ಭಾನುವಾರ, ಏಪ್ರಿಲ್ 27, 2025
HomeNationalOTP ಇಲ್ಲದೇ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್‌ ಖಾತೆಯ ಹಣ : ತಪ್ಪದೇ ಈ ಕೆಲಸ ಇಂದೇ...

OTP ಇಲ್ಲದೇ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್‌ ಖಾತೆಯ ಹಣ : ತಪ್ಪದೇ ಈ ಕೆಲಸ ಇಂದೇ ಮಾಡಿ ಮುಗಿಸಿ

- Advertisement -

Aadhaar biometric lock : ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆಯೇ ಸೈಬರ್‌ ವಂಚಕರ ಸಂಖ್ಯೆಯೂ ಹೆಚ್ಚುತ್ತಿದೆ. ಬ್ಯಾಂಕ್‌ ಖಾತೆಯ ಜೊತೆಗೆ ಆಧಾರ್‌ ಕಾರ್ಡ್‌ (Aadhar Card) ಲಿಂಕ್‌  ಆಗಿದ್ದರೂ ಕೂಡ ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಖಾತೆಯಲ್ಲಿ ಇರುವ ಹಣವನ್ನು ಓಟಿಪಿ ಪಡೆದು ವಂಚಿಸುತ್ತಿದ್ದಾರೆ. ಆದರೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣ ಸುಭದ್ರವಾಗಿರಬೇಕಾದ್ರೆ ಕಡ್ಡಾಯವಾಗಿ ಈ ಕೆಲಸವನ್ನು ಇಂದೇ ಮಾಡಿ ಮುಗಿಸಿ.

ದೇಶದಾದ್ಯಂತ ಆಧಾರ್‌ ಕಾರ್ಡ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ಹಣಕಾಸಿನ ವ್ಯವಹಾರಕ್ಕೂ ಆಧಾರ್‌ ಕಾರ್ಡ್‌ ಅತೀ ಅಗತ್ಯ. ಭಾರತ ಸರಕಾರ ಆಧಾರ್‌ ಕಾರ್ಡ್‌ ಸುರಕ್ಷತೆಗೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದ್ರೂ ಕೂಡ ಆಧಾರ್‌ ಕಾರ್ಡ್‌ನ ಬಯೋ ಮೆಟ್ರಿಕ್‌ ಮಾಹಿತಿಯನ್ನು ಕದಿಯುವ ಜಾಲ ಇದೀಗ ಸಕ್ರೀಯವಾಗಿದೆ.

Aadhaar biometric lock our bank account will be empty without OTP Don't miss this task and complete it today
Image Credit to Original Source

ಆಧಾರ್‌ ಕಾರ್ಡ್‌ನ ಬಯೋ ಮೆಟ್ರಿಕ್‌( Aadhaar biometric lock) ಮಾಹಿತಿಯನ್ನು ಕಲೆ ಹಾಕಿದ್ರೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ವಂಚಕರು ಸುಲಭವಾಗಿ ಕದಿಯಬಹುದಾಗಿದೆ. ಕಳೆದ ಕೆಲವು ತಿಂಗಳ ಅವಧಿಯಲ್ಲಿ ಇಂತಹ ಹಲವು ಪ್ರಕರಣಗಳು ದೇಶದಲ್ಲಿ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಕೇಂದ್ರ ಸರಕಾರ ಹಾಗೂ ಬ್ಯಾಂಕುಗಳು ಹಲವು ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಿವೆ.

ಇದನ್ನೂ ಓದಿ : ಕೇವಲ 35,000 ರೂ.ಗೆ ನಿಮ್ಮದಾಗಬಹುದು ಐಫೋನ್​ : ಈ ಚಾನ್ಸ್​ ಮಿಸ್​ ಮಾಡಿಕೊಳ್ಳಬೇಡಿ..!

ಆಧಾರ್‌ ಕಾರ್ಡ್‌ ವಂಚನೆಯಿಂದ ತಪ್ಪಿಸಿಕೊಳ್ಳಲು ನೀವು ಮನೆಯಲ್ಲಿಯೇ ಕುಳಿತು ಈ ಕಾರ್ಯವನ್ನು ಮಾಡಬಹುದು. ಆಧಾರ್‌ ಕಾರ್ಡ್‌ನ ಬಯೋಮೆಟ್ರಿಕ್‌ ಫಿಂಗರ್‌ ಪ್ರಿಂಟ್‌  ಅನ್ನು ಆಧಾರ್‌ ಕಾರ್ಡ್‌ ಜೊತೆಗೆ ಲಾಕ್‌ ಮಾಡಲು ಅವಕಾಶವಿದೆ. ನಿಮ್ಮ ಬ್ಯಾಂಕ್‌ ಖಾತೆಯನ್ನು ಸುರಕ್ಷಿತವಾಗಿರಿಸಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಇದನ್ನೂ ಓದಿ : UPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

ನಿಮ್ಮ ಮೊಬೈಲ್‌ ಪೋನ್‌ ಸಹಾಯದಿಂದ ಮೈ ಆಧಾರ್‌ ವೆಬ್‌ಸೈಟ್‌ ಓಪನ್‌ ಮಾಡಿ. ಹೋಮ್‌ ಪೇಜ್‌ನಲ್ಲಿ ಬಯೋ ಮೆಟ್ರಿಕ್ ಲಾಕ್‌ ಮಾಡುವ ಆಪ್ಶನ್‌ ಗೋಚರಿಸುತ್ತದೆ. ನೀವು ಅಲ್ಲಿ ಕ್ಲಿಕ್‌ ಮಾಡುತ್ತಿದ್ದಂತೆಯೇ ಒಟಿಪಿ ಕೇಳುತ್ತದೆ. ನಂತರ ನೀವು ಕ್ಯಾಪ್ಚಾ ಹಾಕುವುದರ ಜೊತೆಗೆ ಓಟಿಪಿಯನ್ನು ಬಳಸಿಕೊಂಡು ಬಯೋ ಮೆಟ್ರಕ್‌ ಪಿಂಗರ್‌ ಪ್ರಿಂಟ್‌ ಅಳವಡಿಸಬಹುದಾಗಿದೆ.

Aadhaar biometric lock our bank account will be empty without OTP Don't miss this task and complete it today
Image Credit to Original Source

ಸರಕಾರದ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್‌ ಕಾರ್ಡ್‌ ಕಡ್ಡಾಯ. ಜೊತೆಗೆ ಬ್ಯಾಂಕುಗಳು ಕೂಡ ಆಧಾರ್‌ ಕಾರ್ಡ್‌ ಅನ್ನು ಬ್ಯಾಂಕ್‌ ಖಾತೆಯ ಜೊತೆಗೆ ಲಿಂಕ್‌ ಮಾಡಲಾಗುತ್ತದೆ. ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆಯಾದ್ರೆ ನಿಮ್ಮ ಬ್ಯಾಂಕ್‌ ಖಾತೆಯ ಮಾಹಿತಿ, ಪಾನ್‌ ಕಾರ್ಡ್‌ ಮಾಹಿತಿ ಸೇರಿದಂತೆ ನಿಮ್ಮ ಗೌಪ್ಯ ಮಾಹಿತಿ ಸೋರಿಕೆ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಭರ್ಜರಿ ಡಿಸ್ಕೌಟ್‌ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್‌

ಆಧಾರ್‌ ಕಾರ್ಡ್‌ ವಿಚಾರದಲ್ಲಿ ಕೇಂದ್ರ ಸರಕಾರ ಕಾಲ ಕಾಲಕ್ಕೆ ಹೊರಡಿಸುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅತೀ ಮುಖ್ಯ. ಆಧಾರ್‌ ಕಾರ್ಡ್‌ ಸುರಕ್ಷಿತವಾಗಿ ಇರಿಸಿಕೊಳ್ಳಲು ಕೆಲವೊಂದು ಕೆಲಸವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು.

Aadhaar biometric lock : our bank account will be empty without OTP: Don’t miss this task and complete it today‌

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular