Pradhan Mantri Jan Dhan Yojana : ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪ್ರಧಾನ ಮಂತ್ರಿ ಜನ-ಧನ ಯೋಜನೆ (PMJDY) ಖಾತೆ ತೆರೆಯುವಂತೆ ಆದೇಶಿಸಿತ್ತು. ಅದುವರೆಗೂ ಬ್ಯಾಂಕ್ ಮುಖವನ್ನೇ ಕಾಣದ ಅದೆಷ್ಟೋ ಮಂದಿ ಜನಧನ್ ಖಾತೆಯನ್ನು ತೆರೆದಿದ್ದರು. ಇದೀಗ ಸರಕಾರ ಜನಧನ್ ಖಾತೆ ಹೊಂದಿರುವವರಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ದೇಶದ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ಜನಧನ್ ಖಾತೆಯನ್ನು ತೆರೆಯಬಹುದಾಗಿದೆ. ಜನಧನ್ ಖಾತೆಯನ್ನು ತೆರೆಯಲು ಯಾವುದೇ ಹಣವನ್ನು ನೀಡಬೇಕಾಗಿಲ್ಲ. ಶೂನ್ಯ ಬ್ಯಾಲೆನ್ಸ್‌ನಲ್ಲಿ ಈ ಖಾತೆಯನ್ನು ನಿರ್ವಹಣೆ ಮಾಡಬಹುದಾಗಿದೆ. ಜನಧನ್ ಖಾತೆಯನ್ನು ಹೊಂದಿರುವವರಿಗೆ ಶೂನ್ಯ ಬ್ಯಾಲೆನ್ಸ್ ಮಾತ್ರವಲ್ಲ ರೂಪೇ ಡೆಬಿಟ್ ಕಾರ್ಡುಗಳ ಮೂಲಕ ಕೇಂದ್ರ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ದೇಶದಲ್ಲಿ ಇದುವರೆಗೆ ಒಟ್ಟು ದೇಶದಲ್ಲಿ 47 ಕೋಟಿ ಜನರಿಂದ ಜನಧನ್ ಖಾತೆಯನ್ನು ತೆರೆಯಲಾಗಿದೆ. ಜನಧನ್ ಖಾತೆಯನ್ನು ಹೊಂದಿರುವವರಿಗೆ ಸರಕಾರ 10 ಸಾವಿರ ರೂಪಾಯಿ ಓವರ್ ಡ್ರಾಫ್ಟ್ ಸೌಲಭ್ಯವನ್ನು ಪಡೆದು ಕೊಳ್ಳಬಹುದಾಗಿದೆ. ಈ ಓಡಿ ಸೌಲಭ್ಯವನ್ನು ಪಡೆದುಕೊಂಡು ನಂತರದಲ್ಲಿ ಮರುಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಜನಧನ್ ಖಾತೆಯನ್ನು ಆರಂಭಿಸಿ ಆರು ತಿಂಗಳು ಕಳೆದ ನಂತರದಲ್ಲಿ ಈ ಒಡಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ ಒಡಿ ಸೌಲಭ್ಯ ಮಾತ್ರವಲ್ಲದೇ, ವಿಮಾ ಸೌಲಭ್ಯವನ್ನು ಕೇಂದ್ರ ಸರಕಾರ ಒದಗಿಸುತ್ತದೆ. ಜನಧನ್ ಖಾತೆಯನ್ನು ಹೊಂದಿರುವ ವ್ಯಕ್ತಿ ಒಂದಮ್ಮೆ ಸಾವನ್ನಪ್ಪಿದ್ರೆ, ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರವನ್ನು ಕೇಂದ್ರ ಸರಕಾರ ನೀಡಲಿದೆ.

ಅಷ್ಟೇ ಅಲ್ಲಾ ಈ ಖಾತೆದಾರರಿಗೆ ವಿಮಾ ಸೌಲಭ್ಯವನ್ನು ಕೂಡ ಸರಕಾರ ಒದಗಿಸುತ್ತಿದೆ. ಜನಧನ್ ಖಾತೆ ಹೊಂದಿರುವ ಖಾತೆದಾರರು ಆಕಸ್ಮಿಕವಾಗಿ ಮರಣ ಹೊಂದಿದರೆ, 30,000 ಸಾವಿರ ರೂಪಾಯಿ ಮೊತ್ತವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ. ದೇಶದಲ್ಲಿನ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜನಧನ್ ಖಾತೆಯನ್ನು ತೆರೆಯಲು ಅವಕಾಶವಿದೆ.
ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?
ಜನಧನ್ ಖಾತೆಯನ್ನು ಯಾರು ತೆರೆಯಬಹುದು ?
ಜನಧನ್ ಖಾತೆಯಲ್ಲಿ ಯಾವುದೇ ಹಣವೂ ಇಲ್ಲದೇ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ತೆರೆಯಬಹುದಾಗಿದೆ. ಜನಧನ್ ಖಾತೆಯನ್ನು ಹೊಂದಿದವರು ಕನಿಷ್ಠ ಬ್ಯಾಲೆನ್ಸ್ ಹೊಂದುವ ಅಗತ್ಯವಿಲ್ಲ. ಆದರೆ ಚೆಕ್‌ಬುಕ್ ಹೊಂದಬೇಕಾದ್ರೆ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಪಾಡಿಕೊಳ್ಳಬೇಕು.
ಜನಧನ್ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ತಮ್ಮ ಉಳಿತಾಯದ ಹಣಕ್ಕೆ ಕನಿಷ್ಠ ಶೇ.4 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಅಲ್ಲದೇ ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಶೇ. 12 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಅಷ್ಟಕ್ಕೂ ಜನಧನ್ ಖಾತೆಯನ್ನು ತೆರೆಯಲು ಯಾವೆಲ್ಲಾ ದಾಖಲೆಗಳು ಬೇಕು ಅನ್ನೋದನ್ನು ನೋಡುವುದಾದ್ರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್ : ಕೇವಲ 3 ಸಾವಿರ ವಿನಿಯೋಗಿಸಿ ಗಳಿಸಿ ಲಕ್ಷಾಂತರ ಹಣ !
ಜನಧನ್ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್ ಹೊಂದಿದ್ದರೆ ಬೇರೆ ಯಾವುದೇ ದಾಖಲೆಗಳು ಅಗತ್ಯವಿಲ್ಲ. ಒಂದೊಮ್ಮೆ ಆಧಾರ್ ಕಾರ್ಡ್ ಇಲ್ಲದಿದ್ರೆ, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಸರಕಾರ ನೀಡುವ ಯಾವುದೇ ಗುರುತಿನ ಚೀಟಿಯನ್ನು ನೀಡಬಹುದಾಗಿದೆ.
Pradhan Mantri Jan Dhan Yojana Account holders good news, get 2 lakh Rupees Will Be Credited to your Account