Gautam Gambhir India Coach: ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಓಪನರ್, ಐಪಿಎಲ್-2024 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ, ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir) ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ (Team India Head Coach) ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಈ ಜೂನ್ ಅಂತ್ಯದ ವೇಳೆಗೆ ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ಗಂಭೀರ್ ಅವರ ಹೆಸರನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಜೂನ್ 31ಕ್ಕೆ ಅಂತ್ಯಗೊಳ್ಳಲಿದೆ. ಐಸಿಸಿ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆ ತೊರೆಯಲಿದ್ದಾರೆ. ಹೀಗಾಗಿ ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿತ್ತು, ಸುಮಾರು 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ ಗಂಭೀರ್ ಅವರನ್ನು ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಒಲವು ಹೊಂದಿದೆ.
ಸ್ವತಃ ಗೌತಮ್ ಗಂಭೀರ್ ಕೂಡ ಭಾರತ ತಂಡದ ಕೋಚ್ ಆಗಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಕೆಲ ದಿನಗಳ ಹಿಂದೆ ಸುಳಿವು ಬಿಟ್ಟುಕೊಟ್ಟಿದ್ದರು. “ನಾನು ಭಾರತ ತಂಡಕ್ಕೆ ಕೋಚಿಂಗ್ ನೀಡುವುದನ್ನು ನಿಜಕ್ಕೂ ಇಷ್ಟ ಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ” ಎಂದು ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌತಮ್ ಗಂಭೀರ್ ಹೇಳಿದ್ದರು.

ಇದನ್ನೂ ಓದಿ : CCPL 2024 : ಕನ್ನಡಿಗ ಮುಕುಂದ್ ಗೌಡ ಮಾರ್ಗದರ್ಶನದ ರಾಯ್ಪುರ ರೈನೋಸ್ ಚೊಚ್ಚಲ ಚಾಂಪಿಯನ್
ಗಂಭೀರ್ ಅವರ ಹೇಳಿಕೆಯನ್ನು ನೋಡಿದರೆ ಅವರೇ ಭಾರತ ತಂಡದ ನೂತನ ಕೋಚ್ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಏಕೈಕ ಅಭ್ಯರ್ಥಿ ಗೌತಮ್ ಗಂಭೀರ್ ಆಗಿದ್ದಾರೆ. ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು. ಭಾರತ ತಂಡದ ನೂತನ ಮುಖ್ಯ ಕೋಚ್ ಅವಧಿ ಮೂರೂವರೆ ವರ್ಷಗಳದ್ದಾಗಿರುತ್ತದೆ. 2024ರ ಜುಲೈ 1ಕ್ಕೆ ಆರಂಭವಾಗಿ 2027ರ ಡಿಸೆಂಬರ್ 31ಕ್ಕೆ ಕೋಚ್ ಹುದ್ದೆ ಅವಧಿ ಕೊನೆಗೊಳ್ಳಲಿದೆ. ಭಾರತ ಪುರುಷರ ತಂಡದ ಪರ್ಫಾಮೆನ್ಸ್ ಮತ್ತು ಮ್ಯಾನೇಜ್ಮೆಂಟ್ ಜವಾಬ್ದಾರಿ ಮುಖ್ಯ ತರಬೇತುದಾರನದ್ದಾಗಿರುತ್ತದೆ.
ಇದನ್ನೂ ಓದಿ : India Women Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ ಆರ್’ಸಿಬಿ ಸ್ಟಾರ್ ಆಶಾ ಶೋಭನ !
Gautam Gambhir India Coach: Gautam Gambhir Team India Head Coach, announcement at the end of the month