ಆ್ಯಪಲ್​ ಅಧಿಕೃತ ವೆಬ್​ಸೈಟ್​ನಿಂದ ಮೊಬೈಲ್​ ಖರೀದಿಸಿದವರಿಗೆ ದೋಖಾ : ಐಫೋನ್​ 15 ಪ್ರೋ ಹೋಲುವ ಆಂಡ್ರಾಯ್ಡ್​ ಫೋನ್​ ಸ್ವೀಕರಿಸಿದ ಗ್ರಾಹಕ

Iphone Scam : ಐಫೋನ್​ ಖರೀದಿ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಅದರಲ್ಲೂ ಐಫೋನ್​ 15 ಪ್ರೋ ಖರೀದಿ ಮಾಡಬೇಕು ಅಂದರೆ ದುಡ್ಡು ಕೂಡ ಅಷ್ಟೇ ಬೇಕು. ನೀವು ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಐಫೋನ್​ 15 ಪ್ರೋ ಖರೀದಿ ಮಾಡಿದ್ರಿ ಅಂದುಕೊಳ್ಳೋಣ.

Iphone Scam : ಐಫೋನ್​ ಖರೀದಿ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಅದರಲ್ಲೂ ಐಫೋನ್​ 15 ಪ್ರೋ ಖರೀದಿ ಮಾಡಬೇಕು ಅಂದರೆ ದುಡ್ಡು ಕೂಡ ಅಷ್ಟೇ ಬೇಕು. ನೀವು ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಐಫೋನ್​ 15 ಪ್ರೋ ಖರೀದಿ ಮಾಡಿದ್ರಿ ಅಂದುಕೊಳ್ಳೋಣ. ಆದರೆ ನಿಮ್ಮ 1 ಲಕ್ಷ ರೂಪಾಯಿ ಮೌಲ್ಯದ ಹಣದ ಬದಲಾಗಿ ಆನ್​ಲೈನ್​ ಮಾರುಕಟ್ಟೆ ವೇದಿಕೆಯು ನಿಮಗೆ ಆಂಡ್ರಾಯ್ಡ್​ ಫೋನ್​ ಕಳುಹಿಸಿಕೊಟ್ಟರೆ ನಿಮ್ಮ ಸ್ಥಿತಿ ಹೇಗಾಗಬೇಡ..?

Iphone Scam Man ordered an Iphone 15 from an official Apple store but received an Android phone instead
Image Credit to Original Source

ಥೇಟ್​ ಐಫೋನ್​ನ್ನೇ ಹೋಲುವ ಅಂಡ್ರಾಯ್ಡ್​ ಫೋನ್​ಗಳು ಇದೀಗ ಮಾರುಕಟ್ಟೆಗೆ ಬಂದಿದ್ದು ಹೊಸದೊಂದು ಭಯ ಆರಂಭಗೊಂಡಿದೆ.  ಅದರಲ್ಲೂ ಆ್ಯಪಲ್​​ನ ಅಧಿಕೃತ ವೆಬ್​ಸೈಟ್​ನಿಂದ ಐಫೋನ್​ 15 ಪ್ರೋ ಸ್ಮಾರ್ಟ್​ಫೋನ್​ ಆರ್ಡರ್​ ಮಾಡಿದ್ದರೂ ಸಹ ವ್ಯಕ್ತಿಯೊಬ್ಬರು ನಕಲಿ ಐಫೋನ್​ 15 ಪ್ರೋ ಸ್ಮಾರ್ಟ್ ಫೋನ್​ ಸ್ವೀಕರಿಸಿದ್ದು ಆಪಲ್​ನ ಅಧಿಕೃತ ವೆಬ್​​ಸೈಟ್​ನಲ್ಲಿ ಮೊಬೈಲ್​ ಖರೀದಿ ಮಾಡೋಕೂ ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ : ಅಬ್ಬಬ್ಬಾ ಲಾಟರಿ…! ಕೇವಲ 2599 ರೂ.ಗೆ ಸ್ಮಾರ್ಟ್​ ಫೋನ್​ ಮಾರುಕಟ್ಟೆಗೆ ತಂದಿದೆ ರಿಲಯನ್ಸ್​ ಕಂಪನಿ..!

ಈ ಅಸಲಿ ಮೊಬೈಲ್​ ಬದಲು ಬಂದ ನಕಲಿ ಮೊಬೈಲ್​​  ಘಟನೆಗಳನ್ನು ಆಪಲ್​ ಕಂಪನಿಯು ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಇಂಗ್ಲೆಂಡ್​ನ ಸರ್ರೆಯಲ್ಲಿ ವಾಸಿಸುತ್ತಿರುವ ಎಡ್​ಮರ್ಡ್ ಎಂಬ ವ್ಯಕ್ತಿಯು ತಮ್ಮ ರೆಡ್ಡಿಟ್​ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಎಡ್​ಮರ್ಡ್​ ಐಫೋನ್​ 15 ಪ್ರೋವನ್ನು ಆರ್ಡರ್​ ಮಾಡಿದ್ದರು ಎನ್ನಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಕೈಗೆ ಹೊಚ್ಚ ಹೊಸ ಐಫೋನ್​ 15 ಪ್ರೋ ಮೊಬೈಲ್​ ಸಿಗುತ್ತದೆ ಎಂದೇ ಭಾವಿಸಿದ್ದರು. ಆದರೆ ಅವರು ಆರ್ಡರ್​ನಲ್ಲಿ ಸ್ವೀಕರಿಸಿದ ಐಫೋನ್​ನ ಅಸಲಿಯ್ಲ ಬದಲಿಗೆ ಅದೊಂದು ನಕಲಿ ಫೋನ್​ ಎಂಬುದು ಅವರಿಗೆ ತಿಳಿದು ಬಂದಿದೆ.

ಇದನ್ನೂ ಓದಿ :ಐಫೋನ್​ 13ಗೆ 10,000 ರೂ. ಡಿಸ್ಕೌಂಟ್‌ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್​ ಮಿಸ್​ ಮಾಡ್ಲೇಬೇಡಿ

ಇದು ನೋಡೋಕೆ ಥೇಟ್​ ಐಫೋನ್​ನಂತೆಯೇ ಇದ್ದು ಆದರೆ ಸಂಪೂರ್ಣ ಆಂಡ್ರಾಯ್ಡ್ ಸಾಫ್ಟ್​ವೇರ್ ಹೊಂದಿದೆ ಎನ್ನಲಾಗಿದೆ. ಆನ್​ಲೈನ್​ನಲ್ಲಿ ನಡೆದ ಇಂತಹ ಮೋಸದ ಜಾಲವನ್ನು ಕಂಡು ಎಡ್​ಮರ್ಡ್ ಹೌಹಾರಿ ಹೋಗಿದ್ದಾರೆ. ಇನ್ನು ಎಡ್​ಮರ್ಡ್​ ತಾವು ಆ್ಯಪಲ್​ ಕಂಪನಿಯ ಅಧಿಕೃತ ವೆಬ್​ಸೈಟ್​ನಲ್ಲಿಯೇ ಐಫೋನ್​ 15 ಪ್ರೋ ಆರ್ಡರ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

Iphone Scam Man ordered an Iphone 15 from an official Apple store but received an Android phone instead
Image Credit to Original Source

ಅಲ್ಲದೇ ಆ್ಯಪಲ್​ ಕಂಪನಿಯಿಂದ ಬುಕ್ಕಿಂಗ್​ ಆಗಿರುವ ದೃಢೀಕರಣದ ಬಗ್ಗೆ ಎಡ್​ಮರ್ಡ್​ ಇಮೇಲ್​ ಕೂಡ ಸ್ವೀಕರಿಸಿದ್ದೇನೆ ಎಂದು ಸಹ ಎಡ್​ಮರ್ಡ್ ಹೇಳಿಕೊಂಡಿದ್ದಾರೆ. ಹೀಗೆ ನೋಡುವಾಗ 256 ಜಿಬಿ ಮೆಮೊರಿ ಹೊಂದಿರುವ ಈ ಮೊಬೈಲ್​ ಥೇಟ್​ ಐಫೋನ್​ 15 ಪ್ರೋವನ್ನೇ ಹೋಲುವಂತಿತ್ತು. ಆದರೆ ಐಫೋನ್​ 15 ಪ್ರೋ ಮೊಬೈಲ್​ ಬಳಕೆ ಮಾಡುವಾಗ ಇದು ಐಓಎಸ್​ ಆಪರೇಟಿಂಗ್​ ಸಿಸ್ಟಂ ಹೊಂದಿಲ್ಲ ಎಂಬುದು ಎಡ್​ಮರ್ಡ್ ಗಮನಕ್ಕೆ ಬಂದಿದೆ.

ಇದನ್ನೂ ಓದಿ : ಈ ಮೊಬೈಲ್​ ಖರೀದಿ ಮಾಡಿದ್ರೆ ಸಾಕು : ಯಾವುದೇ ಭಾಷೆಯ ಕರೆಯನ್ನೂ ನಿಮ್ಮ ಭಾಷೆಗೆ ಅನುವಾದಿಸಿ ಕೊಡುತ್ತೆ..!

ಕೂಡಲೇ ಅವರು ಹತ್ತಿರದ ಅಂಗಡಿಗೆ ತೆಗೆದುಕೊಂಡು ಹೋಗಿ ಮೊಬೈಲ್​ ಪರೀಕ್ಷೆ ಮಾಡಿಸಿದಾಗ ಇದು Apple ನ iOS ಇಂಟರ್ಫೇಸ್ ನ್ನು ಹೋಲುವ ಆಂಡ್ರಾಯ್ಡ್​ ಫೋನ್​ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಅಧಿಕೃತ ವೆಬ್​ಸೈಟ್​ನಲ್ಲಿ ಆಪಲ್​ ಫೋನ್​ ಖರೀದಿ ಮಾಡೋಕೂ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Iphone Scam Man ordered an Iphone 15 from an official Apple store but received an Android phone instead

Comments are closed.