ದಕ್ಷಿಣ ಆಫ್ರಿಕಾ ಪ್ರವಾಸ ಏಕದಿನ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ : ರಹಾನೆ, ಪೂಜಾರಾ ಔಟ್‌

 india vs South Africa series‌ : ಏಕದಿನ ತಂಡಕ್ಕೆ ಕೆಎಲ್‌ ರಾಹುಲ್‌ (KL Rahul)ಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಟೆಸ್ಟ್‌ ಸರಣಿಗೆ ರೋಹಿತ್‌ ಶರ್ಮಾ (Rohit Sharma) ನಾಯಕನಾಗಿದ್ರೆ, ಟಿ20 ಸರಣಿಗೆ ಸೂರ್ಯ ಕುಮಾರ್‌ ಯಾದವ್  (Surya Kumar Yadav) ನಾಯಕ.

india vs South Africa series : ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ಏಕದಿನ, ಟೆಸ್ಟ್‌ ಹಾಗೂ ಟಿ20 ಪಂದ್ಯಗಳನ್ನು ಆಡಲಿದೆ. ಏಕದಿನ ತಂಡಕ್ಕೆ ಕೆಎಲ್‌ ರಾಹುಲ್‌ (KL Rahul)ಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಟೆಸ್ಟ್‌ ಸರಣಿಗೆ ರೋಹಿತ್‌ ಶರ್ಮಾ (Rohit Sharma) ನಾಯಕನಾಗಿದ್ರೆ, ಟಿ20 ಸರಣಿಗೆ ಸೂರ್ಯ ಕುಮಾರ್‌ ಯಾದವ್  (Surya Kumar Yadav) ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

KL rahul captain india vs South Africa series sanju samson in Rahane Pujara out
Image Credit to Original Source

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಕೆಎಲ್‌ ರಾಹುಲ್‌ ನಾಯಕತ್ವ ವಹಿಸಲಿದ್ದು, ಸಂಜು ಸ್ಯಾಮ್ಸನ್‌ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶ್ರೇಯಸ್‌ ಅಯ್ಯರ್‌ ಉಪನಾಯಕನಾಗಿ ಭಡ್ತಿ ಪಡೆದಿದ್ದಾರೆ. ರುತುರಾಜ್‌ ಗಾಯಕ್ವಾಡ್‌, ಸಾಯಿ ಸುದರ್ಶನ್‌, ತಿಲಕ್‌ ವರ್ಮಾ, ರಜತ್ ಪಾಟೀದಾರ್‌, ರಿಂಕು ಸಿಂಗ್‌, ಆವೇಶ್‌ ಖಾನ್‌, ಆರ್ಷದೀಪ್‌, ದೀಪಕ್‌ ಚಹರ್‌ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗಿ ಮುಂದುವರಿಕೆ : ಬಿಸಿಸಿಐ ಅಧಿಕೃತ ಘೋಷಣೆ

ಯಜುವೇಂದ್ರ ಚಹಾಲ್‌, ಕುಲದೀಪ್‌ ಯಾದವ್‌ ಹಾಗೂ ವಾಷಿಗ್ಟನ್‌ ಸುಂದರ್‌ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಟಿ20 ತಂಡಕ್ಕೆ ಸೂರ್ಯ ಕುಮಾರ್‌ ಯಾದವ್‌ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದ್ದು, ರವೀಂದ್ರ ಜಡೇಜಾ ಉಪನಾಯಕನ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ವಿಶ್ವಕಪ್‌ ಬೆನ್ನಲ್ಲೇ ವಿಶ್ರಾಂತಿ ನೀಡಲಾಗಿದ್ದ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ ಪಂದ್ಯವನ್ನಾಡಲಿದ್ದಾರೆ.

ರೋಹಿತ್‌ ಶರ್ಮಾ ಟೆಸ್ಟ್‌ ತಂಡದ ನಾಯಕನಾಗಿದ್ರೆ, ವಿರಾಟ್‌ ಕೊಹ್ಲಿ ಕೂಡ ಟೆಸ್ಟ್‌ ಸರಣಿಯನ್ನು ಆಡಲಿದ್ದಾರೆ. ಜಸ್ಪ್ರಿತ್‌ ಬೂಮ್ರಾ ಟೆಸ್ಟ್‌ ತಂಡದ ಉಪನಾಯಕ ರಾಗಿ ಆಯ್ಕೆಯಾಗಿದ್ದಾರೆ. ಆದರೆ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್‌ ಪೂಜಾರಾ ಅವರಿಗೆ ಈ ಬಾರಿ ಟೆಸ್ಟ್‌ ತಂಡದಿಂದ ಕೋಕ್‌ ನೀಡಲಾಗಿದೆ.

KL rahul captain india vs South Africa series sanju samson in Rahane Pujara out
Image Credit to Original Source

ಏಕದಿನ ಸರಣಿ ಭಾರತ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ)(ವಿಕೀ), ಸಂಜು ಸ್ಯಾಮ್ಸನ್ (ವಿಕೀ), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್ , ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಾಹರ್.

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾರು ನಾಯಕ ? ಹಾರ್ದಿಕ್‌ ಪಾಂಡ್ಯ ಅಥವಾ ರೋಹಿತ್‌ ಶರ್ಮಾ ?

ಟೆಸ್ಟ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೀ), ಕೆಎಲ್ ರಾಹುಲ್ (ವಿಕೆ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹದ್. ಸಿರಾಜ್, ಮುಖೇಶ್ ಕುಮಾರ್, ಮೊ. ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ : IPL 2024 : RCBಗೆ ವಿರಾಟ್‌ ಕೊಹ್ಲಿ ಗುಡ್‌ಬೈ ! ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್‌ ಕೊಹ್ಲಿ

ಟಿ20 ಸರಣಿಗೆ ಭಾರತ ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (wk), ಜಿತೇಶ್ ಶರ್ಮಾ (ವಿಕೀ), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ , ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

KL rahul captain india vs South Africa series : sanju samson in Rahane, Pujara out

Comments are closed.