ICC T20 World Cup 2024 IND vs IRE Live Score: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಭಾರತ ತಂಡ ಇಂದು ಐರ್ಲೆಂಡ್ (India vs Ireland) ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಇಂದು ಆರಂಭಿಸಲಿದೆ. ಐಸಿಸಿ ಟಿ20 ವಿಶ್ವಕಪ್’ನಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆಗೆ ಐರ್ಲೆಂಡ್ ವಿರುದ್ಧದ ಪಂದ್ಯ ಉತ್ತರ ನೀಡಲಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಪೈಕಿ ಒಬ್ಬರು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಐಪಿಎಲ್-2024 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕನಾಗಿ ಆಡಿದ್ದ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ತೋರಿದ್ದರು. ಆಡಿದ 15 ಪಂದ್ಯಗಳಲ್ಲಿ 61.75ರ ಸರಾಸರಿಯಲ್ಲಿ 154.69ರ ಸ್ಟ್ರೇಕ್”ನೊಂದಿಗೆ 1 ಶತಕ ಹಾಗೂ ಐದು ಅರ್ಧಶತಕಗಳ ಸಹಿತ 741 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದರು. ಐಪಿಎಲ್-2024ರಲ್ಲಿ ಕೊಹ್ಲಿ 62 ಬೌಂಡರಿ ಹಾಗೂ 38 ಸಿಕ್ಸರ್’ಗಳನ್ನೂ ಸಿಡಿಸಿದ್ದರು.
ಇದನ್ನೂ ಓದಿ : Gautam Gambhir India Coach: ಟೀಮ್ ಇಂಡಿಯಾದ ಗಂಭೀರ್ ಕೋಚ್ ಆಗುವುದು ಪಕ್ಕಾ, ದೊಡ್ಡ ಸಂದೇಶ ರವಾನಿಸಿದ ಗೌತಿ!
ಐಪಿಎಲ್’ನಲ್ಲಿ ಓಪನರ್ ಆಗಿ ಯಶಸ್ವಿಯಾಗಿರುವ ಕಾರಣ, ಟಿ20 ವಿಶ್ವಕಪ್’ನಲ್ಲೂ ವಿರಾಟ್ ಕೊಹ್ಲಿ ಅವರನ್ನು ಆರಂಭಿಕನಾಗಿ ಆಡಿಸಿದರೆ ಹೇಗೆ ಎಂಬ ಚಿಂತನೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್’ನಲ್ಲಿದೆ. ಒಂದು ವೇಳೆ ಬಲಗೈ-ಎಡಗೈ ಜೊತೆಗಾರರಿಗೆ ಮಣೆ ಹಾಕಿದರೆ ಆಗ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಅವರೇ ಓಪನರ್’ಗಳಾಗಿ ಆಡಲಿದ್ದಾರೆ. ಅಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ.
ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡಿದರೆ ಮಧ್ಯಮ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್ರೌಂಡರ್’ನನ್ನು ಆಡಿಸುವ ಅವಕಾಶ ಟೀಮ್ ಇಂಡಿಯಾಗೆ ಸಿಗಲಿದೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತ್ಯಂತ ವೇಗವಾಗಿ 27 ಸಾವಿರ ರನ್ ಪೂರ್ತಿಗೊಳಿಸಲು ವಿರಾಟ್ ಕೊಹ್ಲಿ ಅವರಿಗೆ ಕೇವಲ 267 ರನ್’ಗಳ ಅವಶ್ಯಕತೆಯಿದೆ. 27,00 ರನ್’ಗಳ ಗಡಿಯನ್ನು ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲೇ ತಲುಪುವ ಸಾಧ್ಯತೆಯಿದೆ.
ಇದನ್ನೂ ಓದಿ : Hardik Pandya Played For West Indies ? ವೆಸ್ಟ್ ಇಂಡೀಸ್ Vs PNG ಪಂದ್ಯದಲ್ಲಿ ವಿಂಡೀಸ್ ಪರ ಆಡಿದ ಹಾರ್ದಿಕ್ ಪಾಂಡ್ಯ !

ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಸಹಿತ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 522 ಪಂದ್ಯಗಳನ್ನಾಡಿದ್ದು 80 ಶತಕ ಹಾಗೂ 139 ಅರ್ಧಶತಗಳ ಸಹಿತ 26,733 ರನ್ ಕಲೆ ಹಾಕಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ : India Vs Ireland T20 World Cup 2024 : ಭಾರತದ ವಿಶ್ವಕಪ್:ಅಭಿಯಾನ ಇಂದು ಆರಂಭ, ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಹೀಗಿದೆ ಪ್ಲೇಯಿಂಗ್ XI
ಭಾರತ Vs ಐರ್ಲೆಂಡ್ ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂ, ನ್ಯೂ ಯಾರ್ಕ್.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್
ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.
ICC T20 World Cup 2024 India vs Ireland Virat Kohli open the innings with Rohit Sharma