ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ : ಕಿರಣ್ ಬುಡ್ಲೆಗುತ್ತು, ಅಬ್ಬಾಸ್ ಆಲಿ ಹೆಸರು ಮುಂಚೂಣಿಯಲ್ಲಿ

Dakshina Kannada Congress President : ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡು ಅಧ್ಯಕ್ಷರುಗಳು ಬರುವುದು ಬಹುತೇಕ ಪಕ್ಕಾ ಆಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅನ್ನು ದಕ್ಷಿಣ ಕನ್ನಡ ನಗರ, ದಕ್ಷಿಣ ಕನ್ನಡ ಗ್ರಾಮಾಂತರ ಎಂದು ಎರಡು ಭಾಗಗಳಾಗಿ ವಿಭಜಿಸಲಾಗಿದೆ ಎಂದು ಪಕ್ಷದ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡಬಿದ್ರಿ ವಿಧಾನಸಭಾ ಕ್ಷೇತ್ರಗಳು ದಕ್ಷಿಣ ಕನ್ನಡ ನಗರ ಜಿಲ್ಲಾಧ್ಯಕ್ಷರ ವ್ಯಾಪ್ತಿಗೆ ಒಳಪಡಲಿದೆ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷರ ವ್ಯಾಪ್ತಿಗೆ ಒಳಪಡಲಿದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರುಗಳಾಗಿ ದಕ್ಷಿಣ ಕನ್ನಡ ನಗರ ಹಾಗೂ ದಕ್ಷಿಣ ಕನ್ನಡ ಗ್ರಾಮಾಂತರ ಇಂದು ವಿಭಜಿಸಿ ಅಧಿಕಾರ ಹಂಚಲಾಗಿದೆ.

ಸುಳ್ಯ ಭಾಗದ ಒಕ್ಕಲಿಗ ಸಮುದಾಯದ ಕಿರಣ್ ಬುಡ್ಲೆ ಗುತ್ತು ಹಾಗೂ ಅಲ್ಪ ಸಂಖ್ಯಾತರ ಸಮುದಾಯದ ಅಬ್ಬಾಸ್ ಆಲಿ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ತಿಳಿದು ಬಂದಿದೆ.

ಕಿರಣ್ ಬುಡ್ಲೆ ಗುತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರ ಹೆಸರು ಲೋಕಸಭೆ ಅಭ್ಯರ್ಥಿಗೆ ಅಂತಿಮ ಪಟ್ಟಿಗೆ ಸೇರಿತ್ತು.

ಅಬ್ಬಸಾಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯ ನಿರ್ವಹಣೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಈ ಮೊದಲು ಬಿಲ್ಲವ ಸಮುದಾಯದ ಹರೀಶ್ ಕುಮಾರ್ ಕಾಂಗ್ರೆಸ್‌ ನ ದೀರ್ಘಕಾಲದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಲ್ಲವ, ಬಂಟ ಸಮುದಾಯಗಳಿಗೆ ವಿಶೇಷ ಅವಕಾಶ ನೀಡಿರುವ ಕಾರಣ ದಿಂದ
ಒಕ್ಕಲಿಗ ಸಮುದಾಯಕ್ಕೆ ಹಾಗೂ ಅಲ್ಪಸಂಖ್ಯಾತರ ಕೋಟಾದಿಂದ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಕಾಂಗ್ರೆಸ್ ಹೈಕಮಾಂಡ್ ನಿಂದ ಹೊರ ಬಿದ್ದಿದೆ.

ಆದರೆ ಅಂತಿಮ ಹಂತದಲ್ಲಿ ಯಾವ ರೀತಿಯ ಸರ್ಕಸ್ಗಳು ನಡೆಯುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಈ ಬಾರಿ ಜಿಲ್ಲಾಧ್ಯಕ್ಷರಾಗಿ ಯುವ ಅಭ್ಯರ್ಥಿಗಳು ಬರುವುದು ಬಹುತೇಕ ಪಕ್ಕ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

Dakshina Kannada Congress President: Kiran Budleguttu, Abbas Ali names in the forefront

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories