ದಿನಭವಿಷ್ಯ : ಈ ರಾಶಿಗಿದೆ ಬ್ರಹ್ಮಯೋಗ, ರಾಯರ ಅನುಗ್ರಹ

Today Horoscope November 12 2025 : ದಿನಭವಿಷ್ಯ ಇಂದು ಗುರುವಾರ ನವೆಂಬರ್‌ 12 2025. ಬ್ರಹ್ಮಯೋಗ, ಗುರುರಾಯರ ಅನುಗ್ರಹ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಾದ್ರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಎಂದು ತಿಳಿಯೋಣಾ.

ಮೇಷರಾಶಿ (Aries)
ಅತ್ಯಂತ ಮಂಗಳಕರ ದಿನ. ಹಣದ ಆಗಮನ ಸುಲಭವಾಗುವುದು. ಉದ್ಯೋಗ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ದೊರೆಯಲಿದೆ. ತಾಂತ್ರಿಕ, ರೈಲ್ವೆ, ಇಂಜಿನಿಯರಿಂಗ್, ಮೆಕ್ಯಾನಿಕ್ ಹುದ್ದೆಯಲ್ಲಿರುವವರಿಗೆ ಹಠಾತ್ ಧನಾಗಮನ ನಿರೀಕ್ಷಿಸಬಹುದು.

ವೃಷಭರಾಶಿ (Taurus)
ಶುಭವಲ್ಲದ ಮಿಶ್ರ ಫಲ. ಸಂಪತ್ತಿನ ನಷ್ಟ ಉಂಟಾಗಬಹುದು. ಹಣ ಆಗಮನಕ್ಕೆ ಅಡೆತಡೆ ಹೆಚ್ಚಾಗಬಹುದು ಮತ್ತು ಹಳೆಯ ಸಾಲ ತೀರಿಸಲು ಕಷ್ಟವಾಗಬಹುದು. ಗುರುರಾಯರನ್ನು ಪೂಜಿಸಿ, ಹಸುವಿಗೆ ಆಹಾರ ನೀಡುವುದು ಉತ್ತಮ ಪರಿಹಾರ.

ಮಿಥುನರಾಶಿ (Gemini)
ಮಿಶ್ರ ಫಲ. ಸ್ವಂತ ಉದ್ಯೋಗ ಆರಂಭಿಸುವುದನ್ನು ಮುಂದೂಡುವುದು ಉತ್ತಮ. ಸ್ನೇಹಿತರು ಮತ್ತು ಕುಟುಂಬದ ಸಹಕಾರದ ಕೊರತೆ ಇರಬಹುದು. ಸಂಜೆ ವೇಳೆಗೆ ಶುಕ್ರನ ಸ್ಥಾನ ಬಲದಿಂದ ಪರಿಸ್ಥಿತಿ ಸುಧಾರಿಸಬಹುದು. ವಿಷ್ಣು ದೇವರನ್ನು ಪೂಜಿಸುವುದು ಒಳ್ಳೆಯದು.

ಕರ್ಕಾಟಕರಾಶಿ (Cancer)
ಅತ್ಯಂತ ಶುಭಕರ ದಿನ. ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಹಿಂದೆ ಮಾಡಿದ ಹೂಡಿಕೆಯಿಂದ ಹಠಾತ್ ಧನಾಗಮನವಾಗಬಹುದು. ರಾಜಕೀಯ, ಸಮಾಜ ಸೇವೆ, ಪೊಲೀಸ್, ವಕೀಲ ವೃತ್ತಿಯಲ್ಲಿರುವವರಿಗೆ ಜನಬೆಂಬಲ ಮತ್ತು ಸಂಪತ್ತು ಪ್ರಾಪ್ತಿಯಾಗಲಿದೆ.

ಸಿಂಹರಾಶಿ (Leo)
ಜಾಗ್ರತೆ ಅಗತ್ಯ. ಯಾರನ್ನೂ ಹೆಚ್ಚು ನಂಬದಿರಿ. ಚಂಚಲ ಮನಸ್ಸು ಮತ್ತು ಸ್ಥಳ ಬದಲಾವಣೆಯ ಯೋಚನೆಗಳು ಬರಬಹುದು. ಹಿತ ಶತ್ರುಗಳಿಂದ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ.

ಕನ್ಯಾರಾಶಿ (Virgo)
ಉತ್ತಮ ದಿನ. ಆರ್ಥಿಕವಾಗಿ ಪ್ರಯೋಜನಕಾರಿ ದಿನ. ಇಲ್ಲಸಲ್ಲದ ಅಪವಾದ ಅಥವಾ ರಾಜ ವಿರೋಧ ಎದುರಾದರೂ, ನಿಮ್ಮ ಉತ್ತಮ ಬುದ್ಧಿಶಕ್ತಿಯಿಂದ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಸುಖ ಭೋಜನದ ಯೋಗವಿದೆ.

ತುಲಾರಾಶಿ (Libra)
ಶುಭ ದಿನ. ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ ಮತ್ತು ಪ್ರೀತಿ ಸಮಾಗಮದ ಯೋಗವಿದೆ. ಆದಾಗ್ಯೂ, ಶೀತ ಸಂಬಂಧಿ ರೋಗಗಳು ಅಥವಾ ಸಾಲಬಾಧೆ ಬಗ್ಗೆ ಎಚ್ಚರಿಕೆ ವಹಿಸಿ.

ವೃಶ್ಚಿಕರಾಶಿ (Scorpio)
ಎಚ್ಚರಿಕೆ ಅಗತ್ಯ. ಅತಿಯಾದ ಪ್ರಯಾಣ ಮತ್ತು ಮಾತಿನಲ್ಲಿ ಹಿಡಿತವಿಲ್ಲದೆ ಹೋದರೆ ಆತ್ಮೀಯರೊಂದಿಗೆ ಕಲಹ ಉಂಟಾಗಬಹುದು. ದಾಂಪತ್ಯದಲ್ಲಿ ಕಲಹದ ಸಾಧ್ಯತೆ ಇರುವುದರಿಂದ ಶಾಂತವಾಗಿರಿ.

ಧನಸ್ಸುರಾಶಿ (Sagittarius)
ಸವಾಲುಗಳ ದಿನ. ವಿದ್ಯಾರ್ಥಿಗಳಿಗೆ ಆತಂಕ, ಶತ್ರುಭಾದೆ ಮತ್ತು ಮಾನಸಿಕ ಒತ್ತಡ ಎದುರಾಗಬಹುದು. ಹಿರಿಯರಿಂದ ಉತ್ತಮ ಬೋಧನೆ ಮತ್ತು ಮಾರ್ಗದರ್ಶನ ಸಿಗಲಿದೆ. ಋಣ ವಿಮೋಚನೆಯ ಯೋಗವಿದೆ.

ಮಕರರಾಶಿ (Capricorn)
ವಿಶ್ರಾಂತಿ ಅಗತ್ಯ. ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಆರೋಗ್ಯ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ.

ಕುಂಭರಾಶಿ (Aquarius)
ಆರೋಗ್ಯದ ಬಗ್ಗೆ ಗಮನ ಕೊಡಿ. ದೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ನಿಕಟ ಸಂಬಂಧಿಗಳ ಮನೆಗೆ ಭೇಟಿ ನೀಡುವುದು ಮಾನಸಿಕ ನೆಮ್ಮದಿ ನೀಡುತ್ತದೆ.

ಮೀನರಾಶಿ (Pisces)
ಸಂತೋಷದ ದಿನ. ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳುವ ಯೋಗವಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭವಾಗಬಹುದು.

Today Horoscope November 12 2025 Kannada Astrology

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories