IPL 2024 KL Rahul : ಕೆಎಲ್‌ ರಾಹುಲ್‌ ಗಂಭೀರ, ಲಕ್ನೋ ಸೂಪರ್‌ಜೈಂಟ್ಸ್‌ ನಾಯಕ ಐಪಿಎಲ್‌ನಿಂದ ಔಟ್‌ ?

Lucknow Super Giants captain KL Rahul out : ಕನ್ನಡಿಗ ಕೆಎಲ್‌ ರಾಹುಲ್‌ (KL Rahul)  ಲಂಡನ್‌ಗೆ ಹಾರಿದ್ದಾರೆ ಹೀಗಾಗಿ ಲಕ್ನೋ ಸೂಪರ್‌ ಜೈಂಟ್ಸ್‌ ನಾಯಕ ಕೆಎಲ್‌ ರಾಹುಲ್‌ ಐಪಿಎಲ್‌ನಿಂದ ಹೊರ ಬೀಳುವ ಸಾಧ್ಯತೆಯಿದೆ.

IPL 2024 Lucknow Super Giants captain KL Rahul out : ಕನ್ನಡಿಗ ಕೆಎಲ್‌ ರಾಹುಲ್‌ (KL Rahul)  ಲಂಡನ್‌ಗೆ ಹಾರಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ (India vs England Test ನಡುವಿ ಟೆಸ್ಟ್‌ ಪಂದ್ಯದ ವೇಳೆಯಲ್ಲಿಯೇ ಗಾಯಗೊಂಡಿರುವ ಕೆಎಲ್‌ ರಾಹುಲ್‌ ಅವರನ್ನು ಚಿಕಿತ್ಸೆಗಾಗಿ ಬಿಸಿಸಿಐ ಲಂಡನ್‌ಗೆ ಕಳುಹಿಸಿದೆ. ಹೀಗಾಗಿ ಲಕ್ನೋ ಸೂಪರ್‌ ಜೈಂಟ್ಸ್‌ ನಾಯಕ ಕೆಎಲ್‌ ರಾಹುಲ್‌ ಐಪಿಎಲ್‌ (Indian Premier League 2024) ನಿಂದ ಹೊರ ಬೀಳುವ ಸಾಧ್ಯತೆಯಿದೆ.

Lucknow Super Giants captain KL Rahul is in doubt for IPL 2024 as he flew to London for treatment of groin pain
Image Credit to Original Source

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದ ವೇಳೆಯಲ್ಲಿ ಕೆಎಲ್‌ ರಾಹುಲ್‌ ತೊಡೆಸಂಧು ನೋವಿನಿಂದ ಬಳಲಿದ್ದರು. ತೀವ್ರ ನೋವಿನ ಕಾರಣದಿಂದಾಗಿ ರಾಹುಲ್‌ ಉಳಿದ ಟೆಸ್ಟ್‌ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದರು. ತೊಡೆಸಂಧು ನೋವಿನ ಕಾರಣಕ್ಕೆ ರಾಹುಲ್‌ ಬಳ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದ್ರೀಗ ಬಿಸಿಸಿಐ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಮಾರ್ಚ್‌ ೭ರಿಂದ ಆರಂಭವಾಗಿರಲಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿಯೂ ರಾಹುಲ್‌ ಆಡುವುದು ಅನುಮಾನ. ಭಾರತ ಟೆಸ್ಟ್‌ ಸರಣಿಯನ್ನು ಜಯಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಸಿಐ ಯುವ ಆಟಗಾರರ ತಂಡವನ್ನು ಅಂತಿಮ ಪಂದ್ಯಕ್ಕೆ ನೇಮಕ ಮಾಡಿದೆ. ಕೆಎಲ್‌ ರಾಹುಲ್‌ ಅವರ ನೋವು ಗುಣಮುಖರಾದ್ರೆ ಅವರು ಭಾರತಕ್ಕೆ ಶೀಘ್ರದಲ್ಲಿಯೇ ವಾಪಾಸಾಗಲಿದ್ದಾರೆ.

ಇದನ್ನೂ ಓದಿ : IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್‌ ಗಾಯಕ್ವಾಡ್‌ ನಾಯಕ

ಒಂದೊಮ್ಮೆ ವೈದ್ಯರು ಇನ್ನಷ್ಟು ವಾರಗಳ ವಿಶ್ರಾಂತಿಗೆ ಸೂಚನೆಯನ್ನು ನೀಡಿದ್ರೆ ಅವರು ಐಪಿಎಲ್‌ನ ಹಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕನಾಗಿರುವ ಕೆಎಲ್‌ ರಾಹುಲ್‌ ಕಳೆದ ಐಪಿಎಲ್‌ನಲ್ಲಿ ಗಾಯದ ಕಾರಣದಿಂದಲೇ ಅರ್ಧದಲ್ಲಿಯೇ ಐಪಿಎಲ್‌ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಹೀಗಾಗಿ ಕೃನಾಲ್‌ ಪಾಂಡ್ಯ ಲಕ್ನೋ ತಂಡವನ್ನು ಮುನ್ನೆಡೆಸಿದ್ದರು.

ಇದನ್ನೂ ಓದಿ : WTC Points Table 2023-25: ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿ ಗೆಲುವು, ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಯಲ್ಲಿ ಭಾರತಕ್ಕೆ 2 ನೇ ಸ್ಥಾನ

ಕೆಎಲ್‌ ರಾಹುಲ್‌ ಈ ಬಾರಿಯೂ ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಕೆಎಲ್‌ ರಾಹುಲ್‌ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾರಾ ಇಲ್ಲವೋ ಅನ್ನೋದು ಮಾರ್ಚ್‌ ಮೊದಲ ವಾರದಲ್ಲಿ ನಿರ್ಧಾರವಾಗಲಿದೆ. ಕಳೆದ ಎರಡು ಅವಧಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಉತ್ತಮ ಪ್ರದರ್ಶನ ನೀಡಿತ್ತು.

Lucknow Super Giants captain KL Rahul is in doubt for IPL 2024 as he flew to London for treatment of groin pain
Image Credit to Original Source

ಭಾರತ ಟೆಸ್ಟ್‌ ತಂಡ :
ರೋಹಿತ್‌ ಶರ್ಮಾ ( ನಾಯಕ), ಶುಭಮನ್‌ ಗಿಲ್‌, ಯಶಸ್ವಿ ಐಸ್ವಾಲ್‌, ದೇವದತ್ತ ಪಡಿಕ್ಕಲ್‌, ಸರ್ಫರಾಜ್‌ ಖಾನ್‌, ರಜತ್‌ ಪಾಟೀದಾರ್‌, ಕೆಎಲ್‌ ಭರತ್‌ ( ವಿಕೆಟ್‌ ಕೀಪರ್)‌, ಧ್ರುವ ಜುರೆಲ್‌ ( ವಿಕೆಟ್‌ ಕೀಪರ್)‌, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಮುಖೇಶ್‌ ಕುಮಾರ್.‌

ಇದನ್ನೂ ಓದಿ : ಐಪಿಎಲ್ 2024ರಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ? ಹೀಗೇ ಹೇಳಿದ್ಯಾಕೆ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌

Lucknow Super Giants captain KL Rahul is in doubt for IPL 2024 as he flew to London for treatment of groin pain

Comments are closed.