ಗೃಹಲಕ್ಷ್ಮೀ ಯೋಜನೆ: ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್‌

Gruha Lakshmi Big Updates : ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಪಾವತಿಯ ಕುರಿತು ಅಪ್ಟೇಟ್ಸ್‌ ಹೊರಬಿದ್ದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗೃಹಿಣಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಸದ್ಯ ಮೂರು ತಿಂಗಳ ಹಣ ಬಾಕಿ ಉಳಿದಿದೆ. ಅಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳ ಹಣ ಇನ್ನೂ ಗೃಹಿಣಿಯರ ಕೈ ಸೇರಿಲ್ಲ. ದೀಪಾವಳಿಯ ಹೊತ್ತಲ್ಲಿ ಈ ಹಿಂದೆ ಬಾಕಿ ಇದ್ದ ಹಣವನ್ನು ವರ್ಗಾವಣೆ ಮಾಡಲಾಗಿತ್ತು.

ರಾಜ್ಯ ಸರಕಾರದಲ್ಲಿನ ಹಣ ಲಭ್ಯತೆ, ತಾಂತ್ರಿಕ ಕಾರಣಗಳಿಂದಾಗಿ ಪ್ರತೀ ತಿಂಗಳು ಗೃಹಿಣಿಯರ ಖಾತೆಗೆ ಹಣ ವರ್ಗಾವಣೆ ಮಾಡಲು ಕಷ್ಟಸಾಧ್ಯವಾಗುತ್ತಿದೆ. ಇದೇ ಕಾರಣದಿಂದಾಗಿ ಪ್ರತೀ ತಿಂಗಳ ಬದಲು 2 ರಿಂದ 3 ತಿಂಗಳ ಬಾಕಿಯನ್ನು ಒಟ್ಟಿಗೆ ಜಮೆ ಮಾಡಲು ಚರ್ಚೆಗಳು ನಡೆಯುತ್ತಿದೆ.

Gruha Lakshmi Big Updates : ಗೃಹಲಕ್ಷ್ಮೀ ಹಣ ಪಡೆಯೋದಕ್ಕೆ ಈ ದಾಖಲೆಗಳು ಕಡ್ಡಾಯ

  • ಪಡಿತರ ಚೀಟಿ (Ration Card): ಅರ್ಜಿದಾರ ಮಹಿಳೆ (ಕುಟುಂಬದ ಯಜಮಾನಿ) ಯ ಹೆಸರನ್ನು ಪಡಿತರ ಚೀಟಿಯಲ್ಲಿ (BPL, APL, ಅಥವಾ ಅಂತ್ಯೋದಯ) ಮುಖ್ಯಸ್ಥರಾಗಿ ನಮೂದಿಸಿರಬೇಕು.
  • ಆಧಾರ್ ಮತ್ತು ಬ್ಯಾಂಕ್ ಖಾತೆ ಜೋಡಣೆ (DBT):
  • ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು (Aadhaar Seeding).
  • ಬ್ಯಾಂಕ್ ಖಾತೆಗೆ ಡಿಬಿಟಿ (Direct Benefit Transfer) ಸೌಲಭ್ಯ ಸಕ್ರಿಯವಾಗಿರಬೇಕು.
  • ತೆರಿಗೆ ಪಾವತಿದಾರರ ನಿಯಮ (Tax Payer Rule):
  • ಮಹಿಳೆ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
  • ಮಹಿಳೆಯ ಪತಿ ಜಿಎಸ್‌ಟಿ ರಿಟರ್ನ್ಸ್ (GST Returns) ಸಲ್ಲಿಸುವವರಾಗಿರಬಾರದು.
  • ಸರ್ಕಾರಿ ನೌಕರರ ನಿಯಮ: ಮಹಿಳೆ ಅಥವಾ ಅವರ ಪತಿ ಸರ್ಕಾರಿ ನೌಕರರಾಗಿರಬಾರದು.

ಒಂದೊಮ್ಮೆ ಗೃಹಿಣಯರ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ ಖಾತೆಗೆ ಹಣ ಜಮೆ ಆಗದಿದ್ದರೆ, ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಸ್ಥಿತಿ (DBT Status) ಸರಿಯಾಗಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿಕೊಳ್ಳುವುದು ಉತ್ತಮ.

Gruha Lakshmi Big Updates Good News for womens

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories