Vasuki Vaibhav Marriage : ಸ್ಯಾಂಡಲ್ವುಡ್ನ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೆಶಕ ವಾಸುಕಿ ವೈಭವ್ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಸಂಸ್ಕೃತಿ ಗೋಕುಲಂ ಕಲ್ಯಾಣ ಮಂಟಪದಲ್ಲಿ ವಾಸುಕಿ ವೈಭವ್ ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಂ (Brunda Vikarm) ಎಂಬವರ ಜೊತೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಅಯ್ಯಂಗಾರ್ ಸಂಪ್ರದಾಯದಂತೆ ಇಬ್ಬರ ವಿವಾಹ ಕಾರ್ಯಕ್ರಮ ಶಾಸ್ತ್ರೋಸ್ತ್ರವಾಗಿ ನೆರವೇರಿದೆ.
ಮದುವೆ ಕಾರ್ಯಕ್ರಮದಲ್ಲಿ ವಾಸುಕಿ ವೈಭವ್ ಹಾಗೂ ಬೃಂದಾ ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರಿಗೆ ಆಹ್ವಾನ ನೀಡಲಾಗಿತ್ತು. ಈಗಾಗಲೇ ಸಾಕಷ್ಟು ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಇಬ್ಬರ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ. ಬಿಗ್ಬಾಸ್ ಸೀಸನ್ 7ರ ಸ್ಪರ್ಧಿ ಕೂಡ ಆಗಿರುವ ವಾಸುಕಿ ವೈಭವ್ ಈ ಸೀಸನ್ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈ ಸೀಸನ್ನಲ್ಲಿ ವಾಸುಕಿ ವೈಭವ್ ಕಿರುತೆರೆ ನಟಿ ಚಂದನಾ ಜೊತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

ಬಿಗ್ಬಾಸ್ ಮನೆಯ ಹೊರಗೂ ಇವರ ಸ್ನೇಹ ಮುಂದುವರಿದಿತ್ತು. ಹೀಗಾಗಿ ಅಭಿಮಾನಿಗಳು ಕೊನೆಕ್ಷಣದವರೆಗೂ ವಾಸುಕಿ ವೈಭವ್ ಹಾಗೂ ಚಂದನಾ ಅನಂತಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದೆ ನಂಬಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿದ್ದು ವಾಸುಕಿ ವೈಭವ್ ಬಹುಕಾಲದ ಗೆಳತಿಯ ಫೋಟೋ ರಿವೀಲ್ ಆಗಿದೆ.
ಇದನ್ನೂ ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್
ವಾಸುಕಿ ವೈಭವ್ ಗಾಯಕನ ಜೊತೆ ಜೊತೆಯಲ್ಲಿ ರಂಗಭೂಮಿ ಕಲಾವಿದ ಸಹ ಹೌದು. ಸುದೀಪ್ ಅಭಿನಯದ ವಿಕ್ರಾಂತ್ ರೋಣ ಹಾಗೂ ಇತ್ತೀಚಿಗೆ ತೆರೆಕಂಡ ಟಗರು ಪಲ್ಯ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ವಾಸುಕಿ ವೈಭವ್ ಬಣ್ಣ ಹಚ್ಚಿದ್ದಾರೆ. ಇನ್ನು ವಾಸುಕಿ ವೈಭವ್ ಪತ್ನಿ ಬೃಂದಾ ವಿಕ್ರಂ ಕೂಡ ರಂಗಕಲಾವಿದೆ ಹಾಗೂ ಶಿಕ್ಷಕಿ ಕೂಡ ಆಗಿದ್ದಾರೆ.
ಬಹುಕಾಲದಿಂದ ಇವರಿಬ್ಬರು ಜೊತೆಯಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ವಾಸುಕಿ ವೈಭವ್ ಈವರೆಗೆ ಎಲ್ಲಿಯೂ ಕೂಡ ತಮ್ಮ ಹಾಗೂ ಬೃಂದಾ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿರಲೇ ಇಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಆ್ಯಂಕರ್ ಅನುಶ್ರೀ ಯುಟ್ಯೂಬ್ ಚಾನೆಲ್ನಲ್ಲಿ ಅನುಶ್ರೀ ವಾಸುಕಿ ವೈಭವ್ ಮದುವೆ ಸುದ್ದಿ ಕೇಳಿದ ಸಂದರ್ಭದಲ್ಲಿ ಹಿರಿಯ ನಟಿ ತಾರಾ ಅನುರಾಧಾ ವಾಸುಕಿ ವೈಭವ್ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯನ್ನು ರಿವೀಲ್ ಮಾಡಿದ್ದರು.
ಇದನ್ನೂ ಓದಿ : ರಾಜಕೀಯಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ! ಬರ್ತಡೇ ದಿನವೇ ಬಿಗ್ ಅನೌನ್ಸ್ ಮೆಂಟ್ ?

ಇದಾದ ಬಳಿಕ ವಾಸುಕಿ ವೈಭವ್ ಹಾಗೂ ಚಂದನಾ ಅನಂತ ಕೃಷ್ಣ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ವಾಸುಕಿ ವೈಭವ್ ಸ್ಯಾಂಡಲ್ವುಡ್ನ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವುಗಳಲ್ಲಿ 2018ರಲ್ಲಿ ತೆರೆಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಹಾಡುಗಳು ವಾಸುಕಿ ವೈಭವ್ ಸಿನಿ ಕೆರಿಯರ್ಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಇದಾದ ಬಳಿಕ ಮುಂದಿನ ನಿಲ್ದಾಣ, ಹರಿಕತೆ ಅಲ್ಲ ಗಿರಿಕತ, ತತ್ಸಮ ತದ್ಭವ ಹೀಗೆ ಸಾಲು ಸಾಲು ಸಿನಿಮಾದ ಹಾಡುಗಳಿಗೆ ವಾಸುಕಿ ವೈಭವ್ ದನಿಯಾಗಿದ್ದಾರೆ.
ಇದನ್ನೂ ಓದಿ : ಅಬ್ಬಬ್ಬಾ… ಬಿಗ್ಬಾಸ್ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡ ಸ್ಪರ್ಧಿ
singer Vasuki Vaibhav who entered married life: Who is this girl ?