ದಲಿತ ದಂಪತಿಗಳ ಪಾದ ತೊಳೆದ ಬಿಜೆಪಿ ಶಾಸಕ: ಬೈಂದೂರಿನಲ್ಲಿ ಗುರುರಾಜ್ ಗಂಟಿಹೊಳೆ ಹೊಸ ಇತಿಹಾಸ

ಬೈಂದೂರು : ಸಾಮಾನ್ಯವಾಗಿ ಶಾಸಕರು ಅಂದ್ರೆ ಕ್ಷೇತ್ರದ ಅಭಿವೃದ್ದಿ, ಜನರ ಸಮಸ್ಯೆ ಆಲಿಸುವ ಕೆಲಸ ಮಾಡ್ತಾರೆ. ಆದ್ರೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ (Byndoor BJP MLA Gururaj Gantihole) ಮಾದರಿ ಕೆಲಸದ ಮೂಲಕ ಇತರರಿಗೆ ಮಾದರಿಯಾಗ್ತಿದ್ದಾರೆ. ಈ ಹಿಂದೆ ಕೊರಗರ ಮನೆಯಲ್ಲಿ ವಾಸ್ತವೂ ಹೂಡಿದ್ದ, ಶಾಸಕರು ಇದೀಗ ದಲಿತ ದಂಪತಿಗಳ ಪಾದ ಪೂಜೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯ ಎನಿಸಿರುವ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿ, ಕೊರಗ ಬಂಧುಗಳೊಂದಿಗೆ ಊಟೋಪಚಾರ, ಸಂವಾದ ನಡೆಸುವ ಮೂಲಕ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸುದ್ದಿಯಾಗಿದ್ದರು.

ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆ ಅಂಗಡಿ ಪ್ರದೇಶದ ಎಸ್‌ಸಿ ಕಾಲೋನಿ ಶಶಿಕುಮಾರ್ ಅವರ ಮನೆಗೆ ಭೇಟಿ ನೀಡಿ, ದಂಪತಿಗಳ ಪಾದಪೂಜೆ ನೆರವೇರಿಸಿ ಸಹಭೋಜನದಲ್ಲಿ ಭಾಗಿಯಾದರು.
Also Read : ಸಾಕ್ಷರತಾ ಪ್ರಮಾಣದಲ್ಲಿ ವಿಶೇಷ ಸಾಧನೆ : ಶೀಘ್ರದಲ್ಲೇ ಉಡುಪಿ ರಾಜ್ಯದಲ್ಲೇ ನಂ.1 ಸಾಕ್ಷರ ಜಿಲ್ಲೆ ಗರಿಮೆ
ಶಾಸಕ ಗುರುರಾಜ್ ಗಂಟಿಹೊಳೆ ಅವರ ಈ ನಡೆಯ ಬಗ್ಗೆ, ಪರಿಶಿಷ್ಟ ಕಾಲನಿಯ ಬಂಧುಗಳು ಸಂತಸ ವ್ಯಕ್ತಪಡಿಸಿದ್ದು ಶಾಸಕರ ಈ ಕಾರ್ಯ ಸಮಾಜದಲ್ಲಿ ಜಾತಿ ತಾರತಮ್ಯ, ಅಶ್ಪೃಶ್ಯತೆಯ ಮನೋಭಾವನೆಯನ್ನು ತೊಡೆದುಹಾಕಲಿದೆ ಎಂದು ಹೇಳಿದ್ದಾರೆ.
ಸಮಾಜದಲ್ಲಿ ತಾರತಮ್ಯ ಹೋಗಬೇಕು ಎಂಬ ಕಾರಣಕ್ಕೆ ಈ ಹೊಸ ಪ್ರಯೋಗಗಳಿಗೆ ಶಾಸಕರು ಮುಂದಾಗಿದ್ದಾರೆ. ಆದರೆ ಶಾಸಕರ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿದೆ.
Also Read : ಉಡುಪಿ ಜಿಲ್ಲಾ ರೈತ ಸಂಘದಿಂದ ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆ: ಸ್ಥಳ ಪರಿಶೀಲನೆ

ಓರ್ವ ಶಾಸಕರಾಗಿ ಜನಪರ ಕಾಳಜಿಯ ಕಾರ್ಯದ ಜೊತೆ ಜೊತೆಗೆ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ಕಾರ್ಯವನ್ನು ಮಾಡ್ತಾ ಇರೋದು ಮಾತ್ರ ಶ್ಲಾಘನೀಯ.
Byndoor BJP MLA Gururaj Gantihole Washes Feet of Dalit Couple in Wins Hearts



