ಮೊಟೊರೋಲಾ ಕಂಪೆನಿ ಮೊಟೊರೊಲಾ ಎಡ್ಜ್ 30 ಅಲ್ಟ್ರಾ 5ಜಿ (Motorola Edge 30 Ultra 5G) ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 200 ಮೆಗಾ ಫಿಕ್ಸೆಲ್ ಕ್ಯಾಮೆರಾ, 8GB RAM ಒಳಗೊಂಡಿರುವ ಮೊಬೈಲ್ ಶೇ. 21 ರಷ್ಟು ರಿಯಾಯಿತಿ ದರದಲ್ಲಿ ಮಾರಾಟಕ್ಕಿದೆ. ನೀವೇನಾದ್ರೂ ಮೊಟೊರೋಲಾ ಎಡ್ಜ್ 30 ಅಲ್ಟ್ರಾ 5G ಮೊಬೈಲ್ ವೈಶಿಷ್ಟ್ಯತೆ ಯನ್ನು ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ.
ಮೊಟಾರೋಲಾ ಕಂಪೆನಿಯ Motorola Edge 30 Ultra 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದ್ದಂತೆಯೇ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದ್ರಲ್ಲೂ ಹೊಸ ಫೋನ್ ಹೊಸ ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಮೊಟಾರೋಲಾ ಕಂಪನಿಯು ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಪೋನ್ ಅನ್ನು ಪರಿಚಯಿಸಿದೆ.

ಮೊಟೊರೋಲಾ ಎಡ್ಜ್ ಸ್ಮಾರ್ಟ್‌ಪೋನ್ 8GB RAM Qualcomm Snapdragon 8 Plus Gen 1 ಒಳಗೊಂಡಿದೆ. ಪ್ರೀಮಿಯಂ ಸ್ಮಾರ್ಟ್ ಪೋನ್ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿರುವವರಿಗೆ Motorola Edge 30 Ultra 5G ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಪೋನ್ ಮಾರುಕಟ್ಟೆಯ ಬೆಲೆ 69,999ರೂ.ಗೆ ಲಭ್ಯವಿದ್ದು, ಆಫರ್‌ನಲ್ಲಿ 54,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
ಇದನ್ನೂ ಓದಿ : WhatsApp Alert : ತಪ್ಪಿಯೂ ಈ ಲಿಂಕ್ ಕ್ಲಿಕ್ ಮಾಡಬೇಡಿ ! 82% ಭಾರತೀಯರಿಗೆ ನಿತ್ಯವೂ ಬರ್ತಿದೆ 12 ನಕಲಿ ಸಂದೇಶ
ಇನ್ನು Flipkart ನಲ್ಲಿ 21% ರಿಯಾಯಿತಿ ದರದಲ್ಲಿ ಈ ಪೋನ್ ಲಭ್ಯವಿದೆ. ಅಲ್ಲದೇ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ (HDFC Credit Card) ಬ್ಯಾಂಕ್ 6 ತಿಂಗಳ EMI ವಹಿವಾಟಿನ ಮೇಲೆ ರೂ.250 ರಿಯಾಯಿತಿ ಪಡೆಯಬಹುದಾಗಿದೆ. ಅದ್ರಲ್ಲೂಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 9 ತಿಂಗಳ EMI ವಹಿವಾಟಿನ ಮೇಲೆ 750 ರೂ.ಗಳನ್ನು 12 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಇಎಂಐ ( EMI) ವಹಿವಾಟುಗಳ ಮೇಲೆ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನಲ್ಲಿ 1,250 ರಿಯಾಯಿತಿ ನೀಡುತ್ತದೆ.

ಮೊಟೊರೋಲಾ ಬಿಡುಗಡೆ ಮಾಡಿರುವ ಈ ಪೋನ್ ಪ್ರತಿಯೊಬ್ಬ ಗ್ರಾಹಕರಿಗೆ ಇಷ್ಟವಾಗುವಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ. ಸ್ಮಾರ್ಟ್‌ಪೋನ್ 6.67-ಇಂಚಿನ P-OLED ಡಿಸ್ಪ್ಲೇ ಜೊತೆಗೆ 20:9 ಆಕಾರ ಅನುಪಾತ ಮತ್ತು 1080 x 2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.395ppi ಪಿಕ್ಸೆಲ್ ಸಾಂದ್ರತೆ ಮತ್ತು 144Hz ರಿಫ್ರೆಶ್ ರೇಟ್ ಈ ಫೋನ್ ಅನ್ನು ಅತ್ಯುತ್ತಮ ಅನುಭವವನ್ನಾಗಿ ಮಾಡುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ರಕ್ಷಣೆಯನ್ನು ಒದಗಿಸುತ್ತದೆ.
ಇದನ್ನೂ ಓದಿ : ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನಿಮ್ಮ ಮೊಬೈಲ್ ಸ್ಕ್ರೀನ್ ಯಾವ ರೀತಿ ಇರಬೇಕು..?

ಈ ಸ್ಮಾರ್ಟ್‌ಫೋನ್ Qualcomm Snapdragon 8 Plus Gen 1 ಪ್ರೊಸೆಸರ್‌ನಿಂದ ಚಾಲಿತವಾಗಲಿದ್ದು, ಇದು ಕಾರ್ಟೆಕ್ಸ್ A510, Cortex X2 ಮತ್ತು Cortex A710 ವಿನ್ಯಾಸಗಳೊಂದಿಗೆ ಆಕ್ಟಾ-ಕೋರ್ CPU ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಗರಿಷ್ಠ 3GHz ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ, 8GB RAM ಅನ್ನು ಆಯ್ಕೆ ಮಾಡಲಾಗಿದೆ, ಇದು ಈ ಫೋನ್ ಹೆಚ್ಚು ಶಕ್ತಿಯುತವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿದೆ.
ಇದನ್ನೂ ಓದಿ : ಆ್ಯಪಲ್ ಅಧಿಕೃತ ವೆಬ್ಸೈಟ್ನಿಂದ ಮೊಬೈಲ್ ಖರೀದಿಸಿದವರಿಗೆ ದೋಖಾ : ಐಫೋನ್ 15 ಪ್ರೋ ಹೋಲುವ ಆಂಡ್ರಾಯ್ಡ್ ಫೋನ್ ಸ್ವೀಕರಿಸಿದ ಗ್ರಾಹಕ
ಮೊಟೊರೋಲಾ ಸ್ಮಾರ್ಟ್‌ಪೋನ್ 200 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದೆ. 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆಗೆ HDR ಮೋಡ್, ಎಕ್ಸ್‌ಪೋಸರ್ ಕರೆಕ್ಷನ್, ಡಿಜಿಟಲ್ ಜೂಮ್ ಮತ್ತು ಫೇಸ್ ಸೆನ್ಸರ್‌ಗಳ ಗುರುತಿಸುವಿಕೆ ಸೌಲಭ್ಯ ಲಭ್ಯವಿದೆ. ಇದು 60 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

4610mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ದೀರ್ಘಕಾಲದ ಬ್ಯಾಟರಿ ಬ್ಯಾಕ್ ಅಪ್ ಒದಗಿಸಲಿದೆ. ಜೊತೆಗೆ Wi-Fi 802.11 a/b/g/n/ac/6e, ಟ್ರೈ-ಬ್ಯಾಂಡ್, Wi-Fi ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, A2DP, LE, USB ಟೈಪ್-C 3.1, OTG, ಡಿಸ್ಪ್ಲೇ ಪೋರ್ಟ್ 1.4. ಒಳಗೊಂಡಿದೆ.
200 MP Camera 8GB RAM Motorola Edge 30 Ultra 5G best Features