗಳ ಮೂಲಕ ವಿತರಣೆ ಮಾಡುತ್ತಿದೆ. ಆದರೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ನಗದು ಹಣವನ್ನು ಪಡಿತರ ಕಾರ್ಡಿನ ಯಜಮಾನರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡುತ್ತಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

ರಾಜ್ಯ ಸರಕಾರದ ಈ ಕ್ರಮದ ವಿರುದ್ದ ಇದೀಗ ಪಡಿತರ ವಿತರಕರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಕೇವಲ ಕೇಂದ್ರ ಸರಕಾರದ ಬಾಬ್ತಿನ ಅಕ್ಕಿಯನ್ನು ವಿತರಣೆ ಮಾಡುವುದರಿಂದ ಪಡಿತರ ವಿತರಕರಿಗೆ ಆರ್ಥಿಕ ನಷ್ಟ ಉಂಟಾಗಲಿದೆ. ಹೀಗಾಗಿ ಈ ತಿಂಗಳು ಅಕ್ಕಿಯ ಚೀಲಗಳನ್ನು ಬಿಡಿಸದೇ, ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Anna Bhagya Ration shops in Karnataka closed from November 10 Doubt that DBT cash will be received instead of rice from now on
Image Credit to Original Source

ರಾಜ್ಯ ಸರಕಾರಕ್ಕೆ ಅಕ್ಕಿ ಪೂರೈಕೆ ಮಾಡು ಸಾಧ್ಯವಾಗದೇ ಇದ್ರೆ, ಅಕ್ಕಿಯ ಜೊತೆಗೆ ಜೋಳ, ರಾಗಿಯನ್ನು ಸೇರಿಸಿಕೊಂಡು ಗ್ರಾಹಕರಿಗೆ 10 ಕೆಜಿಯನ್ನು ವಿತರಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರಕಾರದ ಪಾಲಿನ ಐದು ಕೆಜಿ ಅಕ್ಕಿಯನ್ನು ಮಾತ್ರವೇ ನೀಡುತ್ತಿದ್ದು, ರಾಜ್ಯ ಸರಕಾರದ ಪಾಲಿನ ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ.

ಆದರೆ ಅನ್ನಭಾಗ್ಯ ಯೋಜನೆಯ ಹಣ ಇದೀಗ ಎಲ್ಲಾ ಗ್ರಾಹಕರಿಗೂ ತಲುಪುತ್ತಿಲ್ಲ ಅಂತಾ ಪಡಿತರ ವಿತರಕರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ವಿತರಕರು ಹಾಗೂ ಗ್ರಾಹಕರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸರಕಾರ ಹತ್ತು ಕೆಜಿ ಅಕ್ಕಿಯನ್ನೇ ವಿತರಣೆ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಬಿಗ್​ ಗಿಫ್ಟ್​ : ಕೇವಲ 3 ಸಾವಿರ ವಿನಿಯೋಗಿಸಿ ಗಳಿಸಿ ಲಕ್ಷಾಂತರ ಹಣ !

ನವೆಂಬರ್‌ 7 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಮಾಡುವುದಾಗಿ ಪಡಿತರ ವಿತರಕರು ಕರೆ ಕೊಟ್ಟಿದ್ದಾರೆ. ಈ ತಿಂಗಳು ಈಗಾಗಲೇ ಪಡಿತರ ಅಂಗಡಿಗಳಿಗೆ ಸೇರಿರುವ ಅಕ್ಕಿಯನ್ನು ಬಿಡಿಸದೆಯೇ ಸರಕಾರದ ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ಪಡಿತರ ಕಾರ್ಡುದಾರರಿಗೆ ಸದ್ಯ ಅನ್ನಭಾಗ್ಯ ಯೋಜನೆಯ ಅಕ್ಕಿ ಸಿಗುತ್ತಿಲ್ಲ.

ರಾಜ್ಯದ ಕಾಂಗ್ರೆಸ್‌ ಸರಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನಗದು ಬದಲು ಅಕ್ಕಿ ವಿತರಣೆ ಮಾಡುವುದು ಅಷ್ಟು ಸುಲಭವಲ್ಲ. ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದೆ. ಅಲ್ಲದೇ ಇತರ ರಾಜ್ಯಗಳಲ್ಲಿಯೂ ಕೂಡ ಕರ್ನಾಟಕದ ಅನ್ನಭಾಗ್ಯ ಯೋಜನೆಗೆ ಬೇಕಾಗುಷ್ಟು ಅಕ್ಕಿಯ ಲಭ್ಯತೆ ಇಲ್ಲ.

ಇದನ್ನೂ ಓದಿ : ಮುಂದಿನ ಐದು ವರ್ಷಗಳ ಅವಧಿಗೆ ಸಿಗಲಿದೆ ಫ್ರೀ ಅಕ್ಕಿ, ಬೇಳೆ : ಪ್ರಧಾನಿ ಮೋದಿ ಗುಡ್​ನ್ಯೂಸ್​

ಅನ್ನಭಾಗ್ಯ ಯೋಜನೆಗಾಗಿ ದುಬಾರಿ ಹಣವನ್ನು ನೀಡಿ ಅಕ್ಕಿ ಖರೀದಿ ಮಾಡಲು ರಾಜ್ಯ ಸರಕಾರ ಮನಸ್ಸು ಮಾಡುತ್ತಿಲ್ಲ. ಸರಕಾರ ಪಡಿತರ ವಿತರಕರ ಬೇಡಿಕೆಗೆ ಒಪ್ಪಿದ್ರೂ ಕೂಡ ಅಕ್ಕಿ ಪೂರೈಕೆ ಮಾಡುವುದು ಅಷ್ಟೊಂದು ಸುಲಭವಲ್ಲ. ಇದೇ ಹೊತ್ತಲ್ಲೇ ಸರಕಾರದ ವಿರುದ್ದ ತೊಡೆ ತಟ್ಟಿರುವ ಪಡಿತರ ವಿತರಕರು ತಮ್ಮ ಪಟ್ಟನ್ನು ಸಡಿಲಿಸದೇ ಇದ್ದಲ್ಲಿ ನವೆಂಬರ್‌ ತಿಂಗಳಲ್ಲಿ ರೇಷನ್‌ ಕಾರ್ಡುದಾರರಿಗೆ ಪಡಿತರ ಸಾಮಗ್ರಿಗಳು ಸಿಗುವುದು ಅನುಮಾನ.

Anna Bhagya Ration shops in Karnataka closed from November 10, Doubt that DBT cash will be received instead of rice from now on

Comments are closed.