ಬಿಸಿಸಿಐ ವಾರ್ಷಿಕ ಗುತ್ತಿಗೆ : ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿಗೆ ಹಿಂಬಡ್ತಿ

ಮುಂಬೈ : BCCI annual contracts: ಬಿಸಿಸಿಐ (BCCI) ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ 2025-26ನೇ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿರುವ ಈ ಪಟ್ಟಿಯಲ್ಲಿ ಹಿರಿಯ ಆಟಗಾರರಿಗೆ ಹಿಂಬಡ್ತಿ ನೀಡಲಾಗಿದ್ದರೆ, ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.

ಪುರುಷರ ತಂಡದ ವಾರ್ಷಿಕ ಗುತ್ತಿಗೆ: ಎ ಪ್ಲಸ್ ಶ್ರೇಣಿ ರದ್ದು!

ಈ ಬಾರಿಯ ಗುತ್ತಿಗೆ ಪಟ್ಟಿಯಲ್ಲಿ ಅತ್ಯಂತ ಗಮನಾರ್ಹ ಬದಲಾವಣೆ ಅಂದರೆ ಕಳೆದ ವರ್ಷವಿದ್ದ ‘ಎ ಪ್ಲಸ್’ (A+) ಶ್ರೇಣಿಯನ್ನು ಕೈಬಿಟ್ಟಿರುವುದು. ಕಳೆದ ಬಾರಿ ಎ ಪ್ಲಸ್ ಶ್ರೇಣಿಯಲ್ಲಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜಾ ತಲಾ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈ ಬಾರಿ ಅವರನ್ನು ‘ಎ’ ಗ್ರೇಡ್‌ಗೆ ಇಳಿಸಲಾಗಿದೆ.

ಬಿಸಿಸಿಐ ಶ್ರೇಣಿ ಮತ್ತು ಸಂಭಾವನೆಯ ವಿವರ:

ಎ ಗ್ರೇಡ್ (5 ಕೋಟಿ ರೂ.): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಂಡದ ನಾಯಕ ಶುಭಮನ್ ಗಿಲ್, ಜಸ್ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜಾ ಈ ಶ್ರೇಣಿಯಲ್ಲಿದ್ದಾರೆ.

ಬಿ ಗ್ರೇಡ್ (3 ಕೋಟಿ ರೂ.): ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಈ ಬಾರಿ ಹಿಂಬಡ್ತಿ ನೀಡಲಾಗಿದ್ದು, ಕಳೆದ ಬಾರಿ ಎ ಗ್ರೇಡ್‌ನಲ್ಲಿದ್ದ ಅವರು ಈಗ ಬಿ ಗ್ರೇಡ್‌ಗೆ ಕುಸಿದಿದ್ದಾರೆ.

ಸಿ ಗ್ರೇಡ್ (1 ಕೋಟಿ ರೂ.): ಉಳಿದ ಯುವ ಮತ್ತು ಉದಯೋನ್ಮುಖ ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳಾ ತಂಡದ ವಾರ್ಷಿಕ ಗುತ್ತಿಗೆ

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆಯನ್ನೂ ಬಿಸಿಸಿಐ ಬಿಡುಗಡೆ ಮಾಡಿದ್ದು, ತಂಡದ ಪ್ರಮುಖ ಆಟಗಾರ್ತಿಯರು ಉನ್ನತ ಸ್ಥಾನ ಉಳಿಸಿಕೊಂಡಿದ್ದಾರೆ.

ಎ ಗ್ರೇಡ್: ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರು ‘ಎ’ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿ ಗ್ರೇಡ್: ರೇಣುಕಾ ಠಾಕೂರ್, ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ, ರೀಚಾ ಘೋಷ್ ಮತ್ತು ಸ್ನೇಹ ರಾಣಾ ಅವರಿಗೆ ಬಿ ಶ್ರೇಣಿ ನೀಡಲಾಗಿದೆ.

ಸಿ ಗ್ರೇಡ್: ತಂಡದ ಇತರೆ ಆಟಗಾರ್ತಿಯರಿಗೆ ಸಿ ಶ್ರೇಣಿಯ ಗುತ್ತಿಗೆ ನೀಡಲಾಗಿದೆ.

Also Read: ಕೆ.ಎಲ್. ರಾಹುಲ್ ಶತಕದ ಅಬ್ಬರ: ಮುಂಬೈ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಬಿಸಿಸಿಐ ಗುತ್ತಿಗೆ ಹೈಲೆಟ್ಸ್‌ :

ಹಿಂಬಡ್ತಿ: ಅನುಭವೀ ಆಟಗಾರರಾದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರ ವಾರ್ಷಿಕ ಸಂಭಾವನೆಯಲ್ಲಿ 2 ಕೋಟಿ ರೂ. ಕಡಿತವಾದಂತಾಗಿದೆ.

ನಾಯಕನಿಗೆ ಬಡ್ತಿ: ಟೆಸ್ಟ್ ಮತ್ತು ಏಕದಿನ ತಂಡದ ನಾಯಕನಾಗಿ ಜವಾಬ್ದಾರಿ ಹೊತ್ತಿರುವ ಶುಭಮನ್ ಗಿಲ್ ಅವರಿಗೆ ಗುತ್ತಿಗೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕನ್ನಡಿಗನಿಗೆ ನಿರಾಸೆ: ಗಾಯ ಮತ್ತು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಕೆ.ಎಲ್. ರಾಹುಲ್ ಅವರ ಶ್ರೇಣಿ ಕುಸಿದಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಬಿಸಿಸಿಐನ ಈ ಹೊಸ ನೀತಿಯು ಆಟಗಾರರ ಪ್ರದರ್ಶನ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಆಧರಿಸಿ ಸಿದ್ಧಪಡಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories