IPL 2024 SRH captain Pat Cummins : ಇಂಡಿಯನ್ ಪ್ರೀಮಿಯರ್ ಲೀಗ್ 2024 (Indian Premier League 2024 ) ರಲ್ಲಿ ಸನ್‌ರೈಸಸ್ ಹೈದ್ರಾಬಾದ್ ತಂಡ ಹೊಸ ರೂಪದಲ್ಲಿ ಕಣಕ್ಕೆ ಇಳಿಯಲಿದೆ. ಸದ್ಯ ಮಕ್ರಾಮ್ ತಂಡದ ನಾಯಕರಾಗಿದ್ದು, 2024ರಲ್ಲಿ ಪ್ಯಾಟ್ ಕಮ್ಮಿನ್ಸ್ (Pat Cummins) ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಐಪಿಎಲ್ 2024ರ ಹರಾಜಿನಲ್ಲಿ ದಾಖಲೆಯ 20.50 ಕೋಟಿ ರೂ. ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಿದ ನಂತರದಲ್ಲೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಬಹುದು ಎಂದು ಹೇಳಲಾಗಿತ್ತು. ಇನ್ನು ಆಸ್ಟ್ರೇಲಿಯಾ ತಂಡದ ನಾಯಕರಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಅನ್ನು ಗೆಲ್ಲಿಸಿ ಕೊಟ್ಟಿದ್ದರು.

ಕ್ರಿಕ್ ಬಜ್ ವರದಿಯ ಪ್ರಕಾರ,ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2024 ಸೀಸನ್‌ಗೆ ಪ್ಯಾಟ್ ಕಮ್ಮಿನ್ಸ್ ಅವರನ್ನು ನಾಯಕನನ್ನಾಗಿ ಘೋಷಿಸುತ್ತದೆ. ಐಡೆನ್ ಮಾರ್ಕ್ರಾಮ್, ಕಳೆದ ಎರಡು ಋತುಗಳಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸಿದ್ದಾರೆ, ಆದರೆ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಅದ್ರಲ್ಲೂ 2022 ರಲ್ಲಿ ತಂಡ 8 ನೇ ಸ್ಥಾನವನ್ನು ಗಳಿಸಿತ್ತು. 2023 ರಲ್ಲಿ 10 ನೇ ಸ್ಥಾನದಲ್ಲಿ ಆಟವನ್ನು ಕೊನೆಗೊಳಿಸಿತ್ತು.
ಇದನ್ನೂ ಓದಿ : IPL ನಿಂದ ದೂರವಾಗ್ತಾರಾ ಎಂಎಸ್ ಧೋನಿ ? ಆಪ್ತ ಸ್ನೇಹಿತನ ಐಪಿಎಲ್ ಭವಿಷ್ಯ ತಿಳಿಸಿದ ಪರಮ್‌ಜಿತ್ ಸಿಂಗ್
ಆದರೆ ಮಕ್ರಾಮ್ ದಕ್ಷಿಣ ಆಫ್ರಿಕಾದ T20I ನಾಯಕ SA20 ನಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. 2023 ಮತ್ತು 2024 ರಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಸತತವಾಗಿ ಪ್ರಶಸ್ತಿ ಪಡೆಯುವಲ್ಲಿ ಮಾರ್ಕ್ರಾಮ್ ತಂಡವನ್ನು ಮುನ್ನಡೆಸಿದ್ದಾರೆ. ಸತತ ಪ್ರಶಸ್ತಿಯನ್ನು ಜಯಿಸಿದ್ದರು ಕೂಡ, ಐಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಕಳೆದ ಸಾಲಿನ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡ 13 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್ : ದೇಶೀಯ ಕ್ರಿಕೆಟ್ ಆಡದಿದ್ರೆ ಒಪ್ಪಂದವೇ ರದ್ದು !

IPL 2024 ಸನ್‌ರೈಸರ್ಸ್ ಹೈದ್ರಾಬಾದ್ ಸಂಪೂರ್ಣ ತಂಡ :
ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ (ಸಿ), ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ. ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಹ್ಮಣ್ಯನ್.
ಇದನ್ನೂ ಓದಿ : IPL 2024 KL Rahul : ಕೆಎಲ್ ರಾಹುಲ್ ಗಂಭೀರ, ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಐಪಿಎಲ್‌ನಿಂದ ಔಟ್ ?
IPL 2024: Pat Cummins captains Sunrisers Hyderabad