ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯಿಂದ ಜನಮನ್ನಣೆ ಗಳಿಸಿದೆ. ಅದರಲ್ಲೂ ಮಹಿಳೆಯರು ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮೆಚ್ಚಿ ಕೊಂಡಿದ್ದಾರೆ. ಈ ಮಧ್ಯೆ ಸರ್ಕಾರದ ಮೇಲೆ ಮಹಿಳೆಯರು ತೋರುತ್ತಿರೋ ಈ ಒಲವನ್ನು ಮತವಾಗಿ ಪರಿವರ್ತಿಸೋ ಉತ್ಸಾಹದಲ್ಲಿರೋ ಕಾಂಗ್ರೆಸ್ ನ ಮಹಿಳಾ ಮಣಿಗಳು ಲೋಕಸಭಾ ಚುನಾವಣೆಯ (Lokasabha Election 2024) ಟಿಕೇಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಲ್ಲಿ 15 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಿಳಾ ನಾಯಕಿಯರಿಂದ ಟಿಕೇಟ್ ಗೆ ಬೇಡಿಕೆ ಕೇಳಿಬಂದಿದೆ.
ಹೌದು, ರಾಜ್ಯದಲ್ಲಿ ಮಹಿಳಾ ಯೋಜನೆಗಳು ಹಾಗೂ ಗ್ಯಾರಂಟಿ ಇಂಪ್ಯಾಕ್ಟ್ ನಿಂದ ಲೋಕಸಭಾ ಚುನಾವಣೆಗೆ ಪ್ರಮೀಳಾ ಸಾಮ್ರಾಜ್ಯದ ಟಿಕೇಟ್ ಬೇಡಿಕೆ ಹೆಚ್ಚಿದೆ. ಮಹಿಳಾ ಮೀಸಲಾತಿ ಎಫೆಕ್ಟ್ ಕೂಡ ಕೆಲಸ ಮಾಡಿದ್ದು, ಕಾಂಗ್ರೆಸ್ ನಲ್ಲಿ ಲೋಕಸಭಾ ಚುನಾವಣೆಗೆ ಮಹಿಳಾ ಮಣಿಗಳಿಂದ ಟಿಕೆಟ್ ಗಾಗಿ ಭಾರೀ ಡಿಮ್ಯಾಂಡ್ ವ್ಯಕ್ತವಾಗಿದೆ.

ಇದುವರೆಗೂ ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಸಿಕ್ಕ ಪ್ರಾಧಾನ್ಯತೆ ಅಷ್ಟಕಷ್ಟೇ. ಆದರೆ ಈ ಭಾರಿ ಮಾತ್ರ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ತಲೆನೋವು ಆಗುವಷ್ಟರ ಮಟ್ಟಿಗೆ ಮಹಿಳಾಮಣಿಗಳು ದುಂಬಾಲು ಬಿದ್ದಿದ್ದಾರೆ. ಅದರಲ್ಲೂ 14 ಲೋಕಾ ಕ್ಷೇತ್ರಗಳಲ್ಲಿ ಮಹಿಳಾ ನಾಯಕಿಯರಿಂದ ಟಿಕೆಟ್ ಗಾಗಿ ಲಾಬಿ ಈಗಾಗಲೇ ಆರಂಭವಾಗಿದೆ.
ಇದನ್ನೂ ಓದಿ : ಬಿಜೆಪಿಗೆ ಅನಿವಾರ್ಯವಾದ್ರಾ ಬಿವೈ ವಿಜಯೇಂದ್ರ ! ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ BJP ಹೈಕಮಾಂಡ್
ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೇ ಅಚ್ಚರಿ ಉಂಟಾಗುವಷ್ಟರ ಮಟ್ಟಕ್ಕೆ ಮಹಿಳಾ ನಾಯಕಿಯರ ಟಿಕೆಟ್ ಲಾಬಿ ನಡೆದಿದೆ. ಮಹಿಳೆಯರಿಗೆ ಸರ್ಕಾರ ಹಣಕಾಸಿನ ನೆರವು ನೀಡಿದೆ. ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದೆ. ಹೀಗಾಗಿ ಸಹಜವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರೋದರಿಂದ ಚುನಾವಣೆಯೂ ಸುಲಲಿತ ಅನ್ನೋದು ಮಹಿಳಾ ನಾಯಕಿಯರ ಲೆಕ್ಕಚಾರ.
ಹೀಗಾಗಿ ರಾಜ್ಯದ ನಾನಾ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ನಾಯಕಿಯರು, ಸಚಿವರ ಸಂಬಂಧಿಗಳು, ಸಚಿವರು,ಶಾಸಕರ ಕುಟುಂಬಸ್ಥರು,ಸಾಮಾನ್ಯ ಕಾರ್ಯಕರ್ತೆಯರು ಟಿಕೇಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಇನ್ನು ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಯಾವ ಕ್ಷೇತ್ರಕ್ಕೆ ಯಾರ ಯಾರು ಅಕಾಂಕ್ಷಿ ಅನ್ನೋದನ್ನು ನೋಡೋದಾದರೇ…
ಇದನ್ನೂ ಓದಿ : ಸಿಎಂ ಆಯ್ತು, ಕಾಂಗ್ರೆಸ್ ನಲ್ಲಿ ಇನ್ಮುಂದೇ ಡಿಸಿಎಂ ಫೈಟ್ : ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್
1. ಬೆಂಗಳೂರು ದಕ್ಷಿಣ- ಸೌಮ್ಯ ರಾಮಲಿಂಗಾ ರೆಡ್ಡಿ
2. ಚಾಮರಾಜನಗರ ಮೀಸಲು ಕ್ಷೇತ್ರ- ಮಹಿಳಾಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ
3.ಮಂಡ್ಯ ನಟಿ ಮಾಜಿ ಸಂಸದೆ ರಮ್ಯಾ ಹೆಸರು
4. ಬೆಂಗಳೂರು ಉತ್ತರ ಕುಸುಮಾ ಹನುಮಂತರಾಯಪ್ಪ
5. ತುಮಕೂರು ಕ್ಷೇತ್ರಕ್ಕೆ ತುರುವೆಕೆರೆಯ ಕಾಂಗ್ರೆಸ್ ನಾಯಕಿ ಗೀತಾ ರಾಜಣ್ಣ ಡಿಮ್ಯಾಂಡ್.
6. ಶಿವಮೊಗ್ಗ ಕ್ಕೆ ಗೀತಾ ಶಿವರಾಜ್ ಕುಮಾರ್ ಗಾಗಿ ಸಹೋದರ ಮಧು ಟಿಕೇಟ್ ಬೇಡಿಕೆ ಇಟ್ಟಿದ್ದಾರೆ.
7. ದಾವಣಗೆರೆ ಸಚಿವ ಮಲ್ಲಿಕಾರ್ಜುನ ಪತ್ನಿ ಪ್ರಭಾ ಗಾಗಿ ಲಾಬಿ ನಡೆದಿದೆ
8.ಬಾಗಲಕೋಟೆಯಲ್ಲಿ ರಕ್ಷಿತಾ ಈಟಿ, ಶಿಲ್ಪಾ ಕಾಶಪ್ಪನವರ್ ಇಬ್ಬರು ನಾಯಕಿಯರ ಪೈಪೋಟಿ ನಡೆದಿದೆ.
9. ಬಿಜಾಪುರಕ್ಕೆ ಕಾಂತಾನಾಯ್ಕ್ ಬೇಡಿಕೆ
10. ಚಿಕ್ಕಮಗಳೂರು- ಉಡುಪಿ ಟಿಕೆಟ್ ಕೇಳುತ್ತಿದ್ದಾರೆ ಆರತಿ ಕೃಷ್ಣ
11. ಕೋಲಾರಕ್ಕೆ ಕೆ ಹೆಚ್ ಮುನಿಯಪ್ಪ ಪುತ್ರಿ ರೂಪ ಶಶಿಧರ್ ಕಣಕ್ಕಿಳಿಯೋ ಚಿಂತನೆ
ಇದನ್ನೂ ಓದಿ : 2019 ರಿಂದ 23 ರ ಅವಧಿಯ ಅಕ್ರಮ: ಬಿಜೆಪಿಗೆ ಬಿಬಿಎಂಪಿ ಕಂಟಕ
ಇನ್ನೂ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಪೂರ್ಣಿಮಾ ಶ್ರೀನಿವಾಸ್, ಸಚಿವ ದಿನೇಶ್ ಗುಂಡೂರಾವ್ ಪತ್ನಿ ಧಾರವಾಡ ಲೋಕಾ ಕ್ಷೇತ್ರಕ್ಕೆ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಸಚಿವ ಕೃಷ್ಣ ಬೈರೈಗೌಡರ ಪತ್ನಿ ಸೇರಿದಂತೆ ಹಲವು ಮಹಿಳಾ ಮಣಿಗಳ ಹೆಸರು ಕೇಳಿಬಂದಿದೆ. ಹೀಗಾಗಿ ಕಾಂಗ್ರೆಸ್ ಗೆ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ನಿಜಕ್ಕೂ ಕಗ್ಗಂಟಾಗೋ ಸಾದ್ಯತೆ ಇದೆ.

Pushpa, Rupa, Veena, Soumya, Ramya, Kusuma: 15 women lobby for Congress Lok Sabha Election 2024 ticket