ವಾಟ್ಸಾಪ್ ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎಂದುಕೊಂಡಿರುವ ಪ್ರಿಪೇಯ್ಡ್ ಗ್ರಾಹಕರಿಗೆ ಸುಪ್ರೀಂಕೋರ್ಟ್ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಸುಪ್ರೀಂ ಕೊರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಏರ್ಟೆಲ್, ರಿಲಯನ್ಸ್ ಜಿಯೋ ಹಾಗೂ ವೋಡಾಫೋನ್ - ಐಡಿಯಾ ಸೇರಿದಂತೆ ವಿವಿಧ ಟೆಲಿಕಾಂ ಆಪರೇಟರ್ ಕಂಪನಿಯ ಚಂದಾದಾರರು ನಿರ್ದಿಷ್ಟ ಸಮಯದ ಬಳಿಕ ತಮ್ಮ ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆಯನ್ನು ಮರಳಿ ಪಡೆಯಬಹುದಾಗಿದೆ ಎಂದು ಹೇಳಿದೆ. ಇದಕ್ಕಾಗಿ ನೀವು ಕೆಲವೊಂದು ಮಹತ್ವದ ವಿಚಾರಗಳನ್ನು ತಿಳಿದು ಕೊಳ್ಳಲೇ ಬೇಕಿದೆ :

ಈ ನಿರ್ಧಾರವು ವಾಟ್ಸಾಪ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ. ಏಕೆಂದರೆ ನೀವು ವಾಟ್ಸಾಪ್ ಖಾತೆಯು ವ್ಯಕ್ತಿಯ ಮೊಬೈಲ್ ಸಂಖ್ಯೆ ಯೊಂದಿಗೆ ನೇರ ಲಿಂಕ್ ಹೊಂದಿದೆ. ಹೀಗಾಗಿ ಯಾವುದೇ ಗ್ರಾಹಕ ತನ್ನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಮೂಲಕ ತಮ್ಮ ಡೇಟಾವನ್ನು ಅಳಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಅಂತಾ ಒತ್ತಿ ಹೇಳಿದೆ.
ಇದನ್ನೂ ಓದಿ : ಹೊಸ ಮೊಬೈಲ್ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್ ಪರಿಶೀಲಿಸೋದನ್ನ ಮರೀಬೇಡಿ
ಹೊಸ ಗ್ರಾಹಕರಿಗೆ ಈಗಾಗಲೇ ನಿಷ್ಕ್ರಿಯಗೊಂಡಿರುವ ಮೊಬೈಲ್ ಸಂಖ್ಯೆಯನ್ನು ನೀಡೋದನ್ನು ನಿಲ್ಲಿಸುವಂತೆ ಮೊಬೈಲ್ ಸೇವಾ ಪೂರೈಕೆದಾರರಿಗೆ ಸೂಚನೆ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್ವಿಎನ್ ಭಟ್ಟಿ ನೇತೃತ್ವದ ನ್ಯಾಯಪೀಠವು, ಚಂದಾದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ಮುನ್ನ ವಾಟ್ಸಾಪ್ ಡೇಟಾವನ್ನು ಅಳಿಸುವ ಹಾಗೂ ಮೆಮೊರಿ ಅಥವಾ ಕ್ಲೌಡ್ನಲ್ಲಿ ಸಂಗ್ರಹವಾ ಗೌಪ್ಯ ಮಾಹಿತಿಗಳನ್ನು ತೆಗೆದುಹಾಕುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಗೌಪ್ಯತೆ ಕಾಪಾಡಿಕೊಳ್ಳುವ ಬಗ್ಗೆ ಚಂದಾದಾರರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಸೇಲ್ 2023 ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಈ ಮೊಟೊರೊಲಾ ಸ್ಮಾರ್ಟ್‌ಪೋನ್ : ಅಷ್ಟಕ್ಕೂ ಏನಿದರ ಫೀಚರ್ಸ್ ?
ನ್ಯಾಯಾಲಯದ ಈ ಆದೇಶವು 2017ರ ಏಪ್ರಿಲ್ನಲ್ಲಿ ದೂರಸಂಪರ್ಕ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಗಳೊಂದಿಗೆ ಹೊಂದಿಕೆ ಹೊಂದಿದೆ. ಇದರ ಅನ್ವಯ ಕನಿಷ್ಟ 90 ದಿನಗಳ ಕಾಲ ಚಂದಾದಾರರ ಕೋರಿಕೆಯ ಮೇರೆಗೆ ಬಳಕೆಯಾಗದ ಅಥವಾ ಸಂಪರ್ಕ ಕಡಿತಗೊಂಡ ಕಾರಣ ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆಯನ್ನು ಕನಿಷ್ಟ 90 ದಿನಗಳ ಕಾಲ ಹೊಸ ಚಂದಾದಾರರಿಗೆ ಮರುಹಂಚಿಕೆ ಮಾಡಬಾರದು ಎಂದು ಸೂಚಿಸುತ್ತದೆ.
ಈ ಸಮಯದಲ್ಲಿ ಆ ಮೊಬೈಲ್ ಸಂಖ್ಯೆಯ ಹಿಂದಿನ ಚಂದಾದಾರರು ತಮ್ಮ ಮಾಹಿತಿಯನ್ನು ಅಳಿಸಿಹಾಕಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಾದ ಬಳಿಕ ಇದೇ ಮೊಬೈಲ್ ಸಂಖ್ಯೆ ಬೇರೊಬ್ಬರಿಗೆ ಸಿಕ್ಕರೂ ಸಹ ಹಳೆಯ ಚಂದಾದಾರರ ಯಾವುದೇ ಮಾಹಿತಿಗಳು ಲೀಕ್ ಆಗುವ ಅಪಾಯ ಇರೋದಿಲ್ಲ.
ಇದನ್ನೂ ಓದಿ : 5,000mAh ಸುದೀರ್ಘ ಬ್ಯಾಟರಿ, 50 ಸೋನಿ ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು OnePlus 11R 5G
ಇನ್ನು ಇದರ ಜೊತೆಯಲ್ಲಿ ಶಾಶ್ವತವಾಗಿ ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆಗಳ ಡಿಜಿಟಲ್ ಸಹಿ ಹಾಗೂ ದಾಖಲೆಯಾದ ಮೊಬೈಲ್ ಸಂಖ್ಯೆ ರದ್ದರಿ ಪಟ್ಟಿ ಅಸ್ತಿತ್ವವನ್ನು ನ್ಯಾಯಾಲಯ ಎತ್ತಿ ಹಿಡಿದೆ. ವಿವಿಧ ಸೇವಾ ಪೂರೈಕೆದಾರರು, ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು ಒಟಿಪಿ ಕಳುಹಿಸುವುದನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದೆ.
supreme court issues important warning for whatsapp users here are the details