ಕ್ರಿಸ್‌ಮಸ್‌ ಕೇಕ್ ಸವಿಯುವ ಮುನ್ನ ಇರಲಿ ಎಚ್ಚರ; ಸಕ್ಕರೆ- ಮೈದಾದ ಅಬ್ಬರದ ನಡುವೆ ಆರೋಗ್ಯ ಜೋಪಾನ

Christmas Cake : ಡಿಸೆಂಬರ್ ತಿಂಗಳೆಂದರೆ ಸಂಭ್ರಮದ ಸೀಸನ್. ಕ್ರಿಸ್‌ಮಸ್‌ ಹಬ್ಬದ ಸಡಗರದ ಬೆನ್ನಲ್ಲೇ ಹೊಸ ವರ್ಷದ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಎರಡೂ ಸಂಭ್ರಮಗಳಲ್ಲಿ ಪ್ರಮುಖವಾಗಿ ರಾರಾಜಿಸುವುದು ಆಕರ್ಷಕ ಕೇಕ್‌ಗಳು. ಆದರೆ, ಈ ಸುಂದರ ಕೇಕ್‌ಗಳ ಹಿಂದೆ ಆರೋಗ್ಯಕ್ಕೆ ಮಾರಕವಾಗುವ ಅಂಶಗಳು ಅಡಗಿರಬಹುದು ಎಂಬುದು ನಿಮ್ಮ ಗಮನಕ್ಕಿದೆಯೇ?

Christmas Cake : ಮಾರುಕಟ್ಟೆಯ ಕೇಕ್‌ಗಳಲ್ಲಿರುವ ಅಪಾಯಗಳೇನು?

ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಕೇಕ್‌ಗಳನ್ನು ಮೈದಾ (Refined Flour) ಬಳಸಿ ತಯಾರಿಸಲಾಗುತ್ತದೆ. ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇದರ ಜೊತೆಗೆ ಇನ್ನು ಕೆಲವು ಆತಂಕಕಾರಿ ಅಂಶಗಳಿವೆ:

ಅತಿಯಾದ ಸಕ್ಕರೆ ಮತ್ತು ಕ್ಯಾಲೋರಿ ಇರುತ್ತದೆ. ಕೇಕ್ ಸವಿಯಲು ಸಿಹಿಯಾಗಿದ್ದರೂ, ಅದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಕ್ಷಣವೇ ಹೆಚ್ಚಿಸುತ್ತದೆ. ಕಲಬರಕೆ ಕ್ರೀಮ್‌ಗಳು ತೊಂದರೆ ಉಂಟುಮಾಡುತ್ತದೆ.

ಕೇಕ್‌ಗಳ ಮೇಲೆ ಹಚ್ಚುವ ಬಣ್ಣಬಣ್ಣದ ಕ್ರೀಮ್‌ಗಳಲ್ಲಿ ಕೃತಕ ಬಣ್ಣ ಮತ್ತು ಟ್ರಾನ್ಸ್‌ ಫ್ಯಾಟ್ ಅಧಿಕವಾಗಿರುತ್ತದೆ. ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರಿಸರ್ವೇಟಿವ್‌ಗಳ ಬಳಕೆಯಿಂದ ಅಪಾಯ ಹೆಚ್ಚುತ್ತದೆ. ದೀರ್ಘಕಾಲದವರೆಗೆ ಕೆಡದಂತೆ ಇಡಲು ಬಳಸುವ ರಾಸಾಯನಿಕಗಳು ಹೊಟ್ಟೆಯ ಆರೋಗ್ಯಕ್ಕೆ ಹಾನಿಕಾರಕ.

ಇದನ್ನೂ ಓದಿ: ಅಯೋಧ್ಯೆಗೆ ಮೂವತ್ತು ಕೋಟಿ ಮೌಲ್ಯದ ರಾಮಲಲ್ಲಾ ವಿಗ್ರಹ ದೇಣಿಗೆ ನೀಡಿದ ಕರ್ನಾಟಕದ ವ್ಯಕ್ತಿ

ಮನೆಯಲ್ಲೇ ಕೇಕ್ ಮಾಡುವುದು ಉತ್ತಮ

ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ಅನಾರೋಗ್ಯಕರ ಕೇಕ್‌ಗಳ ಬದಲು ಮನೆಯಲ್ಲೇ ಕೇಕ್ ಮಾಡುವುದು ಈಗಿನ ಟ್ರೆಂಡ್. ಮೊದಲಿಗೆ ಇದು ಸ್ವಲ್ಪ ಕಷ್ಟವೆನಿಸಿದರೂ, ಇದು ನಿಮ್ಮ ಕುಟುಂಬದ ಆರೋಗ್ಯಕ್ಕೆ ನೀಡುವ ದೊಡ್ಡ ಉಡುಗೊರೆ.

ನೀವು ಮೈದಾ ಬದಲು ಗೋಧಿ ಹಿಟ್ಟು (Wheat Flour) ಅಥವಾ ರಾಗಿ ಹಿಟ್ಟನ್ನು ಬಳಸಬಹುದು. ಕೇಕ್‌ಗೆ ಒಣ ಹಣ್ಣುಗಳು, ನಟ್ಸ್ ಮತ್ತು ನೈಸರ್ಗಿಕ ಹಣ್ಣುಗಳನ್ನು ಸೇರಿಸಿ ಪೌಷ್ಟಿಕವಾಗಿಸಬಹುದು. ಬಿಳಿ ಸಕ್ಕರೆಯ ಬದಲು ಸಾವಯವ ಬೆಲ್ಲ ಅಥವಾ ಜೇನುತುಪ್ಪವನ್ನು ಬಳಸಲು ಅವಕಾಶವಿರುತ್ತದೆ.

ನೀವು ಕೇಕ್ ಕೊಳ್ಳಲೇಬೇಕಿದ್ದರೆ, ಅದರ ತಯಾರಿಕೆಯ ದಿನಾಂಕ ಮತ್ತು ಅದರಲ್ಲಿರುವ ಪದಾರ್ಥಗಳನ್ನು ಒಮ್ಮೆ ಪರಿಶೀಲಿಸಿ. ಹಬ್ಬವೆಂದು ಅತಿಯಾಗಿ ಕೇಕ್ ತಿನ್ನುವ ಬದಲು, ಅಲ್ಪ ಪ್ರಮಾಣದಲ್ಲಿ ಸೇವಿಸಿ ಸಡಗರವನ್ನು ಅನುಭವಿಸಿ.

ಈ ವರ್ಷದ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂಭ್ರಮವು ಕೇವಲ ನಾಲಿಗೆಯ ರುಚಿಗಷ್ಟೇ ಸೀಮಿತವಾಗದಿರಲಿ. ನಿಮ್ಮ ಆರೋಗ್ಯದ ಕಡೆಗೂ ಒಂದು ಕಣ್ಣಿರಲಿ. ಕಲಬರಕೆ ಕ್ರೀಮ್‌ ಮತ್ತು ಮೈದಾದಿಂದ ದೂರವಿದ್ದು, ಮನೆಯಲ್ಲೇ ತಯಾರಿಸಿದ ಶುದ್ಧ ತಿನಿಸುಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ.

Be Careful before Eating Christmas Cake

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories