WhatsApp Alert : ತಪ್ಪಿಯೂ ಈ ಲಿಂಕ್‌ ಕ್ಲಿಕ್‌ ಮಾಡಬೇಡಿ ! 82% ಭಾರತೀಯರಿಗೆ ನಿತ್ಯವೂ ಬರ್ತಿದೆ 12 ನಕಲಿ ಸಂದೇಶ

WhatsApp Alert :  ಇತ್ತೀಚಿನ ವರ್ಷಗಳಲ್ಲಿ ವಾಟ್ಸಾಪ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡುವವರ ಸಂಖ್ಯೆಯೂ ಜಾಸ್ತಿಯೇ ಇದೆ. ಇದೀಗ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

WhatsApp Alert :  ಇತ್ತೀಚಿನ ವರ್ಷಗಳಲ್ಲಿ ವಾಟ್ಸಾಪ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡುವವರ ಸಂಖ್ಯೆಯೂ ಜಾಸ್ತಿಯೇ ಇದೆ. ಇದೀಗ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು (Fake Massage) ನೀಡಿದೆ. ಯಾವುದೇ ಕಾರಣಕ್ಕೂ ಇಂತಹ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ ಎಂದಿದೆ.

ಭಾರತೀಯರು ಇಮೇಲ್‌, ಪಠ್ಯ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ನಿತ್ಯವೂ ಸುಮಾರು 12 ಕ್ಕೂ ಅಧಿಕ ನಕಲಿ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ನಿತ್ಯವೂ ಶೇಕಡಾ 82% ಭಾರತೀಯರು ಇಂತಹ ನಕಲಿ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ.

Whatsapp alert dont clicks on such messages 82 percent indians recive 12 fake messages daily
Image credit to Original Source

ಆನ್‌ಲೈನ್‌ ಸೆಕ್ಯೂರಿಟಿ ಕಂಪನಿ McAfee ಗ್ಲೋಬಲ್ ಸ್ಕ್ಯಾಮ್ ಮೆಸೇಜಿಂಗ್ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಅದ್ರಲ್ಲಿ ಪ್ರಮುಖವಾಗಿ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ನಿತ್ಯವೂ ತಮ್ಮ ಮೊಬೈಲ್‌ಗಳಿಗೆ ಸಾಕಷ್ಟು ಸಂದೇಶಗಳು ಬರುತ್ತಿವೆ.

ಇದನ್ನೂ ಓದಿ : ದೀಪಾವಳಿ ಪ್ರಯುಕ್ತ ಜಿಯೋ ಕಂಪನಿಯಿಂದ ಆಕರ್ಷಕ ಪ್ರಿಪೇಯ್ಡ್​ ಆಫರ್​ : ಈ ಪ್ರಿಪೇಯ್ಡ್​ ಪ್ಯಾಕ್​ ಮಿಸ್​ ಮಾಡ್ಕೊಳ್ಳಬೇಡಿ

ಅದ್ರಲ್ಲೂ 82% ಭಾರತೀಯರು ಇಂತಹ ನಕಲಿ ಸಂದೇಶಗಳನ್ನು ಕ್ಲಿಕ್ ಮಾಡಿದ್ದಾರೆ. ಅಲ್ಲದೇ ಅದರಲ್ಲಿ ಬಹುತೇಕರು ವಂಚನೆಗೆ ಒಳಗಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ಪ್ರತಿನಿತ್ಯವೂ ಭಾರತೀಯರು ಇಮೇಲ್, ಪಠ್ಯ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿದಿನ ಸುಮಾರು 12 ನಕಲಿ ಸಂದೇಶಗಳು ಸ್ವೀಕಾರ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

ಸಾಮಾನ್ಯವಾಗಿ ಬಹುಮಾನಗಳನ್ನು ಗೆದ್ದಿರುವ ಕುರಿತು ಸಂದೇಶಗಳು ಬರುತ್ತಿದ್ದು, ಅಂತಹ ಲಿಂಕ್‌ಗಳನ್ನು ಗ್ರಾಹಕರು ಕ್ಲಿಕ್‌ ಮಾಡುವುದರಿಂದ ಶೇ. 99% ರಷ್ಟು ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ. ಮಾತ್ರವಲ್ಲ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳು ಹೆಚ್ಚಿದೆ.

ಇದನ್ನೂ ಓದಿ : 50 MP ಕ್ಯಾಮೆರಾ 64 GB ಸ್ಟೋರೇಜ್ : ಆರ್ಧಕ್ಕೀಂತ ಕಡಿಮೆ ಬೆಲೆಗೆ ಸಿಗುತ್ತೆ ರೆಡ್‌ಮೀ 12C 5G ಸ್ಮಾರ್ಟ್‌ ಪೋನ್‌

ಕೇವಲ ಬಹುಮಾನ ಪಡೆದಿರುವುದು ಮಾತ್ರವಲ್ಲ ಉದ್ಯೋಗದ ಹುಡುಕಾಟದಲ್ಲಿ ಇರುವವರು ಕೂಡ ಇಂತಹ ವಂಚಕರ ಬಲೆಗೆ ಬೀಳುವ ಸಾಧ್ಯತೆಯಿದೆ. ಉದ್ಯೋಗ ನೀಡುವ ಯಾವುದೇ ಕಂಪೆನಿಗಳು ಕೂಡ ನಿಮಗೆ ವಾಟ್ಸಾಪ್‌ನಲ್ಲಿ ಮೆಸೇಜ್‌ ಮಾಡುವ ಮೂಲಕ ನಿಮ್ಮಿಂದ ಅರ್ಜಿ ಆಹ್ವಾನಿಸುವುದಿಲ್ಲ. ಇಂತಹ ಸಂದೇಶಗಳು ಬಂದ್ರೆ ನೀವು ಇದು ಫೇಕ್‌ ಅನ್ನುವುದನ್ನು ನೆನಪಿನಲ್ಲಿ ಇಡಬೇಕು.

ಇನ್ನು ವಾಟ್ಸಾಪ್‌ ಸಂದೇಶದಲ್ಲಿ URL/ಲಿಂಕ್ ಮೂಲಕ KYC ಅನ್ನು ಪೂರ್ಣಗೊಳಿಸಲು ಬಳಕೆದಾರರಿಂದ ವಾಟ್ಸಾಪ್‌ ಅಥವಾ ಎಸ್‌ಎಂಎಸ್‌ ಸಂದೇಶವನ್ನು ಹರಿಬಿಡಲಾಗುತ್ತೀದೆ. ಇಂತಹ ಸಂದೇಶಗಳು ಬಂದಾಗ ನೀವು ಹೆಚ್ಚು ಅಲರ್ಟ್‌ ಆಗಿರಬೇಕು. ಇಲ್ಲವಾದ್ರೆ ನಿಮ್ಮ ಹಣವನ್ನು ಕಳ್ಳತನ ಮಾಡುವ ಸಾಧ್ಯತೆಯಿದೆ.

Whatsapp alert dont clicks on such messages 82 percent indians recive 12 fake messages daily
Image Credit to Original Source

ಇಷ್ಟೇ ಅಲ್ಲಾ ಜನರು ಇತ್ತೀಚಿನ ದಿನಗಳಲ್ಲಿ ಒಟಿಟಿಗಳ ಮೊರೆ ಹೋಗುತ್ತಿದ್ದಾರೆ. ಒಟಿಟಿಗಳ ಜನಪ್ರಿಯತೆ ಹೆಚ್ಚಾದಂತೆ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್‌ಪೋನ್‌ ಬಳಕೆದಾರರಿಗೆ ನೆಟ್‌ಫ್ಲಿಕ್ಸ್‌ ಅಥವಾ ಇತರರ ಒಟಿಟಿ ಚಂದಾದಾರಿಕೆ ನವೀಕರಣಕ್ಕಾಗಿ ಸಂದೇಶಗಳು ಬರುತ್ತಿವೆ. ಉಚಿತ ಕೊಡುಗೆಗಳನ್ನು ಘೋಷಣೆ ಮಾಡುತ್ತಾರೆ.

ಇದನ್ನೂ ಓದಿ : ವಾಟ್ಸಾಪ್​ನಲ್ಲಿ ಶೀಘ್ರದಲ್ಲಿಯೇ ಬರ್ತಿದೆ ಹೊಸ ವೈಶಿಷ್ಟ್ಯ : ಇನ್ಮೇಲೆ ನೀವು ಮಾಡಬಹುದು ಮತದಾನ

ಯಾವುದೇ ಕಾರಣಕ್ಕೂ ಉಚಿತ ಸಂದೇಶಗಳಿಗೆ ನೀವು ಬಲಿಯಾಗಬೇಡಿ. ಮೊಬೈಲ್‌ ಗಳಿಗೆ ಬರುವ ಇಂತಹ ಸಂದೇಶಗಳನ್ನು ನೀವು ಕ್ಲಿಕ್‌ ಮಾಡುವುದರಿಂದ ನಿಮ್ಮ ಖಾತೆ ಖಾಲಿ ಆಗುವುದು ಖಚಿತ. ಮಾತ್ರವಲ್ಲ ಕೆಲವೊಮ್ಮೆ ನಿಮ್ಮ ಮೊಬೈಲ್‌ ಪೋನ್‌ ಸಂಪೂರ್ಣವಾಗಿ ಹ್ಯಾಕ್‌ ಆಗುವ ಸಾಧ್ಯತೆಯೂ ಹೆಚ್ಚಿದೆ.

Whatsapp alert dont clicks on such messages 82 percent indians recive 12 fake messages daily

Comments are closed.