ದಿನಭವಿಷ್ಯ 04 ಡಿಸೆಂಬರ್‌ 2023 : ಯಾವ ರಾಶಿಯವರಿಗೆ ಇಂದು ಶುಭ

Horoscope Today : ದಿನಭವಿಷ್ಯ 04 ಡಿಸೆಂಬರ್‌ 2023 ಸೋಮವಾರ. ಇಂದು ದ್ವಾದಶ ರಾಶಿಗಳ ಮೇಲೆ ಮಖಾ ನಕ್ಷತ್ರದ ಪ್ರಭಾವ ಇರುತ್ತದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಹೇಗಿದೆ ಇಂದಿನ ದಿನಭವಿಷ್ಯ.

Horoscope Today : ದಿನಭವಿಷ್ಯ 04 ಡಿಸೆಂಬರ್‌ 2023 ಸೋಮವಾರ. ಇಂದು ದ್ವಾದಶ ರಾಶಿಗಳ ಮೇಲೆ ಮಖಾ ನಕ್ಷತ್ರದ ಪ್ರಭಾವ ಇರುತ್ತದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಹೇಗಿದೆ ಇಂದಿನ ದಿನಭವಿಷ್ಯ.

ಮೇಷರಾಶಿ ದಿನಭವಿಷ್ಯ
ನಿಮಗಾಗಿ ಇಂದು ಸಮಯವನ್ನು ಮೀಸಲಿಡಿ. ಹಣಕಾಸಿನ ಪರಿಸ್ಥಿತಿ ಸುಧಾರಣೆಯನ್ನು ಕಾಣಲಿದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ವರ್ತಿಸಿ. ಕಚೇರಿಯ ಕೆಲಸ ಕಾರ್ಯಗಳಲ್ಲಿ ಇಂದು ನಿಮಗೆ ಯಶಸ್ಸು ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಮನೆಯ ವಾತಾವರಣ ಬದಲಾವಣೆ ಆಗಲಿದೆ. ಅನೇಕ ಸಮಸ್ಯೆಗಳನ್ನು ಮನೆಯ ಸದಸ್ಯರು ನಿಮ್ಮ ಜೊತೆಗೆ ಇಂದು ಹಂಚಿಕೊಳ್ಳಲಿದ್ದಾರೆ. ಇಷ್ಟು ದಿನಗಳಿಗೆ ಹೋಲಿಸಿದ್ರೆ ನೀವು ಇಂದು ಹೆಚ್ಚು ಸಂತೋಷವಾಗಿ ಇರುತ್ತೀರಿ. ದೂರ ಪ್ರಯಾಣ ನಿಮಗೆ ಲಾಭವನ್ನು ತಂದುಕೊಡಲಿದೆ.

ಮಿಥುನರಾಶಿ ದಿನಭವಿಷ್ಯ
ಮಾಡುವ ಕೆಲಸ ಕಾರ್ಯಗಳಲ್ಲಿ ಬದಲಾವಣೆಯನ್ನು ಒಗ್ಗೂಡಿಸಿಕೊಳ್ಳಿ. ಆಪ್ತ ಸ್ನೇಹಿತನ ಸಹಾಯದಿಂದ ವ್ಯವಹಾರದಲ್ಲಿ ಹಣಕಾಸಿನ ಲಾಭ ದೊರೆಯಲಿದೆ. ಮಕ್ಕಳ ಕಡೆಯಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ಯಾರ ಮೇಲೆಯೂ ಅನುಮಾನ ಪಡಬೇಡಿ.

ಕರ್ಕಾಟಕರಾಶಿ ದಿನಭವಿಷ್ಯ
ಭೂಮಿ ಖರೀದಿಗೆ ಸಂಬಂಧಿಸಿದಂತೆ ಇಂದು ಖರ್ಚು ಮಾಡುವಿರಿ. ಹೊಸ ಪಾಲಿದಾರಿಕೆ ವ್ಯವಹಾರದಿಂದ ಮನಸ್ಥಿತಿ ಹಾಳಾಗಲಿದೆ. ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ. ವೈವಾಹಿಕವಾಗಿ ಯೋಗ್ಯ ಸಂಬಂಧಗಳು ಕೂಡಿ ಬರಲಿದೆ.

ಇದನ್ನೂ ಓದಿ : Digital Advocacy: ಡಿಜಿಟಲೀಕರಣ ತಂತ್ರಜ್ಞಾನದ ಕಾನೂನು ವ್ಯವಸ್ಥೆಯತ್ತ ವಕೀಲರು

ಸಿಂಹರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ. ಸಾಮಾಜಿಕವಾಗಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಇಂದು ಲಾಭದಾಯಕ. ಹಣಕಾಸಿನ ಅಭಿವೃದ್ದಿಯಿಂದ ಮನಸಿಗೆ ನೆಮ್ಮದಿ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

Horoscope Today 04 december 2023 Zodic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಹಳೆಯ ಹೂಡಿಕೆಯಿಂದ ಇಂದು ಹಣಕಾಸಿನ ಲಾಭ ದೊರೆಯಲಿದೆ. ಪ್ರೇಮಿಗಳ ಪಾಲಿಗೆ ಇಂದು ಶುಭ ದಿನ. ಅಪರಿಚಿತ ವ್ಯಕ್ತಿಗಳ ಬಗ್ಗೆ ಯಾವುದೇ ಕಾರಣಕ್ಕೂ ವ್ಯವಹರಿಸಬೇಡಿ. ಸಂಗಾತಿಯು ನಿಮಗೆ ದೇವತೆಯಂತೆ ಕಾಣಿಸುತ್ತಾಳೆ. ಮಕ್ಕಳ ಮೇಲೆ ಅಭಿಪ್ರಾಯವನ್ನು ಹೇರಬೇಡಿ.

ತುಲಾರಾಶಿ ದಿನಭವಿಷ್ಯ
ಒತ್ತಡದ ಕಾರ್ಯನಿರ್ವಹಣೆಯ ಜೊತೆಗೆ ಆರೋಗ್ಯವು ತುಂಬಾ ಚೆನ್ನಾಗಿ ಇರಲಿದೆ. ವೈಯಕ್ತಿಕವಾದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವಿರಿ. ಸಂಬಂಧಿಕರಿಂದ ವ್ಯವಹಾರಿಕವಾಗಿ ದೂರ ಇರುವುದು ಒಳಿತು. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕರೆಯುವಿರಿ. ನಿಮಗೆ ಅಚ್ಚರಿಯ ಘಟನೆಗಳು ನಡೆಯುತ್ತವೆ.

ಇದನ್ನೂ ಓದಿ : ಉತ್ತರದಲ್ಲಿ ಬಿಜೆಪಿ ದಿಗ್ವಿಜಯ : ಟ್ರೆಂಡ್‌ ಆಗ್ತಿದೆ ಮೋದಿ ಗ್ಯಾರಂಟಿ

ವೃಶ್ಚಿಕರಾಶಿ ದಿನಭವಿಷ್ಯ
ಹಳೆಯ ಸ್ನೇಹಿತರಿಂದ ನಿಮಗೆ ವ್ಯವಹಾರಿಕವಾದ ಲಾಭ ದೊರೆಯಲಿದೆ. ಪ್ರೀತಿ, ಪ್ರಣಯಕ್ಕೆ ಇಂದು ಉತ್ತಮವಾದ ದಿನ ಅಲ್ಲ. ಸಾಕಷ್ಟು ಸಮಯವನ್ನು ನಿಮಗಾಗಿ ಇಂದು ಮೀಸಲಿಡಿ. ಕೌಟುಂಬಿಕ ಅಗತ್ಯತೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಧನಸ್ಸುರಾಶಿ ದಿನಭವಿಷ್ಯ
ಆರೋಗ್ಯದ ಬಗೆಗಿನ ಚಿಂತೆಯನ್ನು ದೂರಮಾಡಿ. ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಉದ್ಯಮಿಗಳಿಗೆ ಇಂದು ದೂರ ಪ್ರಯಾಣ ಅದೃಷ್ಟವನ್ನು ತರಲಿದೆ. ಸಂಗಾತಿಯ ಜೊತೆಗೆ ಯಾವುದೇ ಕಾರಣಕ್ಕೂ ವಾದ ವಿವಾದಕ್ಕೆ ಇಳಿಯಬೇಡಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ನಿಮಗೆ ದೊರೆಯಲಿದೆ.

ಮಕರರಾಶಿ ದಿನಭವಿಷ್ಯ
ವೈವಾಹಿಕ ಜೀವನವು ನಿಜಕ್ಕೂ ಅದ್ವುತವಾಗಿ ಇರಲಿದೆ. ಕೆಲವೊಂದು ಕೆಲಸ ಕಾರ್ಯಗಳಲ್ಲಿ ನೀವು ಹಿನ್ನೆಡೆ ಅನುಣವಿಸುವಿರಿ. ಯಾವುದೇ ಕಾರಣಕ್ಕೂ ನೀವಿಂದು ಊದಾಸೀನತೆಯನ್ನು ತೋರ್ಪಡಿಸಬಾರದು. ಹೊಸ ಉದ್ಯಮ ಆರಂಭಿಸಲು ಉತ್ತಮವಾದ ಇದನ. ನಿಮ್ಮ ಅತಿಯಾದ ಜೀವನ ಶೈಲಿಯಿಂದ ಕುಟುಂಬಸ್ಥರಲ್ಲಿ ಆತಂಕ.

ಇದನ್ನೂ ಓದಿ : UPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಕುಂಭರಾಶಿ ದಿನಭವಿಷ್ಯ
ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರೀಯವಾಗಿ ಪಾಲ್ಗೊಳ್ಳುವಿರಿ. ಕೆಲಸದ ವಿಚಾರದಲ್ಲಿ ಕುಟುಂಬವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ಕ್ಷೇತ್ರದಲ್ಲಿ ಅಧಿಕ ಶ್ರಮವಹಿಸಬೇಕು. ಹೂಡಿಕೆಗಳಿಂದ ಲಾಭ ದೊರೆಯಲಿದೆ.

ಮೀನರಾಶಿ ದಿನಭವಿಷ್ಯ
ಆರೋಗ್ಯವು ಚೆನ್ನಾಗಿ ಇರುತ್ತದೆ. ಸಮಯವನ್ನು ಯಾವುದೇ ಕಾರಣಕ್ಕೂ ನೀವು ವ್ಯರ್ಥ ಮಾಡಬೇಡಿ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಹೊಸ ವ್ಯವಹಾರವು ನಿಮಗೆ ಲಾಭದಾಯಕವಾಗಿ ಇರಲಿದೆ. ಪಾಲುದಾರಿಕೆಯ ವ್ಯವಹಾರ ಇಂದು ನಿಮಗೆ ಶುಭದಾಯಕವಾಗಲಿದೆ.

Horoscope Today 04 december 2023 Zodic Sign

 

Comments are closed.