ಕೇಂದ್ರ ಸರ್ಕಾರದಿಂದ ಬಿಗ್​ ಗಿಫ್ಟ್​ : ಕೇವಲ 3 ಸಾವಿರ ವಿನಿಯೋಗಿಸಿ ಗಳಿಸಿ ಲಕ್ಷಾಂತರ ಹಣ !

ಅಂಚೆ ಕಚೇರಿಗಳಲ್ಲಿ ಆರ್​ಡಿ ಇಡುವ ಬಗ್ಗೆ ನೀವು ಕೇಳಿರಬಹುದು. ಖುಷಿ ವಿಚಾರ ಏನೆಂದ್ರೆ ಕೇಂದ್ರ ಸರ್ಕಾರ ಅಂಚೆ ಕಚೇರಿಗಳಲ್ಲಿನ ಆರ್​ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಹೊಸ ಬಡ್ಡಿದರವು ಅಕ್ಟೋಬರ್​ 1ರಿಂದಲೇ ಜಾರಿಗೆ ಬಂದಿದೆ.

ಈಗಿನ ಖರ್ಚಿನ ಜಮಾನದಲ್ಲಿ ಹಣ ಉಳಿತಾಯ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಕೈಯಲ್ಲಿಯೋ ಹಣ ಹೇಗೆ ಖಾಲಿ ಆಯ್ತು ಎಂದೇ ಗೊತ್ತಾಗೋದಿಲ್ಲ. ಹೀಗಾಗಿ ಹಣ ಉಳಿತಾಯ ಮಾಡಬೇಕು ಎಂದುಕೊಂಡವರಿಗೆ ಅಂಚೆ ಕಚೇರಿಗಳಲ್ಲಿ ಠೇವಣಿ (Post office FD) ಇಡುವ ಯೋಜನೆಗಳು ನಿಜಕ್ಕೂ ಒಂದು ಒಳ್ಳೆಯ ಆಯ್ಕೆಯಾಗಿದೆ. ಕಡಿಮೆ ಹಣವನ್ನು ಕೂಡಿಡುವ ಮೂಲಕ ನೀವು ಒಮ್ಮೆಲೆ ದೊಡ್ಡ ಮೊತ್ತವನ್ನು ಪಡೆಯಬಹುದಾಗಿದೆ. ಹಾಗಾದರೆ ಆ ಯೋಜನೆ ಯಾವುದು..? ಎಷ್ಟು ಹಣ ಹೂಡಿಕೆ ಮಾಡಬೇಕು..? ಎಷ್ಟು ಹಣ ನಮಗೆ ಸಿಗುತ್ತೆ ಇದೆಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ :

Big gift from the central government Just spend 3 thousand and earn millions of money
Image Credit to Original Source

ಅಂಚೆ ಕಚೇರಿಗಳಲ್ಲಿ ಆರ್​ಡಿ ಇಡುವ ಬಗ್ಗೆ ನೀವು ಕೇಳಿರಬಹುದು. ಖುಷಿ ವಿಚಾರ ಏನೆಂದ್ರೆ ಕೇಂದ್ರ ಸರ್ಕಾರ ಅಂಚೆ ಕಚೇರಿಗಳಲ್ಲಿನ ಆರ್​ಡಿ (Post Office RD)  ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಹೊಸ ಬಡ್ಡಿದರವು ( New Intrest Rate) ಅಕ್ಟೋಬರ್​ 1ರಿಂದಲೇ ಜಾರಿಗೆ ಬಂದಿದೆ. ಈ ಹೊಸ ಬಡ್ಡಿದರದ ಅಡಿಯಲ್ಲಿ ನೀವು ಕೂಡಿಟ್ಟ ಹಣಕ್ಕೆ ಎಷ್ಟು ಲಾಭ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ : ಉಚಿತ ಬಸ್‌ ಪ್ರಯಾಣ, ಗೃಹಲಕ್ಷ್ಮೀ ಯೋಜನೆ ಪುರುಷರಿಗೂ ವಿಸ್ತರಣೆ !

ಮೊದಲೆಲ್ಲ ಐದು ವರ್ಷಗಳ ಕಾಲ ಆರ್​ಡಿಯಲ್ಲಿ ಹಣ ಕೂಡಿಡುತ್ತಿದ್ದವರಿಗೆ ಅಂಚೆ ಕಚೇರಿಯಲ್ಲಿ 6.5 ಪ್ರತಿಶತ ಬಡ್ಡಿದರವನ್ನು ಸರ್ಕಾರ ನೀಡುತ್ತಿತ್ತು. ಆದರೆ ಈಗ ನಿಮ್ಮ ಐದು ವರ್ಷಗಳ ಉಳಿತಾಯದ ಹಣಕ್ಕೆ ಸರ್ಕಾರಚು 6.7 ಪ್ರತಿಶತ ಬಡ್ಡಿಯನ್ನು ನೀಡಲಿದೆ. ಒಂದು ವೇಳೆ ನೀವು ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ಮುಂದಿನ ಐದು ವರ್ಷಗಳವರೆಗೆ ಕೂಡಿಡುತ್ತೀರಿ ಎಂದು ಭಾವಿಸೋಣ.

ಅಂದರೆ ನೀವು ವರ್ಷಕ್ಕೆ 24 ಸಾವಿರ ರೂಪಾಯಿಗಳನ್ನು ಹಾಗೂ ಐದು ವರ್ಷಕ್ಕೆ 1.2 ಲಕ್ಷ ರೂಪಾಯಿಗಳನ್ನು ಕೂಡಿಟ್ಟಂತೆ ಆಯ್ತು. ಈ ಹಣಕ್ಕೆ ರ್ಸಾರವು 6.7 ಪ್ರತಿಶತ ಬಡ್ಡಿದರ ನೀಡುವುದರಿಂದ ನಿಮಗೆ ಹೆಚ್ಚುವರಿ 22,732 ರೂಪಾಯಿಗಳು ಸಿಗಲಿದೆ. ಹೀಗಾಗಿ ಐದು ವರ್ಷಗಳ ಬಳಿಕ ನೀವು 1,42,732 ರೂಪಾಯಿಗಳನ್ನು ಪಡೆಯಬಹುದು.

ಇದನ್ನೂ ಓದಿ : CIBIL Score New Rules : ಸಿಬಿಲ್‌ ಸ್ಕೋರ್‌ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್‌ ಕೊಟ್ಟ RBI

2000 ರೂಪಾಯಿಗಳ ಬದಲಾಗಿ ನೀವು ಐದು ವರ್ಷಗಳ ಕಾಲ 3000 ರೂಪಾಯಿ ವಿನಿಯೋಗ ಮಾಡುತ್ತಾ ಬಂದರೆ ನೀವು 1.80 ಲಕ್ಷ ರೂಪಾಯಿಗಳನ್ನು ಕೂಡಿಟ್ಟಂತೆ ಆಯ್ತು. ಇದಕ್ಕೆ ಸರ್ಕಾರದ ಬಡ್ಡಿ ಕೂಡ ಸೇರಿ ಮೆಚ್ಯೂರಿಟಿ ಬಳಿಕ ನೀವು 2, 14, 097 ರೂಪಾಯಿಗಳನ್ನು ಪಡೆಯಲಿದ್ದೀರಿ. ಇಲ್ಲಿಗೆ ನಿಮಗೆ ಸರ್ಕಾರ 34,097 ರೂಪಾಯಿಗಳನ್ನು ಹೆಚ್ಚುವರಿ ಕೊಟ್ಟಂತೆ ಆಗುತ್ತದೆ.

Big gift from the central government Just spend 3 thousand and earn millions of money
Image Credit to Original Source

ದೇಶದಲ್ಲಿ ಸದ್ಯ ಹಬ್ಬದ ಸೀಸನ್​ ಇರೋದ್ರಿಂದ ಐದು ವರ್ಷಗಳ ಆರ್​ಡಿಗೆ ಕೇಂದ್ರ ಸರ್ಕಾರ ಬಡ್ಡಿದರ ಏರಿಕೆ ಮಾಡಿದೆ. ಇದನ್ನು ಬಿಟ್ಟು ಮಿಕ್ಕ ಯೋಜನೆಗಳಿಗೆ ಹಳೆಯ ಬಡ್ಡಿದರದ ರೂಪದಲ್ಲಿಯೇ ಸರ್ಕಾರ ಹಣ ನೀಡಲಿದೆ. ಹೀಗಾಗಿ ಐದು ವರ್ಷಗಳ ಆರ್​ಡಿ ಮಾಡುವವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಈ ಯೋಜನೆಗಳ ಬಡ್ಡಿದರದ ಪರಿಶೀಲನೆಗಳನ್ನು ನೋಡಿಕೊಳ್ಳುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕೇಂದ್ರ ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳ ಮೇಲೆ ವಿಧಿಸಲಾದ ಬಡ್ಡಿದರಗಳ ಪರಿಶೀಲನಾ ಕಾರ್ಯವನ್ನು ಮಾಡುತ್ತದೆ. ಮೂರು ತಿಂಗಳ ಬಳಿಕ ಕೇಂದ್ರ ಹಣಕಾಸು ಸಚಿವಾಲಯವು ಬಡ್ಡಿದರ ಪರಿಷ್ಕರಣಾ ಕಾರ್ಯವನ್ನು ಮಾಡುತ್ತದೆ.

Big gift from the central government: Just spend 3 thousand and earn millions of money!

Comments are closed.