ಭಾನುವಾರ, ಏಪ್ರಿಲ್ 27, 2025
HomeSportsCricketVirat Kohli’s daughter: ಅಪ್ಪನಂತೆ ಮಗಳು, 3ನೇ ವಯಸ್ಸಲ್ಲೇ ಬ್ಯಾಟ್ ಬೀಸುತ್ತಿದ್ದಾಳಂತೆ ವಿರಾಟ್ ಕೊಹ್ಲಿ ಪುತ್ರಿ...

Virat Kohli’s daughter: ಅಪ್ಪನಂತೆ ಮಗಳು, 3ನೇ ವಯಸ್ಸಲ್ಲೇ ಬ್ಯಾಟ್ ಬೀಸುತ್ತಿದ್ದಾಳಂತೆ ವಿರಾಟ್ ಕೊಹ್ಲಿ ಪುತ್ರಿ !

- Advertisement -

Virat Kohli daughter Vamika Kohli :   ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್. ಕ್ರಿಕೆಟ್ ದಿಗ್ಗಜದ ದಾಖಲೆ ಗಳನ್ನೆಲ್ಲಾ ಪುಡಿಗಟ್ಟುತ್ತಿರುವ ಮಾನ್’ಸ್ಟರ್ ವಿರಾಟ್ ಕೊಹ್ಲಿ. ಬ್ಯಾಟಿಂಗ್ ಗ್ರೇಟ್ ವಿರಾಟ್ ಕೊಹ್ಲಿಯವರ ಪುತ್ರಿ ವಮಿಕ ಕೊಹ್ಲಿ (Vamika Kohli) ಯೂ ಅಪ್ಪನಂತೆ ಕ್ರಿಕೆಟರ್ ಆಗ್ತಾಳಾ ? ಈ ಪ್ರಶ್ನೆ ಏಳಲು ಕಾರಣ ವಿರಾಟ್ ಕೊಹ್ಲಿ ಆಡಿರುವ ಅದೊಂದು ಮಾತು.

Virat Kohli daughter Vamika Kohli future cricketers RCB vs CSK IPL 2024
Image Credit to Original Source

ಮಿಸ್ಟರ್ ನ್ಯಾಗ್ಸ್ (Mr. nags) ಖ್ಯಾತಿಯ ಡ್ಯಾನಿಷ್ ಸೇಠ್ (Danish Seth) ನಡೆಸಿಕೊಡುವ ಆರ್’ಸಿಬಿ ಇನ್’ಸೈಡರ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ತಮ್ಮ ಮಗಳು ವಾಮಿಕಾ (Vamika Kohli) ಮತ್ತು ಪುತ್ರ ಅಕಾಯ್ (Akaay Kohli) ಬಗ್ಗೆ ಮಾತನಾಡಿದ್ದಾರೆ. ಆರ್’ಸಿಬಿ  ಇನ್’ಸೈಡರ್ (RCB Insider) ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಮಿಸ್ಟರ್ ನ್ಯಾಗ್ಸ್ ಮಧ್ಯೆ ನಡೆದ ಮಾತುಕತೆಯ ವಿವರ ಇಲ್ಲಿದೆ.

ಇದನ್ನೂ ಓದಿ : Dhoni Meets CISF Soldiers: RCB ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸೈನಿಕರನ್ನು ಭೇಟಿ ಮಾಡಿದ ಧೋನಿ!

ಮಿಸ್ಟರ್ ನ್ಯಾಗ್ಸ್: ಮತ್ತೆ ತಂದೆಯಾಗಿದ್ದಕ್ಕೆ ಅಭಿನಂದನೆಗಳು.
ವಿರಾಟ್ ಕೊಹ್ಲಿ: ಥ್ಯಾಂಕ್ಯೂ.

ಮಿಸ್ಟರ್ ನ್ಯಾಗ್ಸ್: ಪಾಪು ಹೇಗಿದೆ?
ವಿರಾಟ್ ಕೊಹ್ಲಿ: ಪಾಪು? ಹಾಗೆಂದರೇನು?

ಮಿಸ್ಟರ್ ನ್ಯಾಗ್ಸ್: ಪಾಪು ಎಂದರೆ ಮಗು ಎಂದರ್ಥ.
ವಿರಾಟ್ ಕೊಹ್ಲಿ: ಮಗು ಚೆನ್ನಾಗಿದೆ, ಆರೋಗ್ಯವಾಗಿದೆ.

ಮಿಸ್ಟರ್ ನ್ಯಾಗ್ಸ್: ಒಂದು ಮಗು ಐಪಿಎಲ್’ಗೆ, ಇನ್ನೊಂದು ಮಗು ಡಬ್ಲ್ಯೂಪಿಎಲ್’ಗೆ.. ಹ್ಹ ಹ್ಹ ಹ್ಹ ಹ್ಹ…
ವಿರಾಟ್ ಕೊಹ್ಲಿ: ಏನು ಹೇಳ್ತಿದ್ದಾನೆ ಇವ್ನು..! (ನಗು)
ಮಗಳು ಬ್ಯಾಟ್ ಹಿಡಿಯುತ್ತಿದ್ದಾಳೆ, ಬ್ಯಾಟ್ ಬೀಸುವುದನ್ನು ಎಂಜಾಯ್ ಮಾಡುತ್ತಿದ್ದಾಳೆ.

ಮಿಸ್ಟರ್ ನ್ಯಾಗ್ಸ್: ಓಹ್, ದಟ್ಸ್ ಕ್ಯೂಟ್!
ವಿರಾಟ್ ಕೊಹ್ಲಿ: ಆದರೆ ನನಗೆ ಗೊತ್ತಿಲ್ಲ, ಮಕ್ಕಳು ಕ್ರಿಕೆಟ್ ಆಡುತ್ತಾಳೋ ಇಲ್ಲವೋ ಗೊತ್ತಿಲ್ಲ, ಅದು ಅವಳ ಆಯ್ಕೆ.

ಇದನ್ನೂ ಓದಿ : Last Match For Rahul & Rohit: ಲಕ್ನೋ ಪರ ರಾಹುಲ್’ಗೆ ಇಂದೇ ಲಾಸ್ಟ್ ಮ್ಯಾಚ್, ಮುಂಬೈ ಪರ ಕೊನೆಯ ಪಂದ್ಯವಾಡಲಿದ್ದಾರೆ ರೋಹಿತ್ !

https://x.com/wrognxvirat/status/1791321559917064434?s=46

ವಿರಾಟ್ ಕೊಹ್ಲಿ ಅವರ ಪುತ್ರಿ ವಾಮಿಕಾಗೆ ಈಗ 3 ವರ್ಷ ವಯಸ್ಸು. ಇದೇ ವರ್ಷದ ಫೆಬ್ರವರಿ 15 ರಂದು ವಿರಾಟ್ ಕೊಹ್ಲಿ ಗಂಡು ಮಗುವಿನ ತಂದೆಯಾಗಿದ್ದರು. ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ತಮ್ಮ 2ನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ ಮತ್ತು 36 ವರ್ಷದ ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ಮದುವೆಯಾಗಿದ್ದರು.

Virat Kohli daughter Vamika Kohli future cricketers RCB vs CSK IPL 2024
Image Credit to Original Source

ಇದನ್ನೂ ಓದಿ : Hardik Pandya: ರೋಹಿತ್, ಅಗರ್ಕರ್ ಬೇಡ ಎಂದರೂ ಹಾರ್ದಿಕ್ ಪಾಂಡ್ಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ? ಇಲ್ಲಿದೆ ಅಸಲಿ ಕಾರಣ !

ಐಪಿಎಲ್-2024 (IPL 2024) ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ವಿರಾಟ್ ಕೊಹ್ಲಿ 13 ಪಂದ್ಯಗಳಿಂದ ಒಂದು ಶತಕ ಹಾಗೂ 5 ಅರ್ಧಶತಕಗಳ ಸಹಿತ 155.16ರ ಉತ್ತಮ ಸ್ಟ್ರೈಕ್’ರೇಟ್’ನೊಂದಿಗೆ 661 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿ ಕೊಂಡಿದ್ದಾರೆ.

Virat Kohli daughter Vamika Kohli future cricketers RCB vs CSK IPL 2024 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular