ಭಾನುವಾರ, ಏಪ್ರಿಲ್ 27, 2025
HomeCinema600 ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ : ಸೋಲದೇವನಹಳ್ಳಿಯಲ್ಲಿ ಅಂತ್ಯಕ್ರೀಯೆ

600 ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ : ಸೋಲದೇವನಹಳ್ಳಿಯಲ್ಲಿ ಅಂತ್ಯಕ್ರೀಯೆ

- Advertisement -

Kannada Actress Leelavathi No more : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ( Actress Leelavathi )ವಿಧಿಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಡಾ.ರಾಜ್‌ ಕುಮಾರ್‌, ವಿಷ್ಣುವರ್ಧನ್‌ ಸೇರಿದಂತೆ ದಿಗ್ಗಜ ನಟರ ಜೊತೆಗೆ ನಟಿಸಿದ್ದ ಲೀಲಾವತಿಯಮ್ಮ, ಕಳೆದ ಕೆಲವು ದಿನಗಳಿಂದಲೂ ಅನಾರೋಗ್ಯದಿಂದಲೂ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಬೆಂಗಳೂರು ನಗರ ಹೊರವಲಯದ ನೆಲಮಂಗಲ ಸಮೀಪದ ಸೋಲದೇವನಹಳ್ಳಿಯ ಬಳಿಯಲ್ಲಿ ತನ್ನ ಪುತ್ರ ನಟ ವಿನೋದ್‌ ರಾಜ್‌ (Vinod raj) ಅವರ ಜೊತೆಯಲ್ಲಿ ವಾಸವಾಗಿದ್ದರು. ಕಳೆದ ಕೆಲವು ದಿನಗಳಿಂದಲೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ನಿಧನರಾಗಿದ್ದಾರೆ. ಇದೀಗ ನಟಿ ಲೀಲಾವತಿ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ.

Leelavathi No more Kannada Actress Leelavathi cremation Soladevanahalli farm house
Image Credit to Original Source

ನಟಿ ಲೀಲಾವತಿ ಅವರು ಗುಣಮುಖರಾಗಲಿ ಎಂದು ಕರುನಾಡು ಪ್ರಾರ್ಥಿಸಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ಲೀಲಾವತಿ ಅವರನ್ನು ಸ್ಯಾಂಡಲ್‌ವುಡ್‌ ನಟರಾದ ಶಿವರಾಜ್‌ ಕುಮಾರ್‌, ಅರ್ಜುನ್‌ ಸರ್ಜ್‌, ಗೀತಾ ಶಿವರಾಜ್‌ ಕುಮಾರ್‌, ದರ್ಶನ್‌, ಅಭಿಷೇಕ್‌ ಅಂಬರೀಷ್‌ ಅವರು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರು ಕೂಡ ನಟ ವಿನೋದ್‌ ರಾಜ್‌ ಅವರಿಗೆ ಧೈರ್ಯ ಹೇಳಿದ್ದರು.

ಇದನ್ನೂ ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್

ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಪುತ್ರ ವಿನೋದ್‌ ರಾಜ್‌ ಅವರು ಸೋಲದೇವನಹಳ್ಳಿಯಲ್ಲಿ ಕೃಷಿ ಕಾರ್ಯವನ್ನು ಮಾಡಿಕೊಂಡು ತಾಯಿ ಯೊಂದಿಗೆ ವಾಸವಾಗಿದ್ದರು. ಲೀಲಾವತಿ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಿನಿಮಾ ರಂಗದ ಕಲಾವಿದರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು.

ಇತ್ತೀಚಿಗಷ್ಟೇ ಅವರು ತಮ್ಮ ಸ್ವತಃ ಹಣದಿಂದ ಸೋಲದೇವನಹಳ್ಳಿಯಲ್ಲಿ ಪಶು ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಿದ್ದರು. ಈ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನಡೆದ ಕೆಲವೇ ದಿನಗಳಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಸೋಲದೇವನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರೀಯೆ
ನಟಿ ಲೀಲಾವತಿ ಅವರ ಅಂತ್ಯಕ್ರೀಯೆ ನಾಳೆ ಸೋಲದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ನಡೆಯಲಿದೆ. ನಾಳೆ ಮಧ್ಯಾಹ್ನದ ವರೆಗೂ ಕೂಡ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ ಅಗತ್ಯ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ ಎಂದು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಇದನ್ನೂ ಓದಿ : ಶ್ರೀನಗರ ಕಿಟ್ಟಿ ಜೊತೆ ಮೇಘನಾ ಸರ್ಜಾ: ಸೆಟ್ಟೇರಿದ ಹೊಸ ಸಿನಿಮಾ ಅಮರ್ಥ

ಹಿರಿಯ ನಟಿಯ ನಿಧನಕ್ಕೆ ಗಣ್ಯರ ಸಂತಾಪ

ನಟಿ ಲೀಲಾವತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Leelavathi No more Kannada Actress Leelavathi cremation Soladevanahalli farm house
Image Credit to Original Source

ನಾಗಕನ್ನಿಕೆ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಲೀಲಾವತಿ ಅವರು, ನಂತರದಲ್ಲಿ ಖ್ಯಾತ ನಟಿಯಾಗಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮದುವೆ ಮಾಡಿ ನೋಡು, ಸಂತ ತುಕಾರಾಂ, ತುಂಬಿದ ಕೊಡ, ಕಣ್ತೆರೆದು ನೋಡು, ರಾಣಿ ಹೊನ್ನಮ್ಮ, ಗೆಜ್ಜೆ ಪೂಜೆ, ಸಿಪಾಯಿರಾಮು, ನಾಗರಹಾವು, ಭಕ್ತ ಕುಂಬಾರ, ಬಿಳಿ ಹೆಂಡ್ತಿ, ನಾ ನಿನ್ನ ಮರೆಯಲಾರೆ, ಕಳ್ಳ ಕುಳ್ಳ, ಡಾಕ್ಟರ್ ಕೃಷ್ಣ, ಕನ್ನಡದ ಕಂದ, ವೀರ ಕೇಸರಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ : ಅಬ್ಬಬ್ಬಾ… ಬಿಗ್​ಬಾಸ್​​ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್​ ಮಾಡಿಸಿಕೊಂಡ ಸ್ಪರ್ಧಿ

ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಮಲಯಾಲಂ ಸಿನಿಮಾಗಳಿ ನಟಿಸಿದ ಖ್ಯಾತ ಲೀಲಾವತಿ ಅವರಿಗೆ ಸಲ್ಲುತ್ತದೆ. ಮಾಂಗಲ್ಯ ಯೋಗ ಸಿನಿಮಾದ ಮೂಲಕ ಪೂರ್ಣ ಪ್ರಯಾಣದ ನಟಿಯಾಗಿ ಬಣ್ಣ ಹಚ್ಚಿದ್ದರು. ಅಲ್ಲದೇ ಡಾ.ರಾಜ್‌ ಕುಮಾರ್‌ ಅವರ ಜೊತೆಗೆ ರಣಧೀರ ಕಂಠೀರವ ಸಿನಿಮಾದಲ್ಲಿ ಮೊದಲ ಬಾರಿ ನಟಿಸಿದ್ದರು. ರಾಣಿ ಹೊನ್ನಮ್ಮ ಸಿನಿಮಾ ನಟಿ ಲೀಲಾವತಿ ಅವರಿಗೆ ಬಹು ಖ್ಯಾತಿಯನ್ನು ತಂದುಕೊಟ್ಟಿತ್ತು. ಗೆಜ್ಜೆಪೂಜೆ, ಸಿಪಾಯಿ ರಾಮು ಹಾಗೂ ಡಾಕ್ಟರ್‌ ಕೃಷ್ಣ ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದರು.

Leelavathi No more Kannada Actress Leelavathi cremation Soladevanahalli farm house

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular