ಸೋಮವಾರ, ಮೇ 12, 2025
HomeSportsCricketವಿಶ್ವಕಪ್ 2023 ಫೈನಲ್‌ ಪಂದ್ಯ, ಅಹಮದಾಬಾದ್‌ಗೆ ಭಾರತ ಕ್ರಿಕೆಟ್‌ ತಂಡ : ಯಾರು ಭಾರತದ ಎದುರಾಳಿ...

ವಿಶ್ವಕಪ್ 2023 ಫೈನಲ್‌ ಪಂದ್ಯ, ಅಹಮದಾಬಾದ್‌ಗೆ ಭಾರತ ಕ್ರಿಕೆಟ್‌ ತಂಡ : ಯಾರು ಭಾರತದ ಎದುರಾಳಿ ?

- Advertisement -

World Cup 2023 Final : ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ (Indian Cricket Team) ಈಗಾಗಲೇ ವಿಶ್ವಕಪ್‌ 2023 ರ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ನವೆಂಬರ್ 19ರ ಭಾನುವಾರದಂದು ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಇಂದು ತೆರಳಲಿದೆ. ಭಾರತದ ಜೊತೆಗೆ ಫೈನಲ್‌ ಪಂದ್ಯ ಆಡುವವರಾರು ಅನ್ನೋ ಕುತೂಹಲಕ್ಕೆ ಇನ್ನೂ ತೆರೆಬಿದ್ದಿಲ್ಲ.

ಮುಂಬೈನ ವಾಂಖಡೆ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ದದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕಳೆದ ವಿಶ್ವಕಪ್‌ನಲ್ಲಿ ಸೋಲುಣಿಸಿದ್ದ ನ್ಯೂಜಿಲೆಂಡ್‌ ತಂಡದ ವಿರುದ್ದ ಸೇಡು ತೀರಿಸಿಕೊಂಡಿದೆ. ಇದೀಗ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Indian cricket team left for Ahmedabad for World Cup 2023 final match
Image Credit to Original Source

ಏಕದಿನ ವಿಶ್ವಕಪ್‌ ಆಡಲು ಭಾರತ ತಂಡ ಭರ್ಜರಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಭಾರತ ತಂಡ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದೆ. ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ನ್ಯೂಜಿಲೆಂಡ್‌ ವಿರುದ್ದ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾದ್ರೆ, ಮೊಹಮ್ಮದ್‌ ಸೆಮಿ ಮಾರಕ ಬೌಲಿಂಗ್‌ ದಾಳಿಗೆ ನ್ಯೂಜಿಲೆಂಡ್‌ ಆಟಗಾರರು ತತ್ತರಿಸಿ ಹೋಗಿದ್ದಾರೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ವಿಶ್ವದಾಖಲೆಯ ಶತಕ, ವಿಶ್ವಕಪ್‌ 2023 ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಕಳೆದ ಬಾರಿ ಸೆಮಿಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ ಈ ಬಾರಿ ಆ ತಪ್ಪನ್ನು ಮಾಡಲಿಲ್ಲ. ಅದ್ವುತ ಆಟದ ನೆರವಿನಿಂದ ಈಗಾಗಲೇ ಭಾರತ ಕ್ರಿಕೆಟ್‌ ತಂಡ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಶತಾತಗತಾಯ ಮೂರನೇ ಬಾರಿ ವಿಶ್ವಕಪ್‌ ಟ್ರೋಫಿ ಗೆಲ್ಲಲು ಭಾರತ ಹವಣಿಸುತ್ತಿದೆ.

Indian cricket team left for Ahmedabad for World Cup 2023 final match
Image Credit to Original Source

ಇಂದು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಲ್ಲಿ ಭರ್ಜರಿ ಆಟದ ಮೂಲಕ ಅಂಕಪಟ್ಟಿಯಲ್ಲಿ ಈಗಾಗಲೇ ಎರಡನೇ ಸ್ಥಾನದಲ್ಲಿದೆ. ಯಾವ ತಂಡ ಗೆಲವು ಸಾಧಿಸುತ್ತೋ ಆ ತಂಡ ಈ ಬಾರಿಯ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಡಲಿದೆ.

ಇದನ್ನೂ ಓದಿ : ವಿಶ್ವಕಪ್ 2023 ತಂಡ ಪ್ರಕಟ : ವಿರಾಟ್ ಕೊಹ್ಲಿ ನಾಯಕ, ರೋಹಿತ್‌ ಶರ್ಮಾಗಿಲ್ಲ ಸ್ಥಾನ

ವಿಶ್ವಕಪ್‌ನಲ್ಲಿ ಎಲ್ಲಾ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಇನ್ನು ಒಂದೇ ಒಂದು ಪಂದ್ಯವನ್ನು ಗೆದ್ದರೆ ಭಾರತ ಕ್ರಿಕೆಟ್‌ನಲ್ಲಿ ವಿಶ್ವವನ್ನೇ ಗೆದ್ದ ಸಾಧನೆ ಮಾಡಲಿದೆ. ಈ ಹಿಂದೆ ಕಪಿಲ್‌ ದೇವ್‌ (Kapil Dev) ನೇತೃತ್ವದ ಟೀಂ ಇಂಡಿಯಾ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಗೆಲುವು ಕಂಡಿತ್ತು.

Indian cricket team left for Ahmedabad for World Cup 2023 final match
Image Credit to Original Source

ಮಹೇಂದ್ರ ಸಿಂಗ್‌ ಧೋನಿ (MS Dhoni)  ನೇತೃತ್ವದ ಭಾರತ ಕ್ರಿಕೆಟ್ ತಂಡ ಎರಡನೇ ಬಾರಿಗೆ ವಿಶ್ವಕಪ್‌ ಗೆಲುವು ಕಂಡಿತ್ತು. ಆದರೆ ಕಳೆದ ಬಾರಿ ಸೆಮಿಫೈನಲ್‌ ನಲ್ಲಿ ಮುಗ್ಗರಿಸಿದ್ದ ಭಾರತ ಈ ಬಾರಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದು, ರೋಹಿತ್‌ ಶರ್ಮಾ (Rohit Sharma) ನೇತೃತ್ವದಲ್ಲಿ ವಿಶ್ವಕಪ್‌ ಗೆಲ್ಲುವ ಫೇವರೇಟ್‌ ತಂಡ ಎನಿಸಿಕೊಂಡಿದೆ.

ಇದನ್ನೂ ಓದಿ :  IPL 2024 : ನಿವೃತ್ತಿ ಘೋಷಿಸಿದ RCB ಸ್ಟಾರ್ ಆಟಗಾರ

ಭಾರತ ತಂಡ :

ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್‌ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ದ ಕೃಷ್ಣ.

Indian cricket team left for Ahmedabad for World Cup 2023 final match

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular