
ಬೈಂದೂರು : ದ್ವಿತೀಯ ಪಿಯುಸಿ ಎಡ್ಮಿಶನ್ ಮುಗಿಸಿ ಮನೆಗೆ ಹಿಂದಿರುಗಲು ರಸ್ತೆ ದಾಟುತಿದ್ದ ವೇಳೆಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ.

ಕಿಶನ್ ಖಾರ್ವಿ ಎಂಬಾತನೇ ಮೃತ ವಿದ್ಯಾರ್ಥಿ. ಇಂದು ದ್ವಿತೀಯ ಪಿಯುಸಿ ಎಡ್ಮಿಶನ್ ಮಾಡಲು ಕಾಲೇಜಿಗೆ ತೆರಳುತ್ತಿದ್ದ ವೇಳೆಯಲ್ಲಿ ವಿದ್ಯಾರ್ಥಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಲಾರಿ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗುತ್ತಿದೆ. ಢಿಕ್ಕಿಯ ರಭಸಕ್ಕೆ ಬಾಲಕ ಛಿದ್ರವಾಗಿದ್ದಾನೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.


