IPL 2024 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕ

IPL 2023 ರಲ್ಲಿ RCB ಆಡಿರುವ 14 ಪಂದ್ಯಗಳ ಪೈಕಿ ಕೇವಲ 7 ಪಂದ್ಯಗಳನ್ನು ಮಾತ್ರ ಜಯಿಸಿದೆ. ಇದರ ಬೆನ್ನಲ್ಲೇ ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

IPL 2024 ನೇ ಆವೃತ್ತಿಗಾಗಿ ಐಪಿಎಲ್‌ ತಂಡಗಳು ಸಜ್ಜಾಗುತ್ತಿವೆ. ಈಗಾಗಲೇ ಮಿನಿ ಹರಾಜಿನ ಮೂಲಕ ಕೆಲವು ಆಟಗಾರರು ದುಬಾರಿ ಆಟಗಾರರನ್ನು ಬುಟ್ಟಿಗೆ ಹಾಕಿಕೊಂಡಿವೆ. ಅದ್ರಲ್ಲೂ 17 ನೇ ಆವೃತ್ತಿಯಲ್ಲಿಯೂ ಈ ಸಲ ಕಪ್‌ ನಮ್ದೆ ಅಭಿಯಾನ ಆರಂಭಿಸಿದೆ. ಶತಾಯಗತಾಯ ಗೆಲ್ಲಲೇ ಬೇಕು ಅಂತಾ ಪಣತೊಟ್ಟಿರುವ ಆರ್‌ಸಿಬಿ ( Royal Challengers Bangalore) ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕೆ ಇಳಿಯಲಿದೆ.

ಟೀಂ ಇಂಡಿಯಾದ ನಾಯಕತ್ವದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನೂ ತೊರೆದಿದ್ದರು. ವಿರಾಟ್‌ ಕೊಹ್ಲಿ ನಂತರ ಫಾಪ್ ಡು ಪ್ಲೆಸಿಸ್ ‌ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

indian premier league 2024 New captain for Royal Challengers Bangalore, Who will be the captain of RCB in IPL 2024
Image Credit to Original Source

ಐಪಿಎಲ್ 2022 ರ ಋತುವಿನ ನಂತರ ವಿರಾಟ್ ಕೊಹ್ಲಿ (Virat Kohli) ನಾಯಕತ್ವ ತ್ಯೆಜಿಸಿದ ಬೆನ್ನಲ್ಲೇ ಆರ್‌ಸಿಬಿ ನಾಯಕನಾಗಿರುವ ಫಾಪ್‌ ಡು ಪ್ಲೆಸಿಸ್‌ (faf du plessis) ನಾಯಕನಾಗಿ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಲ್ಲ. ವಿರಾಟ್‌ ಕೊಹ್ಲಿ 2023 ರ ಋತುವಿನಲ್ಲಿ ಬ್ಯಾಟಿಂಗ್‌ ಮೇಲೆಗೆ ಹೆಚ್ಚು ಗಮನ ಹರಿಸಿದ್ದರೂ ಕೂಡ ಆರ್‌ಸಿಬಿ ಕಳೆದ ಸಾಲಿನಲ್ಲಿ (IPL 2023) ರಲ್ಲಿ RCB 14 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಮಾತ್ರವೇ ಜಯಿಸಿತ್ತು.

ಕಳೆದ ಬಾರಿಯೂ ಐಪಿಎಲ್‌ ಕಪ್‌ ಗೆಲ್ಲಲು ಸಾಧ್ಯವಾಗದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲೀಗ ಮತ್ತೆ ನಾಯಕತ್ವದ ಪ್ರಶ್ನೆ ಎದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 16 ಸೀಸನ್‌ಗಳಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಮುಂದುವರೆದಿದೆ. ಆರ್‌ಸಿಬಿ ಪ್ರತೀ ಬಾರಿಯೂ ಈ ಸಲ ಕಪ್‌ ನಮ್ದೆ ಎಂಬ ಘೋಷಣೆ ಅಭಿಯಾನ ಆರಂಭಿಸುತ್ತಿದೆ. ಅಭಿಯಾನ ಆರಂಭಿಸಿ 7 ವರ್ಷಗಳೇ ಕಳೆದರೂ ಕೂಡ ಇಂದಿಗೂ ಐಪಿಎಲ್‌ ಟ್ರೋಫಿ ಗೆದ್ದಿಲ್ಲ.

ಇದನ್ನೂ ಓದಿ : ರಣಜಿ ಟ್ರೋಫಿ 2024 : ಕರ್ನಾಟಕ ತಂಡಕ್ಕೆ ಮಯಾಂಕ್‌ ಅಗರ್ವಾಲ್‌ ನಾಯಕ; ಅಭಿನವ್, ಸುಚಿತ್‌, ಕೆ.ಗೌತಮ್‌ ಗೆ ಕೋಕ್‌

ಕಳೆದ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ 14 ಪಂದ್ಯಗಳ ಪೈಕಿ ಕೇವಲ 7 ಪಂದ್ಯಗಳನ್ನು ಮಾತ್ರವೇ ಜಯಿಸಿತ್ತು. ಇದರ ಬೆನ್ನಲ್ಲೇ ಆರ್‌ಸಿಬಿ ತಂಡದ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತವರಿನಲ್ಲಿ ಆಡಿದ 7 ಪಂದ್ಯಗಳ ಪೈಕಿ 4 ರಲ್ಲಿ ಸೋಲನ್ನು ಕಂಡಿತ್ತು. ಹೀಗಾಗಿ ಆರ್‌ಸಿಬಿ ತಂಡ 2019ರ ನಂತರ ಮೊದಲ ಬಾರಿಗೆ ಲೀಗ್ ಹಂತದಿಂದ ಹೊರಬಿದ್ದಿತ್ತು.

indian premier league 2024 New captain for Royal Challengers Bangalore, Who will be the captain of RCB in IPL 2024
Image Credit to Original Source

ಇದೇ ಕಾರಣದಿಂದಲೇ ಈ ಬಾರಿ ಐಪಿಎಲ್‌ನಲ್ಲಿ ಫಾಪ್‌ ಡುಪ್ಲೆಸಿಸ್‌ ನಾಯಕತ್ವದಲ್ಲಿ ಆರ್‌ಸಿಬಿ ಕಣಕ್ಕೆ ಇಳಿಯುವುದು ಅನುಮಾನ. ಫಾಫ್ ನಾಯಕತ್ವದಲ್ಲಿ ಒಟ್ಟು 27 ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ 14 ಪಂದ್ಯಗಳನ್ನು ಗೆದ್ದಿದ್ದು, 13 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಕಳೆದ ಬಾರಿ ಫಾಪ್‌ ಡು ಪ್ಲೆಸಿಸ್‌ ಅನುಪಸ್ಥಿತಿಯಲ್ಲಿ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನೆಡೆಸಿದ್ದರು.

ಇದನ್ನೂ ಓದಿ : ಲಕ್ನೋ ಸೂಪರ್‌ ಜೈಂಟ್ಸ್‌ ಮೂಲಕ ಐಪಿಎಲ್‌ 2024ಗೆ ಎಂಟ್ರಿ ಕೊಟ್ಟ ಸುರೇಶ್‌ ರೈನಾ

ವಿರಾಟ್‌ ಕೊಹ್ಲಿ ಕಳೆದ ಬಾರಿ ತಮ್ಮ ಆಕ್ರಮಣಕಾರಿ ನಾಯಕತ್ವವನ್ನು ತೋರ್ಪಡಿಸಿದ್ದರು. ಅಷ್ಟೇ ಅಲ್ಲಾ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ತಂಡ ಗೆಲುವನ್ನು ಕಂಡಿತ್ತು. ಆರ್‌ಸಿಬಿ ಈ ಬಾರಿ ಮತ್ತೆ ವಿರಾಟ್‌ ಕೊಹ್ಲಿ ಅವರನ್ನೇ ನಾಯಕನನ್ನಾಗಿ ನೇಮಕ ಮಾಡಲಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಕಾರಣದಿಂದಾಗಿ ವಿರಾಟ್‌ ಕೊಹ್ಲಿ ಅವರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನೆಡೆಸುವುದು ಹೊರೆಯಾಗುತ್ತಿತ್ತು. ಆದ್ರೀಗ ವಿರಾಟ್‌ ಕೊಹ್ಲಿ ಟೀಂ ಇಂಡಿಯಾದಲ್ಲಿ ಕೇವಲ ಆಟಗಾರನಷ್ಟೆ. ಇದೇ ಕಾರಣದಿಂದಲೇ ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನೆಡೆಸುವ ಸಾಧ್ಯತೆಯೂ ಇದೆ.

indian premier league 2024 New captain for Royal Challengers Bangalore, Who will be the captain of RCB in IPL 2024
Image Credit to Original Source

ನಾಯಕತ್ವ ಬದಲಾಗಿದ್ದರೂ ಕೂಡ ಆರ್‌ಸಿಬಿ ತಂಡದ ಲಕ್‌ ಬದಲಾಗಿಲ್ಲ. ಅದ್ರಲ್ಲೂ ಬಲಿಷ್ಠ ಆಟಗಾರರು ಇದ್ದರೂ ಕೂಡ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆರ್‌ಬಿಸಿ ತಂಡದ ಪ್ರದರ್ಶನ ನೀರಸವಾಗಿತ್ತು. ಕಳೆದ ಬಾರಿ ಲೀಗ್‌ ಹಂತದಲ್ಲಿಯೇ ತಂಡದ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿರುವುದು ಆಘಾತವನ್ನು ಮೂಡಿಸಿದೆ. ಇನ್ನು 39 ವರ್ಷದ ಫಾರ್ ಡು ಪ್ಲೆಸಿಸ್ ನಿವೃತ್ತಿಯ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ : ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಈ ಎಲ್ಲಾ ಕಾರಣದಿಂದಾಗಿಯೇ ವಿರಾಟ್‌ ಕೊಹ್ಲಿ ಅವರನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಿದ್ರೆ ಅಚ್ಚರಿ ಪಡಬೇಕಾಗಿಲ್ಲ. ಒಟ್ಟಿನಲ್ಲಿ ಮುಂದಿನ ಐಪಿಎಲ್‌ನಲ್ಲಿ ಹಲವು ತಂಡಗಳು ಹೊಸ ನಾಯಕತ್ವದೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

IPL 2024 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:
ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪಲ್ ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರಾನ್, ಲಕ್ಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

indian premier league 2024 New captain for Royal Challengers Bangalore, Who will be the captain of RCB in IPL 2024 ?

Comments are closed.