IPL 2024 SRH Playing XI: ಇಂಡಿಯನ್ ಪ್ರೀಮಿಯರ್ ಲೀಗ್ 2024 (Indian premier league 2024) ನಲ್ಲಿ ಈ ಬಾರಿ ಹೆಚ್ಚು ತಂಡಗಳು ಬಲಿಷ್ಠ ತಂಡವನ್ನು ಹೊಂದಿವೆ. ಮಿನಿ ಹರಾಜಿನಲ್ಲಿ ಹಲವು ಬಲಿಷ್ಠ ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ತಂಡಗಳು ಯಶಸ್ವಿ ಆಗಿವೆ. ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK), ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡಗಳಿಗಿಂತಲೂ ಈ ಬಾರಿ ಹೆಚ್ಚು ಬಲಿಷ್ಠ ಆಗಿರುವುದು ಸನ್ರೈಸಸ್ ಹೈದ್ರಾಬಾದ್ (SRH) ತಂಡ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಅತೀ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿರುವ ಎಸ್ಆರ್ಎಚ್ ತಂಡ ಅತ್ಯಂತ ಬಲಿಷ್ಠವಾಗಿರುವ ಆಡುವ ಬಳಗವನ್ನು ಹೊಂದಿದೆ.
ಸನ್ರೈಸಸ್ ಹೈದ್ರಾಬಾದ್ ತಂಡ ಈ ಬಾರಿ ಶತಾಯಗತಾಯ ಐಪಿಎಲ್ ಟ್ರೋಫಿ ಜಯಿಸಲು ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನೇ ಖರೀದಿ ಮಾಡಿದೆ. ಅದ್ರಲ್ಲೂ ಈ ಬಾರಿಯ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ರನ್ನು ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದೆ. ಹೈದರಾಬಾದ್ ತಂಡ ಪಿಟ್ ಕಮ್ಮಿನ್ಸ್ ಅವರನ್ನು 20 ಕೋಟಿ 50 ಲಕ್ಷಕ್ಕೆ ಖರೀದಿ ಮಾಡಿದೆ. ಇದು ಹೈದ್ರಾಬಾದ್ ತಂಡದ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಪಾಯಕಾರಿ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ ಐಪಿಎಲ್ ಅಪಾಯಕಾರಿ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸನ್ರೈಸಸ್ ಹೈದ್ರಾಬಾದ್ ತಂಡ. ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ದ ಶತಕ ಸಿಡಿಸಿರುವ ಟ್ರಾವೆಸ್ ಹೆಡ್ ಕೂಡ ಈ ಬಾರಿ ಎಸ್ಆರ್ಎಚ್ ತಂಡ ಸೇರಿಕೊಂಡಿದ್ದಾರೆ. ಟ್ರಾವೆಸ್ ಹೆಡ್ ಜೊತೆಗೆ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದು, ಇಬ್ಬರೂ ಕೂಡ ಅಪಾಯಕಾರಿ ಆಟಗಾರರು ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : IPL 2024 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕ
ಮೂರನೇ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಆಟಗಾರ ರಾಹುಲ್ ತ್ರಿಪಾಠಿ ಕೂಡ ಅಪಾಯಕಾರಿ ಆಟಗಾರ. ಯಾವುದೇ ಸಂದರ್ಭದಲ್ಲೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಮ್ ಕೂಡ ಹೈದ್ರಾಬಾದ್ ತಂಡದಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ತಂಡದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಅಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಕೂಡ ಹೈದ್ರಾಬಾದ್ ತಂಡದಲ್ಲಿದ್ದು, ಮದ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ಐದನೇ ಕ್ರಮಾಂಕದಲ್ಲಿ ಯುವ ಆಲ್ರೌಂಡರ್ ಅಬ್ದುಲ್ ಸಮದ್ ತಂಡದಲ್ಲಿದ್ದಾರೆ. ಕಳೆದ ಕೆಲವು ಋತುವಿನಿಂದಲೂ ಹೈದ್ರಾಬಾದ್ ತಂಡವನ್ನು ಅಬ್ದುಲ್ ಸಮದ್ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯೂ ಅವರು ತಂಡಕ್ಕೆ ನೆರವಾಗಲಿದ್ದಾರೆ. ಜೊತೆಗೆ ಆಲ್ರೌಂಡರ್ ಸ್ಥಾನದಲ್ಲಿ ಟೀಂ ಇಂಡಿಯಾದ ಖ್ಯಾತ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ವನಿಂದು ಹಸರಂಗ, ಪ್ಯಾಟ್ ಕಮಿನ್ಸ್, ಶಹಬಾದ್ ಅಹ್ಮದ್ ತಂಡಕ್ಕೆ ನೆರವಾಗಲಿದ್ದಾರೆ. ಈ ಬಾರಿ ಎಸ್ಆರ್ಎಚ್ ತಂಡ ಐಪಿಎಲ್ ಮಿನಿ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ (ರೂ. 20.50 ಕೋಟಿ), ಟ್ರಾವಿಸ್ ಹೆಡ್ (ರೂ. 6.80 ಕೋಟಿ), ಜಯದೇವ್ ಉನದ್ಕತ್ (ರೂ. 1.60 ಕೋಟಿ), ವನಿಂದು ಹಸರಂಗಾ (ರೂ. 1.50 ಕೋಟಿ), ಆಕಾಶ್ ಸಿಂಗ್ (ರೂ. 20 ಲಕ್ಷ), ಝತ್ವೇಧಾ ಸುಬ್ರಮಣ್ಯನ್ (20 ಲಕ್ಷ ರೂ.) ಅವರನ್ನು ಖರೀದಿ ಮಾಡಿದೆ.
ಇದನ್ನೂ ಓದಿ :ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಅಲ್ಲ : ಆರ್ಸಿಬಿಯನ್ನು ಈ ಬಾರಿ ಚಾಂಪಿಯನ್ ಮಾಡ್ತಾರೆ ಈ 3 ಆಟಗಾರರು
SRH IPL 2024 : ಸನ್ರೈಸಸ್ ಹೈದ್ರಾಬಾದ್ ತಂಡ ಸಂಭಾವ್ಯ ಪ್ಲೇಯಿಂಗ್ XI:
ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್/ಉಪೇಂದ್ರ ಯಾದವ್, ಪ್ಯಾಟ್ ಕಮಿನ್ಸ್, ವಾಷಿಂಗ್ಟನ್ ಸುಂದರ್/ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್, ಟಿ. ಭುವನೇಶ್ವರ್ ಕುಮಾರ್.

IPL 2024 SRH Team: ಸನ್ರೈಸಸ್ ಹೈದ್ರಾಬಾದ್ ತಂಡ
ಟ್ರಾವಿಸ್ ಹೆಡ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ (ನಾಯಕ), ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಅನ್ಮೋಲ್ಪ್ರೀತ್ ಸಿಂಗ್, ಪ್ಯಾಟ್ ಕಮಿನ್ಸ್, ಟಿ. ನಟರಾಜನ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಉಪೇಂದ್ರ ಸಿಂಗ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಜಯದೇವ್ ಉನದ್ಕತ್, ಶಹಬಾಜ್ ಅಹ್ಮದ್,ಫಜಲ್ಹಕ್ ಫಾರೂಕಿ, ವನಿಂದು ಹಸರಂಗ, ಆಕಾಶ್ ಸಿಂಗ್, ಝಾತಾವೇದ್ ಸುಬ್ರಹ್ಮಣ್ಯನ್.
ಇದನ್ನೂ ಓದಿ : ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕ
ಬ್ಯಾಟ್ಸ್ಮನ್ : ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್ (ಎಸ್ಎ), ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್ (ಎಯುಎಸ್), ಅನ್ಮೋಲ್ಪ್ರೀತ್ ಸಿಂಗ್.
ಆಲ್ ರೌಂಡರ್ : ವಾಷಿಂಗ್ಟನ್ ಸುಂದರ್, ವನಿಂದು ಹಸರಂಗ (ಶ್ರೀಲಂಕಾ), ಅಭಿಷೇಕ್ ಶರ್ಮಾ, ಶಹಬಾಜ್ ಅಹ್ಮದ್, ಸನ್ವೀರ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ.
ವಿಕೆಟ್ಕೀಪರ್ : ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಉಪೇಂದ್ರ ಸಿಂಗ್ ಯಾದವ್, ಹೆನ್ರಿಚ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ).
ಬೌಲರ್ : ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸನ್ (ದಕ್ಷಿಣ ಆಫ್ರಿಕಾ), ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ), ಟಿ.ನಟರಾಜನ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಫಜಲ್ಹಕ್ ಫಾರೂಕಿ, ಜಾತವೇದ್ ಸುಬ್ರಮಣಿಯನ್.
IPL 2024 Playing XI of SRH team is stronger than CSK, RCB