ದಿನಭವಿಷ್ಯ : ಈ ರಾಶಿಗಳಿಗೆ ಶುಕ್ರಾದಿತ್ಯ ಯೋಗ, ಸುಬ್ರಹ್ಮಣ್ಯನ ಅನುಗ್ರಹ

Today Horoscope Kannada Astrology : ದಿನಭವಿಷ್ಯ ಇಂದು ಬುಧವಾರ ನವೆಂಬರ್ 26 2025. ಮಾರ್ಗಶಿರ ಮಾಸದ ಸುಬ್ರಹ್ಮಣ್ಯ ಷಷ್ಠಿ ತಿಥಿಯಂದು ಚಂದ್ರನು ಮಕರ ರಾಶಿಯಲ್ಲಿ ಸಂಚರಿಸಲಿದ್ದಾನೆ. ಶುಕ್ರಾದಿತ್ಯ ಯೋಗದ ಫಲವಿದೆ. ಹಾಗಾದ್ರೆ ಇಂದು ದ್ವಾದಶರಾಶಿಗಳ ರಾಶಿಭವಿಷ್ಯ ಹೇಗಿದೆ.
ಮೇಷ ರಾಶಿ (Mesha Rashi)
ದಿನವು ಮಿಶ್ರಫಲದಾಯಕವಾಗಿದೆ. ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಮತ್ತು ನಿಧಾನಗತಿ ಇರಬಹುದು. ಮನಸ್ಸಿನಲ್ಲಿ ಒಂದು ಬಗೆಯ ಬೇಸರ ಮತ್ತು ಆತಂಕ ಮನೆ ಮಾಡಬಹುದು.
ವೃಷಭ ರಾಶಿ (Vrushabha Rashi)
ಕಾರ್ಯಗಳಲ್ಲಿ ಅನುಕೂಲ ಹೆಚ್ಚಾಗಲಿದೆ. ಧೈರ್ಯ ಮತ್ತು ಸಾಹಸಮಯ ಕೆಲಸಗಳಲ್ಲಿ ಭಾಗವಹಿಸುವಿರಿ. ಆದಾಗ್ಯೂ, ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ.
ಮಿಥುನ ರಾಶಿ (Mithuna Rashi)
ಇಂದು ನಿಮ್ಮ ಮಾತಿನ ಬಲದಿಂದ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವಿರಿ. ಕೌಟುಂಬಿಕ ಸೌಖ್ಯ ಹೆಚ್ಚಲಿದೆ. ಆದರೆ, ಸಾಲವನ್ನು ಮಾಡುವ ಮೊದಲು ಅಥವಾ ಕೊಡುವ ಮೊದಲು ಎಚ್ಚರಿಕೆ ವಹಿಸಿ.
ಕರ್ಕಾಟಕ ರಾಶಿ (Karkataka Rashi)
ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಧೈರ್ಯ-ಸಾಹಸಗಳು ಫಲ ನೀಡಲಿವೆ. ಮಕ್ಕಳಿಂದ ಸಂತೋಷದ ಸುದ್ದಿ ಕೇಳುವಿರಿ. ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಲಿದೆ.
ಸಿಂಹ ರಾಶಿ (Simha Rashi)
ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಮತ್ತು ಆದಾಯದ ಹೊಸ ಮೂಲಗಳು ಗೋಚರಿಸಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗಲಿದೆ. ಸೋಮಾರಿತನದಿಂದ ದೂರವಿರಿ.
ಕನ್ಯಾ ರಾಶಿ (Kanya Rashi)
ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಆಸ್ತಿ ನಿರ್ವಹಣೆಗೆ ಸಂಬಂಧಿಸಿದ ಖರ್ಚುಗಳು ಹೆಚ್ಚಾಗಬಹುದು. ಸಹೋದರರು ಮತ್ತು ಸ್ನೇಹಿತರ ಬೆಂಬಲ ಸಿಗುತ್ತದೆ. ಮಾತಿನ ಮೇಲೆ ಸಂಯಮ ಅಗತ್ಯ.
ತುಲಾ ರಾಶಿ (Tula Rashi)
ಆರ್ಥಿಕವಾಗಿ ಹಣಬಲ ಹೆಚ್ಚಾಗಲಿದೆ. ವಸ್ತ್ರ ಅಥವಾ ಆಭರಣ ವ್ಯಾಪಾರಸ್ಥರಿಗೆ ಉತ್ತಮ ದಿನ. ಕೆಲಸದ ಒತ್ತಡದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ (Vrushchika Rashi)
ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಬಹುದು. ಪಿತ್ರಾರ್ಜಿತ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಹೊಸ ಹವ್ಯಾಸಗಳು ಮನಸ್ಸಿಗೆ ಮುದ ನೀಡಲಿವೆ.
ಧನಸ್ಸು ರಾಶಿ (Dhanu Rashi)
ಸಾಮಾನ್ಯ: ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಇದೆ. ವ್ಯಾಪಾರ ವೃದ್ಧಿಗಾಗಿ ಹೊಸ ಹಣಕಾಸಿನ ಮೂಲಗಳು ಲಭ್ಯವಾಗುತ್ತವೆ. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ.
ಮಕರ ರಾಶಿ (Makara Rashi)
ತಾಯಿಯವರಿಂದ ಆರ್ಥಿಕ ನೆರವು ದೊರೆಯಲಿದೆ. ಹೊಸ ವಾಹನ ಖರೀದಿಸುವ ಯೋಜನೆ ಹಾಕಿಕೊಳ್ಳುವಿರಿ. ಕೋಪವನ್ನು ನಿಯಂತ್ರಿಸುವುದರಿಂದ ಎಲ್ಲಾ ಕಾರ್ಯಗಳು ಸುಗಮವಾಗಲಿವೆ.
ಕುಂಭ ರಾಶಿ (Kumbha Rashi)
ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ಕುಟುಂಬದವರಿಂದ ಉತ್ತಮ ಬೆಂಬಲ ದೊರೆಯಲಿದೆ. ಮನಸ್ಸಿನ ನೆಮ್ಮದಿ ಹೆಚ್ಚಾಗಲಿದೆ.
ಮೀನ ರಾಶಿ (Meena Rashi)
ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ವಿದೇಶ ಪ್ರಯಾಣದ ಅವಕಾಶಗಳು ಕೆಲವರಿಗೆ ಒದಗಿ ಬರಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ.
Today Horoscope Kannada Astrology 26 11 2025



