ಗೃಹಲಕ್ಷ್ಮೀ ಸಹಕಾರಿ ಬ್ಯಾಂಕ್​ನಿಂದ ಸದ್ಯಕ್ಕಿಲ್ಲ ಸಾಲ ಸೌಲಭ್ಯ : ಫಲಾನುಭವಿಗಳಿಗೆ ಭಾರೀ ನಿರಾಶೆ

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪಿಸಿತ್ತು.ಸ್ವತಃ ಸಿಎಂ ಸಿದ್ದರಾಮಯ್ಯ ನವೆಂಬರ್​ 28ರಂದು ಈ ಸಂಘಕ್ಕೆ ಚಾಲನೆ ನೀಡಿದ್ದರು.

ಆದರೆ ಸಂಘದ ಮಾರ್ಗಸೂಚಿ ರೂಪಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಾಲ ಸೌಲಭ್ಯ ಸಿಗುವುದು ಡೌಟ್​ ಎನ್ನಲಾಗ್ತಿದೆ. ಈ ಸಂಘಕ್ಕೆ ಕಾನೂನಾತ್ಮಕವಾಗಿ ಚುನಾವಣೆ ನಡೆಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಸಂಘದ ಸದಸ್ಯರಿಗೆ ಸಾಲ ಸಿಗುವ ಪ್ರಕ್ರಿಯೆ ಕೂಡ ತಡವಾಗುತ್ತಿದೆ ಎನ್ನಲಾಗಿದೆ.ಇದು ಗೃಹಲಕ್ಷ್ಮೀ ಸಹಕಾರಿ ಸಂಘದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲದೇ ಸಂಘದ ಕಾರ್ಯನಿರ್ವಹಣೆ ಕುರಿತಂತೆ ಯಾವುದೇ ಮಾರ್ಗಸೂಚಿ ಕೂಡ ರೂಪಿತಗೊಂಡಿಲ್ಲ. ರಾಜ್ಯದಲ್ಲಿ ಇರುವ 1.24 ಕೋಟಿ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಈ ಸಂಘದಿಂದ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯದ ಭರವಸೆ ನೀಡಲಾಗಿತ್ತು.

ಈ ಸಂಘದ ಸದಸ್ವತ್ವ ಪಡೆದವರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿತ್ತು. ಸಂಘದ ಸದಸ್ಯತ್ವಕ್ಕೆ 1250 ರೂಪಾಯಿ ಶುಲ್ಕ ನಿಗದಿಯಾಗಿದ್ದು, ಯೋಜನೆಯ ಫಲಾನುಭವಿಗಳೆಲ್ಲ ಸದಸ್ಯತ್ವ ಪಡೆದರೆ 1200 ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಸೇರಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆ ಆರಂಭ; ಡಿಎಲ್‌, ಆರ್‌ಸಿಯಲ್ಲಿ ಮಹತ್ವದ ಬದಲಾವಣೆ

ನವೆಂಬರ್​ 29ರಂದೇ ಗೃಹಲಕ್ಷ್ಮೀ ಬ್ಯಾಂಕ್​ನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು. ಅನೇಕರು ದೂರದ ಊರುಗಳಿಂದ ಮತದಾನ ಮಾಡಲೆಂದೇ ಆಗಮಿಸಿದ್ದರು. ಆದರೆ ಚುನಾವಣೆ ಮುಂದೂಡಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿರ್ದೇಶಕರು ಮತದಾರರಿಗೆ ತಿಳಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ನಡೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories