ವಿಶ್ವಕಪ್‌ ಸೆಮಿಫೈನಲ್‌ : ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡ ದಕ್ಷಿಣ ಆಫ್ರಿಕಾ, 8 ನೇ ಬಾರಿ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ

SA va AUS  World Cup 2023 Semi Final : ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ದ ಆಸ್ಟ್ರೇಲಿಯ ತಂಡ ರೋಚಕ ‌3 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ 8 ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

SA va AUS  World Cup 2023 Semi Final : ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ದ ಆಸ್ಟ್ರೇಲಿಯ ತಂಡ ರೋಚಕ ‌3 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ 8 ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ನವೆಂಬರ್‌ 19 ರಂದು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸ್ಟ್ರೇಲಿಯಾ ಬೌಲರ್‌ ಸ್ಟಾರ್ಕ್‌ ಹಾಗೂ ಹಜಲ್‌ವುಡ್‌ ಆಘಾತ ನೀಡಿದ್ರು. ದಕ್ಷಿಣ ಆಫ್ರಿಕಾನ ನಾಯಕ ಬುವಾಮ ಅವರನ್ನು ಶೂನ್ಯಕ್ಕೆ ಸ್ಟಾರ್ಕ್‌ ಬಲಿ ಪಡೆದ್ರು.

SA va AUS World Cup 2023 Semi final Austraila Beat South Africa just 3 wickete ener WC Final
Image Credit to original Source

ವಿಶ್ವಕಪ್‌ ಪಂದ್ಯದ್ದಕ್ಕೂ ಅತೀ ಹೆಚ್ಚು ರನ್‌ ಗಳಿಸಿದ್ದ ಡಿಕಾಕ್‌ ಹಜಲ್‌ವುಡ್‌ ಎಸೆತದಲ್ಲಿ ಕುಮಿನ್ಸ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ರು. ನಂತರ ಬಂದ ಮಕರ್ಮ ಆಟ ಕೂಡ 10 ರನ್‌ ಗಳಿಗೆ ಸೀಮಿತವಾಯ್ತು. 22 ರನ್‌ ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಪ್ರಿಕಾ ತಂಡಕ್ಕೆ ಕ್ಲಸೇನ್‌ ವನ್‌ಡರ್‌ ಸೇನ್‌ ಜೊತೆ ಸೇರಿ ಇನ್ನಿಂಗ್ಸ್‌ ಕಟ್ಟೋದಕ್ಕೆ ಮುಂದಾದ್ರು.

ಇದನ್ನೂ ಓದಿ : ವಿಶ್ವಕಪ್ 2023 ಫೈನಲ್‌ ಪಂದ್ಯ, ಅಹಮದಾಬಾದ್‌ಗೆ ಭಾರತ ಕ್ರಿಕೆಟ್‌ ತಂಡ : ಯಾರು ಭಾರತದ ಎದುರಾಳಿ ?

ಆದರೆ ಹಜಲ್‌ವುಡ್‌ ಎಸೆತದಲ್ಲಿ ವ್ಯಾನ್ ಡೆರ್ ಡಸ್ಸೆನ್ ಔಟಾದ್ರು. ನಂತರ ಕ್ಲಾಸೆನ್ ಹಾಗೂ ಡೇವಿಡ್‌ ಮಿಲ್ಲರ್‌ ವಿಕೆಟ್‌ ಉಳಿಸಿಕೊಂಡು ಇನ್ನಿಂಗ್ಸ್‌ ಕಟ್ಟುವ ಕಾರ್ಯಕ್ಕೆ ಮುಂದಾದ್ರು. ಮಿಲ್ಲರ್‌ ಹಾಗೂ ಕ್ಲಾಸೆನ್ ಜೋಡಿ 5ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ಆಡಿದ್ದಾರೆ.

ಕ್ಲಾಸೇನ್‌ 48 ಎಸೆತಗಳಲ್ಲಿ 45 ರನ್‌ ಬಾರಿಸಿದ್ರೆ, ಡೇವಿಡ್‌ ಮಿಲ್ಲರ್‌ 116ಎಸೆತಗಳನ್ನು ಎದುರಿಸಿ 101 ರನ್‌ ಬಾರಿಸಿದ್ದಾರೆ. ಇದರಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ ಒಳಗೊಂಡಿದೆ. ಆದರೆ ನಂತರ ಬಂದ ಯಾವೊಬ್ಬ ಆಟಗಾರರು ಕೂಡ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಚಿನ್‌ ರವೀಂದ್ರ : ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರಿನ ಹುಡುಗ

ದಕ್ಷಿನ ಆಫ್ರಿಕಾ ತಂಡ ಅಂತಿಮವಾಗಿ 49.8 ಓವರ್‌ಗಳಲ್ಲಿ 212 ರನ್ ಗಳಿಗೆ ಆಲೌಟ್‌ ಆಗಿದೆ. ಆಸ್ಟ್ರೇಲಿಯಾ ತಂಡದ ಪರ ಸ್ಟಾರ್ಕ್‌ ಹಾಗೂ ಕುಮ್ಮಿನ್ಸ್‌ ತಲಾ 3 ವಿಕೆಟ್‌ ಪಡೆದುಕೊಂಡ್ರೆ, ಹಜಲ್‌ವುಡ್‌ ಹಾಗೂ ಟ್ರಾವೆಡ್‌ ಹೆಡ್‌ ತಲಾ 2 ವಿಕೆಟ್‌ ಪಡೆದುಕೊಂಡಿದ್ದಾರೆ.

SA va AUS World Cup 2023 Semi final Austraila Beat South Africa just 3 wickete ener WC Final
Image Credit to original Source

ದಕ್ಷಿಣ ಆಫ್ರಿಕಾ ತಂಡ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರ ಟ್ರಾವೆಸ್‌ ಹೆಡ್‌ ಹಾಗೂ ಡೇವಿಡ್‌ ಮಿಲ್ಲರ್‌ ಉತ್ತಮ ಜೊತೆಯಾಟ ಆಡಿದ್ದಾರೆ. ಈ ಜೋಡಿ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ಆಡಿದೆ. ಆದೆ ಕೇಶವ ಮಹಾರಾಜ್‌ ಡೇವಿಡ್‌ ವಾರ್ನರ್‌ ರೂಪದಲ್ಲಿ ಮೊದಲ ಬಲಿ ಪಡೆದಿದ್ದಾರೆ.

ನಂತರ ಕ್ರೀಸ್‌ಗೆ ಬಂದ ಮಿಚನ್‌ ಮಾರ್ಷ್‌ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ನಂತರ ಟ್ರಾವೆಸ್‌ ಹೆಡ್‌ ಜೊತೆಯಾದ ಸ್ಟೀವನ್‌ ಸ್ಮಿತ್‌ ಉತ್ತಮ ಆಟದ ಪ್ರದರ್ಶನ ನೀಡಲು ಮುಂದಾದ್ರು. ಆದ್ರೆ 48 ಎಸೆತಗಳಲ್ಲಿ 62 ರನ್‌ ಗಳಿಸಿ ಆಡುತ್ತಿದ್ದ ಟ್ರಾವೆಸ್‌ ಹೆಡ್‌ ಕೇಶವ ಮಹಾರಾಜ್‌ಗೆ ಬೌಲ್ಡ್‌ ಆಗುವ ಮೂಲಕ ನಿರಾಸೆ ಮೂಡಿಸಿದ್ರು.

ಸ್ಮಿತ್‌ ಜೊತೆಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ 31 ಎಸೆತಗಳಲ್ಲಿ 18 ರನ್‌ ಗಳಿಸಿದ್ರೆ, ಸ್ಟೀವನ್‌ ಸ್ಮಿತ್‌ 62 ಎಸೆತಗಳಲ್ಲಿ 30 ರನ್‌ ಗಳಿಸಿದ್ರು. ಆದರೆ ಕಳೆದ ಪಂದ್ಯದ ಹೀರೋ ಮ್ಯಾಕ್ಸ್‌ವೆಲ್‌ ಮಾತ್ರ ಕೇವಲ 1 ರನ್‌ ಗೆ ವಿಕೆಟ್‌ ಒಪ್ಪಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಘಾತವನ್ನು ನೀಡಿದ್ರು. ಅಂತಿಮ ಹಂತದಲ್ಲಿ ಜೋಶ್‌ ಇಗ್ನೆಸ್‌ 28 ರನ್‌ ಬಾರಿಸಿದ್ರೆ, ಮಿಷನ್‌ ಸ್ಟಾರ್ಕ್‌ 11 ರನ್‌ ಸಿಡಿಸುವ ಮೂಲಕ ತಂಡಕ್ಕೆ ನೆರವಾದ್ರು.

ಇದನ್ನೂ ಓದಿ : IPL Auction 2024 : ಡಿಸೆಂಬರ್ 19ಕ್ಕೆ ದುಬೈನಲ್ಲಿ ಐಪಿಎಲ್ 2024 ಹರಾಜು

ಮಿಚಲ್‌ ಸ್ಟಾರ್ಕ್‌ ಹಾಗೂ ಪಾಟ್‌ ಕುಮಿನ್ಸ್‌ ತಾಳ್ಮೆಯ ಆಟವಾಡಿ ಆಸ್ಟ್ರೇಲಿಯಾಕ್ಕೆ ಗೆಲುವು ತಂದು ಕೊಟ್ರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 47. ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗಳಿಸುವ ಮೂಲ ಭರ್ಜರಿ 3 ವಿಕೆಟ್‌ಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜಿ ಹಾಗೂ ಶಂಸಿ ತಲಾ 2  ವಿಕೆಟ್‌ ಪಡೆದುಕೊಂಡ್ರೆ ರಬಾಡ, ಮಕರಮ್‌ ಹಾಗೂ ಕೇಶವ್‌ ಮಹಾರಾಜ್‌ ತಲಾ 1 ವಿಕೆಟ್‌ ಪಡೆದುಕೊಂಡಿದ್ದಾರೆ.

SA vs AUS World Cup 2023 Semi Final Australia beats South Africa by just 3 wickets Australia enters World Cup Final

Comments are closed.