ಕೇವಲ 35,000 ರೂ.ಗೆ ನಿಮ್ಮದಾಗಬಹುದು ಐಫೋನ್​ : ಈ ಚಾನ್ಸ್​ ಮಿಸ್​ ಮಾಡಿಕೊಳ್ಳಬೇಡಿ..!

ಆ್ಯಪಲ್​ ಫೋನ್ (Apple Phone) ​ ಖರೀದಿ ಮಾಡುವವರಿಗೆ ಬರಗಾಲವಿಲ್ಲ. ಕೈಯಲ್ಲಿ ಹಣವಿಲ್ಲವೆಂದ್ರೂ ಟ್ರೆಂಡ್​ಗೆ ಸರಿಯಾಗಿ ಇರಬೇಕು ಅಂತ ಇಎಂಐ (EMI) ಮಾಡಿಕೊಂಡು ಐಫೋನ್​ (Iphone 12 ) ಖರೀದಿ ಮಾಡುತ್ತಾರೆ.

ಈಗಂತೂ ಆ್ಯಪಲ್​ ಫೋನ್ (Apple Phone) ​ ಖರೀದಿ ಮಾಡುವವರಿಗೆ ಬರಗಾಲವಿಲ್ಲ. ಕೈಯಲ್ಲಿ ಹಣವಿಲ್ಲವೆಂದ್ರೂ ಟ್ರೆಂಡ್​ಗೆ ಸರಿಯಾಗಿ ಇರಬೇಕು ಅಂತ ಇಎಂಐ (EMI) ಮಾಡಿಕೊಂಡು ಐಫೋನ್​ (Iphone 12 ) ಖರೀದಿ ಮಾಡುತ್ತಾರೆ. ನೀವು ಕೂಡ ಇದೇ ರೀತಿ ಹೇಗಾದರೂ ಮಾಡಿ ಒಂದು ಐಫೋನ್​ ಖರೀದಿ ಮಾಡಬೇಕು ಎಂದಿಕೊಂಡಿದ್ದರೆ ನಿಮಗೊಂದು ಒಳ್ಳೆಯ ಅವಕಾಶವಿದೆ.

iphone 12 available less than 40000 rs price
Image Credit : Apple

ಆಪಲ್​ ಕಂಪನಿಯ ಐಫೋನ್​ 12 ಸ್ಮಾರ್ಟ್​ಫೋನ್​ ನಿಮಗೆ ಅತ್ಯಂತ ಕಡಿಮೆ ದರಕ್ಕೆ ಸಿಗುತ್ತದೆ. ಐಫೋನ್​ 12 ಬಳಿಕ ಸಾಕಷ್ಟು ಹೊಸ ಹೊಸ ಫೋನ್​ಗಳನ್ನ ಆ್ಯಪಲ್​ ಕಂಪನಿ ಲಾಂಚ್​ ಮಾಡಿದೆ . ಸದ್ಯ ಈಗ ಐಫೋನ್​ 15 ಜನರೇಷನ್​ ನಡೆಯುತ್ತಿದೆ. ಆದರೆ ಇದರ ಬೆಲೆ ಕೇಳಿದ್ರೆ ತಲೆತಿರುಗುವಂತಿದೆ. 1 ಲಕ್ಷದ ಕೆಳಗೆ ನಿಮಗೆ ಹೊಸ ಜನರೇಷನ್​ನ ಆ್ಯಪಲ್​ ಕಂಪನಿಯ ಫೋನ್​ಗಳು ಸಿಗೋದು ತುಂಬಾನೇ ಕಷ್ಟ.

iphone 12 available less than 40000 rs price
Image Credit : Apple

ಸಾಲ ಮಾಡಿ ತೆಗೆದುಕೊಂಡರೂ ಸಹ ಮುಂದೆ ನೀವೆ ಆ ಹಣವನ್ನು ತೀರಿಸಬೇಕು ಅನ್ನೋದನ್ನ ಮರಯೋ ಹಾಗೂ ಇಲ್ಲ. ಹೀಗಾಗಿ ಈ ಹಬ್ಬದ ಸೀಸನ್​ ನಿಮಗೆ ನಿಜವಾಗಿಯೂ ಒಂದು ಬೆಸ್ಟ್​ ಆಯ್ಕೆಯನ್ನ ನೀಡಿದೆ. ಐಫೋನ್​ 15 ಜನರೇಷನ್​​ಗಿಂತ ಹಿಂದಿನ ಜನರೇಷನ್​ಗಳ ಫೋನ್​ಗಳು ಸಹ 70 ಸಾವಿರ ರೂಪಾಯಿಗಳಿಗಿಂತ ಕಮ್ಮಿ ದರಕ್ಕೆ ಲಭ್ಯವಿಲ್ಲ.

ಇದನ್ನೂ ಓದಿ : WhatsApp Alert : ತಪ್ಪಿಯೂ ಈ ಲಿಂಕ್‌ ಕ್ಲಿಕ್‌ ಮಾಡಬೇಡಿ ! 82% ಭಾರತೀಯರಿಗೆ ನಿತ್ಯವೂ ಬರ್ತಿದೆ 12 ನಕಲಿ ಸಂದೇಶ

ಹೀಗಾಗಿ ಐಫೋನ್ ಖರೀದಿ ಮಾಡೋದು ಅಂದ್ರೆ ದೊಡ್ಡ ಸಾಲವನ್ನ ಮೈ ಮೇಲೆ ಎಳೆದುಕೊಂಡಂತೆಯೇ ಸರಿ. ಆದರೆ ಇದೀಗ ನಿಮಗೊಂದು ಗುಡ್​ ನ್ಯೂಸ್​ ಕಾದಿದೆ. ಅದೇನೆಂದ್ರೆ ಪ್ರಸ್ತುತ ಐಫೋನ್​ 12 ಮೊಬೈಲ್​ ನಿಮಗೆ ಕೇವಲ 40 ಸಾವಿರ ರೂಪಾಯಿಗೆ ಲಭ್ಯವಿದೆ. ಹಳೆಯ ಜನರೇಷನ್​ನ ಫೋನ್​ ಅನ್ನೋದು ಒಂದನ್ನ ಬಿಟ್ರೆ ಎಲ್ಲಾ ರೀತಿಯಿಂದಲೂ ಐಫೋನ್​ 12 ಒಳ್ಳೆಯ ಆಯ್ಕೆಯೇ ಆಗಿದೆ.

iphone 12 available less than 40000 rs price
Image Credit : Apple

ಫ್ಲಿಪ್​ಕಾರ್ಟ್​ನಲ್ಲಿ ಪ್ರಸ್ತುತ ಐಫೋನ್​​ 12 39.999 ರೂಪಾಯಿಗಳಿಗೆ ಲಭ್ಯವಿದೆ. 64 ಜಿಬಿ ಐಫೋನ್​ 12 ಖರೀದಿಸುವವರಿಗೆ ಈ ಬೆಲೆ ಅನ್ವಯವಾಗಲಿದೆ. ಇನ್ನುಳಿದಂತೆ 128 ಜಿಬಿಯ ಐಫೋನ್​ 12 ಬೇಕು ಎಂದು ನೀವು ಬಯಸಿದ್ರೆ 45 ಸಾವಿರ ರೂಪಾಯಿಗೆ ಸಿಗುತ್ತದೆ. ಒಂದು ವೇಳೆ ನೀವು ಫೋನ್​ ವಿನಿಮಯ ಆಯ್ಕೆಯನ್ನು ಸೆಲೆಕ್ಟ್​ ಮಾಡಿದ್ರೆ ಕೇವಲ 35 ಸಾವಿರ ರೂಪಾಯಿಗೆ ಐಫೋನ್​ 12ನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಐಫೋನ್​ 13ಗೆ 10,000 ರೂ. ಡಿಸ್ಕೌಂಟ್‌ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್​ ಮಿಸ್​ ಮಾಡ್ಲೇಬೇಡಿ

ಅಲ್ಲದೇ ಆಫರ್​ ನೀಡಿರುವ ಬ್ಯಾಂಕುಗಳ ಕ್ರೆಡಿಟ್​ ಏನಾದರೂ ನಿಮ್ಮ ಬಳಿ ಇದ್ದರೆ ಇನ್ನೂ ಹೆಚ್ಚಿನ ರಿಯಾಯಿತಿ ನಿಮಗೆ ಸಿಗೋದಂತೂ ಪಕ್ಕಾ..! ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಶ್ರೇಯಾಂಕದ ಎಷ್ಟೋ ಆಂಡ್ರಾಯ್ಡ್​ ಫೋನ್​ಗಳಿಗೆ ಹೋಲಿಕೆ ಮಾಡಿದ್ರೆ ಐಫೋನ್​ 12 ನಿಜಕ್ಕೂ ಒಂದು ಒಳ್ಳೆಯ ಆಯ್ಕೆಯಾಗಿದೆ.

iphone 12 available less than 40000 rs price
Image Credit : Apple

ಐಫೋನ್ 12 A14 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿದೆ, ಇದು Snapdragon 8 Gen 1 SoC ಗೆ ಹೋಲಿಸಿದರೆ, ಬೆಂಚ್‌ಮಾರ್ಕ್‌ಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರರ್ಥ, ನೀವು iPhone 12 ನ ಕಾರ್ಯಕ್ಷಮತೆಯನ್ನು ಹೋಲಿಸಿದರೆ, ಇದು 2022 ರಲ್ಲಿ ಲಾಂಚ್​ ಆಗಿರುವ ಎಲ್ಲಾ ಆಂಡ್ರಾಯ್ಡ್​ ಫೋನ್​ಗಳಿಗಿಂತ ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ : ಮೊಬೈಲ್​ ನಂಬರ್​​ 6,7,8 ಅಥವಾ 9 ಅಂಕೆಯಿಂದಲೇ ಆರಂಭಗೊಳ್ಳುವ ಹಿಂದಿನ ಸಿಕ್ರೇಟ್​ ಗೊತ್ತೇ..?

ಯಾವ ಜನರೇಷನ್​ ಆದರೂ ಓಕೆ ಐಫೋನ್​ ಒಂದು ಸಿಕ್ಕರೆ ಸಾಕು ಎನ್ನುವವರಿಗೆ ಅಥವಾ ಉತ್ತಮ ಬೆಲೆಯ ಆಂಡ್ರಾಯ್ಡ್​ ಫೋನ್​ಗಳಿಗೆ ಹುಡುಕಾಟ ನಡೆಸುತ್ತಿರುವವರಿಗೆ ಎಲ್ಲರಿಗೂ ಐಫೋನ್​ 12 ಬೆಸ್ಟ್​ ಆಯ್ಕೆಯಾಗಿದೆ. ಕ್ಯಾಮರಾ ಕ್ಲಾರಿಟಿ ಕೂಡ ತುಂಬಾನೇ ಚೆನ್ನಾಗಿದ್ದು ಡೀಪ್​ ಫ್ಯೂಶನ್​ ಫೋಟೋಗಳನ್ನೂ ಕ್ಲಿಕ್ಕಿಸಬಹುದಾಗಿದೆ.

iphone 12 available less than 40000 rs price

Comments are closed.