ಸೇಂಟ್ ಲೂಸಿಯಾ: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ (Indian Cricket Team) ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಟೂರ್ನಿಯ ತನ್ನ 3ನೇ ಹಾಗೂ ಕೊನೆಯ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು (India Vs Australia) ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯ ಸೇಂಟ್ ಲೂಸಿಯಾದ ಗ್ರಾಸ್ ಐಸ್ಲೆಟ್’ನಲ್ಲಿರುವ ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಗ್ರೂಪ್-1ರಲ್ಲಿ ಆಡಿದ ಮೊದಲೆರಡು ಸೂಪರ್-8 ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ 4 ಅಂಕ ಗಳಿಸಿ ಈಗಾಗಲೇ ಸೆಮಿಫೈನಲ್’ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ. ಉಳಿದ ಒಂದು ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಸೋಮವಾರ ನಡೆಯುವ ಪಂದ್ಯವನ್ನು ಭಾರತ ಗೆದ್ದರೆ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಬಾಗಿಲು ಬಹುತೇಕ ಬಂದ್ ಆಗಲಿದೆ. ಇದಾದ ನಂತರ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದರೆ ಆಫ್ಘನ್ ಪಡೆ ಸೆಮಿಫೈನಲ್’ಗೆ ಲಗ್ಗೆ ಇಡಲಿದೆ. ಆಗ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರ ಬೀಳಲಿದೆ.
ಇದನ್ನೂ ಓದಿ : ಸದ್ಯದಲ್ಲೇ ನನಸಾಗಲಿದೆ ಟೀಮ್ ಇಂಡಿಯಾ ಪರ ಆಡುವ ಅಸ್ಸಾಂ ಸ್ಟಾರ್ ಕ್ರಿಕೆಟಿಗ ರಿಯಾನ್ ಪರಾಗ್ ಕನಸು !
ಆಸ್ಟ್ರೇಲಿಯಾ ವಿರುದ್ಧದ ಭಾರತಕ್ಕೆ ಸೇಡಿನ ಪಂದ್ಯ. ಕಳೆದ ವರ್ಷದ ನವೆಂಬರ್ 19ರಂದು ಅಹ್ಮದಾಬಾದ್’ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತ, ತವರು ನೆಲದಲ್ಲೇ ನಿರಾಸೆ ಅನುಭವಿಸಿತ್ತು. ಆ ಮಹಾ ಸೋಲಿಗೆ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒದಗಿ ಬಂದಿದೆ.
T20 World Cup 2024 Super-8: ಭಾರತ Vs ಆಸ್ಟ್ರೇಲಿಯಾ ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ
ಸ್ಥಳ: ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಗ್ರಾಸ್ ಐಸ್ಲೆಟ್; ಸೇಂಟ್ ಲೂಸಿಯಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್

ಇದನ್ನೂ ಓದಿ : Afghanistan National Cricket Team : ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ..!
ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಶಿವಂ ದುಬೆ
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರೀತ್ ಬುಮ್ರಾ
11. ಕುಲ್ದೀಪ್ ಯಾದವ್
ಇದನ್ನೂ ಓದಿ :Afghan Beat Australia: ಆಸ್ಟ್ರೇಲಿಯಾಗೆ ಶಾಕ್ ಕೊಟ್ಟ ಅಫ್ಘಾನಿಸ್ತಾನ, Next ಟಾರ್ಗೆಟ್ ವಿಶ್ವಕಪ್ ಸೆಮಿಫೈನಲ್
Ind vs AUS ICC T20 World Cup This is a golden chance for Indian cricket team to take revenge against Australia