ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್

ಸುಧಾರಾಣಿ ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿಯಾಗಿ, ಒಂದು ಕಾಲದಲ್ಲಿ ಬಹುಬೇಡಿಕೆಯ ಹಿರೋಹಿನ್ ಆಗಿ ಮೆರೆದವರು. ಬೇಡಿಕೆಯ ಉತ್ತುಂಗದಲ್ಲಿದ್ದಾಗಲೇ ಗೃಹಸ್ತಾಶ್ರಮಕ್ಕೆ ಕಾಲಿಟ್ಟ ಸುಧಾರಾಣಿ ಒಂದಿಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದ

Actress Sudharani Duet : ಸಿನಿಮಾ ನಟ-ನಟಿಯರಿಗೆ ತಾವೇ ನಟಿಸಿದ ಸಿನಿಮಾದ ಹಾಡುಗಳಿಗೆ ದಶಕಗಳ ಬಳಿಕ ಮತ್ತೊಮ್ಮೆ ತಾವೇ ಹೆಜ್ಜೆ ಹಾಕೋ ಅವಕಾಶ ಸಿಗೋದು ಅಪರೂಪ . ಅದರಲ್ಲೂ ಹಿರೋಯಿನ್ ಗಳಿಗೆ ಈ ಅವಕಾಶ ಕಡಿಮೆಯೇ. ಆದರೆ ಕನ್ನಡದ ಹಿರಿಯ ನಟಿ ಸುಧಾರಾಣಿ ಇಂತಹದೊಂದು ಅವಕಾಶ ಪಡೆದಿದ್ದಾರೆ. ಹಿರಿತೆರೆಯಲ್ಲಿ ಡ್ಯುಯೆಟ್ ಗೆ ಮತ್ತೊಮ್ಮೆ ಕಿರುತೆರೆಯಲ್ಲಿ ಹೆಜ್ಜೆ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.

ಸುಧಾರಾಣಿ ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿಯಾಗಿ, ಒಂದು ಕಾಲದಲ್ಲಿ ಬಹುಬೇಡಿಕೆಯ ಹಿರೋಹಿನ್ ಆಗಿ ಮೆರೆದವರು. ಬೇಡಿಕೆಯ ಉತ್ತುಂಗದಲ್ಲಿದ್ದಾಗಲೇ ಗೃಹಸ್ತಾಶ್ರಮಕ್ಕೆ ಕಾಲಿಟ್ಟ ಸುಧಾರಾಣಿ ಒಂದಿಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ ಕೆಲ ವರ್ಷಗಳಿಂದ ಪೋಷಕ ಪಾತ್ರಗಳಿಂದ ಆರಂಭಿಸಿ ಜಾಹೀರಾತು, ರಿಯಾಲಿಟಿ ಶೋವರೆಗೆ ಎಲ್ಲ ರೀತಿಯ ಪಾತ್ರಗಳಲ್ಲೂ ಮತ್ತೆ ಮಿಂಚುತ್ತಿದ್ದಾರೆ.Actress Sudharani Duet Again After 21 Years Special Video Viral 2

ಒಮ್ಮೆ ಹಿರಿತೆರೆಗೆ ಎಂಟ್ರಿ ಕೊಟ್ಟವರು ಮತ್ತೆ ಕಿರುತೆರೆಗೆ ಬರೋದು ವಿರಳ. ಆದರೆ ಸುಧಾರಾಣಿ ಮಾತ್ರ ಈ ವಯಸ್ಸಿನಲ್ಲೂ ಕನ್ನಡ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟು ತಮ್ಮ ಸಹಜ ಅಭಿನಯ ಹಾಗೂ ಸೌಂದರ್ಯದ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಸುಧಾರಾಣಿ ನಾಯಕಿಯಾಗಿರೋ ಶ್ರೀರಸ್ತು ಶುಭಮಸ್ತು ಧಾರಾವಾಹಿ‌ ಸದ್ಯ ಕನ್ನಡ ಕಿರುತೆರೆಯಲ್ಲಿ ಸಖತ್ ಸದ್ದು ಮಾಡ್ತಿದೆ.

ಇದನ್ನೂ ಓದಿ :ಮದಕರಿ ಸುಂದರಿ ರಾಗಿಣಿ ದ್ವಿವೇದಿ ಮಾದಕ ನೋಟ : ಪಡ್ಡೆ ಹೈಕಳಿಗೆ ಹಬ್ಬದೂಟ

ಮಾಮೂಲಿ ಲವ್ ಸ್ಟೋರಿಗಳಿಂದ ಭಿನ್ನವಾಗಿ ವಿಭಿನ್ನ ಕಥಾನಕ ಹೊಂದಿರೋ ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಮಧ್ಯವಯಸ್ಸಿನ ಜೀವಗಳು ಸಂಗಾತಿ ಪ್ರೀತಿಗಾಗಿ ಕಾತರಿಸುವ ಪ್ರೇಮಕತೆಯನ್ನು ಹೊಂದಿರುವ ಹಾಗೂ ಕುಟುಂಬದ ಮಹತ್ವವನ್ನು ಸಾರುವ ಈ ಧಾರಾವಾಹಿ ಸದ್ಯ ಕನ್ನಡದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

Actress Sudharani Duet Again After 21 Years Special Video Viral
Image Credit to Original Source

ಇಂಥ ಜನಪ್ರಿಯ ಧಾರಾವಾಹಿ ಲೀಡ್ ರೋಲ್ ನಲ್ಲಿರೋ ತುಳಸಿ ಅಲಿಯಾಸ್ ಸುಧಾರಾಣಿ ಈಗ ಸೀರಿಯಲ್ ನಲ್ಲಿ ಮತ್ತೊಮ್ಮೆ ಡ್ಯುಯೇಟ್ ಹಾಡಿದ್ದಾರೆ. ಬರೋಬ್ಬರಿ 21 ವರ್ಷಗಳ ಬಳಿಕ ಮತ್ತೆ ನನ್ನ ನಿನ್ನ ಆಸೆ, ನಮ್ಮ ಪ್ರೇಮ ಭಾಷೆ ಸಾಂಗ್ ಗೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಸಖತ್ ಸಪ್ರೈಸ್ ನೀಡಿದ್ದಾರೆ. ಶ್ರೀರಸ್ತು ಶುಭಮಸ್ತು ಸೀರಿಯಲ್ ನಾಯಕ ಮಾಧವನ ಜೊತೆ ನನ್ನ ನಿನ್ನ ಆಸೆ ಎಂದು ಕುಣಿದು ಅಭಿಮಾನಿಗಳಿಗೆ ತಮ್ಮ ಯೌವ್ವನದ ದಿನಗಳ ಸುಂದರಿ ಸುಧಾರಾಣಿ ಕಣ್ಮುಂದೆ ಬರುವಂತೆ ಮಾಡಿದ್ದಾರೆ.

ಇದನ್ನೂ ಓದಿ : ಬಿಗ್​​​ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್​ ಅಂದ್ರು ವಿನಯ್​ ಪತ್ನಿ ಅಕ್ಷತಾ..?

ನನ್ನ ನಿನ್ನ ಆಸೆ, ನಮ್ಮ ಪ್ರೇಮ ಭಾಷೆ, ಶೃತಿ ಸೇರಿದಾಗ ಬಾಳೇ ಆಶಾಗೀತೆ ಹಾಡು 1992 ರಲ್ಲಿ ತೆರೆಕಂಡ ಮಿಡಿದ ಶ್ರುತಿ ಸಿನಿಮಾದ್ದಾಗಿದ್ದು ಈ ಸಿನಿಮಾದಲ್ಲಿ ಸುಧಾರಾಣಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದ್ದರು. ಈ ಹಾಡನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಮಂಜುಳಾ ಗುರುರಾಜ್ ಹಾಡಿದ್ದರು. ಸದ್ಯ ಸೀರಿಯಲ್ ನ ಪ್ರೇಮಗಳಿಗೆಯೊಂದಕ್ಕೆ ಈ ಹಾಡನ್ನು ಮರುಬಳಕೆ ಮಾಡಲಾಗಿದ್ದು, ಆ ವಿಡಿಯೋವನ್ನು ಸುಧಾರಾಣಿ ಶೇರ್ ಮಾಡಿದ್ದಾರೆ.

Then And Now ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ನಟಿ ಸುಧಾರಾಣಿ ತಮ್ಮ ಹಳೆಯ ಹಾಗೂ ಈಗಿನ ಹಾಡಿನ ವಿಡಿಯೋ ಶೇರ್ ಮಾಡಿದ್ದು ಅಭಿಮಾನಿಗಳು ವಿಡಿಯೋ ನೋಡಿ ಖುಷಿಯಾಗಿದ್ದಾರೆ. ತೆರೆ ಮೇಲೆ ಸುಧಾರಾಣಿಯಾಗಿ‌ ಮಿಂಚಿದ ನಟಿಯ ಮೂಲ ಹೆಸರು ಜಯಶ್ರೀ. 53 ನೇ ವಸಂತದಲ್ಲಿರೋ ಸುಧಾರಾಣಿ ಮನಮೆಚ್ಚಿದ ಹುಡುಗಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿದ್ದರು.

ಇದನ್ನೂ ಓದಿ : ರಾಜಕೀಯಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ! ಬರ್ತಡೇ ದಿನವೇ ಬಿಗ್ ಅನೌನ್ಸ್ ಮೆಂಟ್ ?

13 ನೇ ವಯಸ್ಸಿಗೆ ಶಿವಣ್ಣನ ಜೊತೆ ನಾಯಕಿಯಾಗಿ ನಟಿಸಿದ ಸುಧಾರಾಣಿ ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ ಕೂಡ ಹೌದು. ಸದ್ಯ ಕಿರುತೆರೆಯಲ್ಲಿ ತುಳಸಿಯಾಗಿ ತಮ್ಮ ಜನಪ್ರಿಯತೆಯ ಯಾತ್ರೆ ಮುಂದುವರೆಸಿದ್ದಾರೆ‌ .

Actress Sudharani Duet Again After 21 Years Special Video Viral

Comments are closed.