ಸಿಎಂ ಆಯ್ತು, ಕಾಂಗ್ರೆಸ್ ನಲ್ಲಿ ಇನ್ಮುಂದೇ ಡಿಸಿಎಂ ಫೈಟ್‌ : ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್‌

ಲೋಕಸಭೆ ಚುನಾವಣೆ (Loka Sabha Election 2024) ಬಳಿಕ ಎರಡನೇ ಟರ್ಮ್ ನ ಸಿಎಂ ಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (Next CM DK Shivakumar)  ಏರಲಿದ್ದಾರೆ ಎಂಬ ಮಾತಿತ್ತು. ಆದರೆ ಸಿಎಂ ಸ್ಥಾನಕ್ಕೆ ಏರೋ ಮುನ್ನವೇ ಡಿಸಿಎಂ ಸ್ಥಾನದಲ್ಲೇ ಡಿಕೆ ಶಿವಕುಮಾರ್ ಹಸ್ತಕ್ಷೇಪ ಎಲ್ಲೇ ಮೀರಿದ್ದು, ಕನಕಪುರ ಬಂಡೆಯ ಈ ಓಟ ಹಾಗೂ ಆಟಕ್ಕೆ ಬ್ರೇಕ್ ಹಾಕಲು ಸಿದ್ಧರಾಮಯ್ಯ ಪಡೆ (CM Siddaramaiah) ಪ್ಲ್ಯಾನ್ ಬಿ ಸಿದ್ಧಪಡಿಸಿದೆ.

ಬೆಂಗಳೂರು : ರಾಜ್ಯದಲ್ಲಿ ಸಿಎಂ ಅಧಿಕಾರ ಹಂಚಿಕೆ ಸುದ್ದಿ ಇತ್ತು. ಲೋಕಸಭೆ ಚುನಾವಣೆ (Loka Sabha Election 2024) ಬಳಿಕ ಎರಡನೇ ಟರ್ಮ್ ನ ಸಿಎಂ ಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (Next CM DK Shivakumar)  ಏರಲಿದ್ದಾರೆ ಎಂಬ ಮಾತಿತ್ತು. ಆದರೆ ಸಿಎಂ ಸ್ಥಾನಕ್ಕೆ ಏರೋ ಮುನ್ನವೇ ಡಿಸಿಎಂ ಸ್ಥಾನದಲ್ಲೇ ಡಿಕೆ ಶಿವಕುಮಾರ್ ಹಸ್ತಕ್ಷೇಪ ಎಲ್ಲೇ ಮೀರಿದ್ದು, ಕನಕಪುರ ಬಂಡೆಯ ಈ ಓಟ ಹಾಗೂ ಆಟಕ್ಕೆ ಬ್ರೇಕ್ ಹಾಕಲು ಸಿದ್ಧರಾಮಯ್ಯ ಪಡೆ (CM Siddaramaiah) ಪ್ಲ್ಯಾನ್ ಬಿ ಸಿದ್ಧಪಡಿಸಿದೆ.

ಐದು ವರ್ಷಗಳ ಸರ್ಕಾರದ ಅವಧಿಯಲ್ಲಿ, ಎರಡನೇ ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದು, ಪಕ್ಷವನ್ನು ಗೆಲ್ಲಿಸಿದ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೆ ಏರಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿದೆ. ಆದರೆ ಇದಕ್ಕೂ ಮುನ್ನವೇ ಡಿಸಿಎಂ ಡಿಕೆಶಿ ಸರ್ಕಾರ,‌ ಅಧಿಕಾರಿಗಳು ಹಾಗೂ ಇತರ ಸಚಿವರ ಪಾಲಿಗೆ ನುಂಗಲಾರದ ತುಪ್ಪಾಗಿ ಪರಿಣಮಿಸಿದ್ದಾರೆ.

Karnataka 2 DCM Demands for Congress Leaders, Government Siddaramaiah Vs DK Shivakumar
Image Credit To Original Source

ಡಿಸಿಎಂ ಡಿಕೆ ಶಿವಕ ಸದ್ಯ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ‌.ಆದರೆ ಅವರ ಆಡಳಿತ ಮಾತ್ರ ಮುಖ್ಯಮಂತ್ರಿಗಳಿಗೂ ಸೆಡ್ಡು ಹೊಡೆಯುವಂತಿದೆ. ಎಲ್ಲ ಕಾಮಗಾರಿಗಳ ಫಂಡ್ ರಿಲೀಸ್ ಗೆ ತಡೆ ಒಡ್ಡುವುದು. ಬೆಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಪಡೆಯಲು ಯತ್ನಿಸುತ್ತಿರುವುದು ಇದೆಲ್ಲ ಸಚಿವ ಸಂಪುಟದ ಇತರ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.

ಹೀಗಾಗಿ ಡಿ.ಕೆ.ಶಿವಕುಮಾರ್ ಓಟವನ್ನು ಕಟ್ಟಿಹಾಕಲು ಕಾಂಗ್ರೆಸ್ ಶಾಸಕರು, ಸಚಿವರು ಪ್ಲ್ಯಾನ್ ಬಿ ರೂಪಿಸಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿಗೆ ಸಿದ್ದು ಟೀಂ ಒತ್ತಡ ಹೇರಲು ಆರಂಭಿಸಿದ್ದಾರೆ. ಆ ಮೂಲಕ ಡಿಕೆಶಿಯ ನಂ 2 ಸ್ಥಾನಕ್ಕೆ ಧಕ್ಕೆ ತರೋದು ಸಿದ್ಧು ಟೀಂ ಪ್ಲ್ಯಾನ್.

ಇದನ್ನೂ ಓದಿ : ಬಿಜೆಪಿ ಹೈಕಮಾಂಡ್ ಜೊತೆ ಎಚ್‌ಡಿ ಕುಮಾರಸ್ವಾಮಿ ಚರ್ಚೆ : ಗಣೇಶ ಚತುರ್ಥಿ ಬಳಿಕ ಜೆಡಿಎಸ್‌ – ಬಿಜೆಪಿ ಮೈತ್ರಿ

ಸರ್ಕಾರದಲ್ಲಿ ನಂ 2 ಸಿಎಂ, ನಂ 2 ಡಿಸಿಎಂ ನಂತೆ ನಾನೆ ಎಂದು ಹಠಕ್ಕೆ ಬಿದ್ದಿರುವ ಡಿಕೆ ಶಿವಕುಮಾರ್ಎ‌, ಎಲ್ಲಾ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ.‌ ಸರ್ಕಾರದ ಪ್ರತಿ ಜಾಹಿರಾತಿಗೂ ಡಿಕೆ ಶಿವಕುಮಾರ್‌ ಅವರ  ಫೋಟೋ ಹಾಕುವಂತೆ ತಾಕೀತು ಮಾಡಿದ್ದು, ತಮ್ಮ ಇಲಾಖೆಗಳಿಗೆ ಮೂಗು ತೂರಿಸುತ್ತಾರೆ ಎಂದು ಸಿದ್ದರಾಮಯ್ಯ ಬಣದ ಸಚಿವರ ಅಸಮಧಾನ ವ್ಯಕ್ತಪಡಿಸಿದೆ.

ಹೀಗಾಗಿಯೇ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಠಿಗೆ ಒತ್ತಡ ಹೇರುತ್ತಿರುವ ಸಿದ್ದರಾಮಯ್ಯ ಬಣ, ಜಾತಿ ಹಾಗೂ ಪ್ರಾದೇಶಿಕತೆ ಆಧರಿಸಿ ರಾಜ್ಯದಲ್ಲಿ ಇನ್ನೆರಡು ಡಿಸಿಎಂ ಸ್ಥಾನ ಸೃಷ್ಟಿಸಬೇಕೆಂಬ ಮಾತನ್ನು ಇತ್ತೀಚಿಗೆ ಸಿಎಂ ಸಿದ್ಧರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಕೆ.ಎನ್.ರಾಜಣ್ಣ ಹೇಳಿದ್ದರು.

ಇದನ್ನೂ ಓದಿ : ಜೆಡಿಎಸ್, ಬಿಜೆಪಿ ಮೈತ್ರಿಗೂ ಮುನ್ನ ಮಾತುಕತೆ: ಎಚ್‌ಡಿ ದೇವೇಗೌಡರು ನರೇಂದ್ರ ಮೋದಿ ಮುಂದಿಟ್ಟ ಕಂಡಿಶನ್ಸ್ ಏನು ಗೊತ್ತಾ ?

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಎನ್.ರಾಜಣ್ಣ ಈ ಹೇಳಿಕೆ ಸಿದ್ಧರಾಮಯ್ಯನವರ ತಂಡ ಡಿಕೆ‌ ಶಿವಕುಮಾರ್ ವಿರುದ್ಧ ನಡೆಸ್ತಿರೋ ಷಡ್ಯಂತ್ರಗಳಿಗೆ ಸಾಕ್ಷಿ ಒದಗಿಸಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಒಂದೊಮ್ಮೆ ಡಿಸಿಎಂ ಸ್ಥಾನದಲ್ಲಿರೋ ಡಿಕೆ ಶಿವಕುಮಾರ್ ಇದೇ ಪ್ರಮಾಣದಲ್ಲಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಲ್ಲಿ ಲೋಕಸಭೆ ಎಲೆಕ್ಷನ್ ಬಳಿಕ ಸಿಎಂ ಸ್ಥಾನ ಕೇಳೋ ಸಾಧ್ಯತೆ ಇದೆ. ಅಲ್ಲದೇ ಈ ವೇಳೆ ಡಿಕೆ ಶಿವಕುಮಾರ್ ಮಾತಿಗೆ ಇತರರು ಬೆಂಬಲ ಸೂಚಿಸಿದಲ್ಲಿ ಮತ್ತೆ ಸರ್ಕಾರದಲ್ಲಿ ಅಸ್ಥಿರತೆ ಮೂಡಬಹುದು.

Karnataka 2 DCM Demands for Congress Leaders, Government Siddaramaiah Vs DK Shivakumar
Image Credit To Original Source

ಇನ್ನೆರಡು ಡಿಸಿಎಂ ಸ್ಥಾನ ಸೃಷ್ಟಿಯಾದರೇ, ಡಿಸಿಎಂ ಸ್ಥಾನದ ಮಹತ್ವ ತಾನಾಗಿಯೇ ಕಡಿಮೆಯಾಗಲಿದೆ. ಅಲ್ಲದೇ ಸಚಿವರು, ಶಾಸಕರು, ಅಧಿಕಾರಿಗಳು ಡಿಸಿಎಂ ಸ್ಥಾನಕ್ಕೆ ನೀಡೋ ಬೆಲೆಯೂ ಸಹಜವಾಗಿಯೇ ಕಡಿಮೆಯಾಗುತ್ತೆ. ಹೀಗಾಗಿ ಡಿಸಿಎಂ ಸ್ಥಾನದ ಸಂಖ್ಯೆ ಹೆಚ್ಚಾಗಬೇಕೆಂಬುದು ಸಿದ್ಧು ಬಣದ ಅಭಿಮತ.

ಆದರೆ ಸಿದ್ಧು, ಡಿಕೆಶಿ ಬಣದ ಹೊರತಾಗಿಯೂ ಕಾಂಗ್ರೆಸ್ ನಲ್ಲಿ ಈ ರೀತಿಯ ಡಿಸಿಎಂ ಸ್ಥಾನದ ಸೃಷ್ಟಿಗೆ ವಿರೋಧಿಸುವ ಬಣವಿದ್ದು, ಯಾವುದೇ ಕಾರಣಕ್ಕೂ ಈ ರೀತಿ ಹುದ್ದೆ ಸೃಷ್ಟಿಸಬಾರದು. ಡಿಸಿಎಂ ಹುದ್ದೆ ಸಾಂವಿಧಾನಿಕವಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಸಿಎಂ ಸ್ಥಾನದ ಅವಧಿ ಹಂಚಿಕೆ ವಿಚಾರಕ್ಕೆ ಸುದ್ದಿಯಾಗಿದ್ದ ಕಾಂಗ್ರೆಸ್ ಇನ್ಮೇಲೆ ಡಿಸಿಎಂ ಸ್ಥಾನಕ್ಕಾಗಿ ಮತ್ತಷ್ಟು ಕಿತ್ತಾಟಗಳು ನಡೆದರೂ ಅಚ್ಚರಿಯೇನಿಲ್ಲ.

Karnataka 2 DCM Demands for Congress Leaders, Government Siddaramaiah Vs DK Shivakumar

Comments are closed.