ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)ಗಾಗಿ ಪ್ರಾಂಚೈಸಿಗಳು ಸಿದ್ದತೆ ನಡೆಸುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಕ್ಕೆ ಹೊಸ ನಾಯಕನ (Chennai Super Kings captain )ಹೆಸರು ಕೇಳಿಬರುತ್ತಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ಉತ್ತರಾಧಿಕಾರಿ ಯಾರು ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಯುವ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Gaikwad) ಹೆಸರು ಕೇಳಿಬಂದಿದೆ.
2019 ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ರುತುರಾಜ್ ಗಾಯಕ್ವಾಡ್ ಕೇವಲ 4 ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಏಷ್ಯಾಕಪ್ನಲ್ಲಿ ಭಾರತ ಹಿರಿಯ ತಂಡದ ನಾಯಕನಾಗಿ ತಂಡವನ್ನು ಮುನ್ನೆಡೆಸಿ, ಪ್ರಶಸ್ತಿ ಜಯಿಸಿದ ಸಾಧನೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಟೀಂ ಇಂಡಿಯಾದ ಭವಿಷ್ಯದ ನಾಯಕನ ರೇಸ್ ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

2020 ರಲ್ಲಿ ಕೇವಲ 6 ಐಪಿಎಲ್ ಪಂದ್ಯಗಳನ್ನು ಆಡಿರುವ ರುತುರಾಜ್ ಗಾಯಕ್ವಾಡ್ ಅತ್ಯಧಿಕ 72 ರನ್ ಸೇರಿದಂತೆ ಒಟ್ಟು 204 ರನ್ ಬಾರಿಸಿದ್ದರು. ಇದರಲ್ಲಿ 3 ಅರ್ಧ ಶತಕ ಒಳಗೊಂಡಿತ್ತು. ಆದರೆ 2021 ರ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರನಾಗಿ 16 ಪಂದ್ಯಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 1 ಶತಕ, 4 ಅರ್ಧ ಶತಕ ಒಳಗೊಂಡು 625 ರನ್ ಬಾರಿಸಿದ್ದರು.
ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾರು ನಾಯಕ ? ಹಾರ್ದಿಕ್ ಪಾಂಡ್ಯ ಅಥವಾ ರೋಹಿತ್ ಶರ್ಮಾ ?
2022 ರ ಆವೃತ್ತಿಯಲ್ಲಿ 14 ಪಂದ್ಯಗಳನ್ನು ಆಡಿರುವ ರುತುರಾಜ್ ಗಾಯಕ್ವಾಡ್ 3 ಅರ್ಧ ಶತಕ ಒಳಗೊಂಡಂತೆ 368 ರನ್ ಬಾರಿಸಿದ್ದರು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಮತ್ತೆ ಆರ್ಭಟಿಸಿದ್ದು, 16 ಪಂದ್ಯಗಳ ಪೈಕಿ 4 ಅರ್ಧ ಶತಕ ಒಳಗೊಂಡಂತೆ 590 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕೇವಲ 20 ಲಕ್ಷ ರೂಪಾಯಿ ಚೆನ್ನೈ ತಂಡವನ್ನು ಸೇರಿಕೊಂಡಿದ್ದ ರುತುರಾಜ್ ಗಾಯಕ್ವಾಡ್ ಕಳೆದ ಎರಡು ಅವಧಿಯಲ್ಲಿಯೂ ಬರೋಬ್ಬರಿ 6 ಕೋಟಿ ಮೊತ್ತಕ್ಕೆ ಚೆನ್ನೈ ತಂಡದಲ್ಲಿ ಉಳಿದುಕೊಂಡಿದ್ದಾರೆ. ಈ ಬಾರಿಯೂ ಚೆನ್ನೈ ಪರ ಬ್ಯಾಟ್ ಬೀಸುತ್ತಿರುವ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಇಂಗ್ಲೆಂಡ್ ಟಿ20, ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ
ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಐಪಿಎಲ್ಗೆ ನಿವೃತ್ತಿ ಘೋಷಿಸಿ ಚೆನ್ನೈ ತಂಡದ ಮೆಂಟರ್ ಆಗ್ತಾರೆ ಅನ್ನೋ ಮಾತುಗಳು ಕೇಳಿಬಂದಿದೆ. 2020 ರ ಸೀಸನ್ನಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ನೇಮಿಸಿತ್ತು.

ರವೀಂದ್ರ ಜಡೇಜಾ ನಾಯಕ್ವದಲ್ಲಿ ಸಿಎಸ್ಕೆ ತಂಡ ಸೋಲನ್ನು ಕಂಡಿತ್ತು. ಅರ್ಧದಲ್ಲಿಯೇ ಜಡೇಜಾ ತಂಡದಿಂದ ಹೊರ ನಡೆದಿದ್ದರು. ನಂತರ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನೆಡೆಸಿದ್ದರು. ಕಳೆದ ಬಾರಿ ಧೋನಿ ತಂಡದ ನಾಯಕರಾಗಿ ಐಪಿಎಲ್ ಟ್ರೋಫಿ ಯನ್ನು ಗೆಲ್ಲಿಸಿಕೊಟ್ಟಿದ್ದರು. ಈ ಬಾರಿ ಧೋನಿ ನಾಯಕತ್ವದಿಂದ ದೂರ ಉಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ : ದಕ್ಷಿಣ ಆಫ್ರಿಕಾ ಪ್ರವಾಸ ಏಕದಿನ ತಂಡಕ್ಕೆ ಕೆಎಲ್ ರಾಹುಲ್ ನಾಯಕ : ರಹಾನೆ, ಪೂಜಾರಾ ಔಟ್
ರುತುರಾಜ್ ಗಾಯಕ್ವಾಡ್ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಜೊತೆಗೆ ಯುವ ಆಟಗಾರ. ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನೆಡೆಸಿ ಟ್ರೋಫಿ ಗೆದ್ದಿರುವುದು ಗಾಯಕ್ವಾಡ್ಗೆ ಪ್ಲಸ್ ಪಾಯಿಂಟ್. ಜೊತೆಗೆ ಮಹೇಂದ್ರ ಸಿಂಗ್ ಧೋನಿ ಶಿಷ್ಯ. ಈ ಬಾರಿಯ ಐಪಿಎಲ್ನಲ್ಲಿ ಗಾಯಕ್ವಾಡ್ ನಾಯಕನಾದ್ರೆ, ಮಹೇಂದ್ರ ಸಿಂಗ್ ಧೋನಿ ಅವರ ಮಾರ್ಗದರ್ಶನ ದೊರೆಯಲಿದೆ ಅನ್ನೋದು ತಂಡದ ಲೆಕ್ಕಾಚಾರ.
ಸಿಎಸ್ಕೆ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ. ಆದರೆ ಈ ಬಾರಿ ಚೆನ್ನೈ ತಂಡ ಹೊಸ ನಾಯಕನ ಜೊತೆ ಕಣಕ್ಕೆ ಇಳಿಯುವುದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಕಳೆದ ಬಾರಿಯ ಚಾಂಪಿಯನ್ಸ್ ಈ ಬಾರಿ ಅದ್ಯಾವ ರೀತಿಯಲ್ಲಿ ಈ ಬಾರಿ ಪ್ರದರ್ಶನ ನೀಡುತ್ತಾರೆ ಕಾದುನೋಡಬೇಕಾಗಿದೆ.
IPL 2024: Ruturaj Gaikwad to captain Chennai Super Kings