ಗರ್ಭಕಂಠ ಕ್ಯಾನ್ಸರ್ ವಿರುದ್ಧ ಕೇಂದ್ರದ ಸಮರ : ಹದಿಹರೆಯದ ಬಾಲಕಿಯರಿಗೆ ಉಚಿತ HPV ಲಸಿಕೆ
HPV Vaccination : ನವದೆಹಲಿ: 2024ರ ಕೇಂದ್ರ ಬಜೆಟ್ನಲ್ಲಿ ಮಾಡಿರುವ ಘೋಷಣೆಯಂತೆಯೇ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೈಯ್ಯಲು ಸಜ್ಜಾಗಿದೆ. ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕೇಂದ್ರ ಸರ್ಕಾರವು 14 ವರ್ಷದ ಒಳಗಿನ ಬಾಲಕಿಯರಿಗೆ ಉಚಿತ ಹೂಮನ್ ಪ್ಯಾಪಿಲೋಮವೈರಸ್ ಕ್ಯಾನ್ಸರ್ ಲಸಿಕೆ ನೀಡಲು ಮುಂದಾಗಿದೆ.
2027ರ ವೇಳೆಗೆ 2.6 ಕೋಟಿ ಡೋಸ್ ಲಸಿಕೆಗಳನ್ನು ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಲಸಿಕಾ ಅಭಿಯಾನ ಆರಂಭಗೊಳ್ಳಲಿದೆ. ಜಾಗತಿಕ ಲಸಿಕಾ ಒಕ್ಕೂಟ ಗವಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಸರ್ಕಾರವು ಮೆರ್ಕ್ ಕಂಪನಿಯ ಗಾರ್ಡಾಸಿಲ್ ಲಸಿಕೆಗಳನ್ನು ಹದಿಹರೆಯದ ಬಾಲಕಿಯರಿಗೆ ನೀಡಲಿದೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ವೈದ್ಯರ ಸಮರ : ಮಾರ್ಚ್ 11ರಂದು ರಾಜ್ಯಾದ್ಯಂತ ವೈದ್ಯರ ಮುಷ್ಕರ
ಈಗಾಗಲೇ ಜಗತ್ತಿನ 160ಕ್ಕೂ ಅಧಿಕ ದೇಶಗಳು ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಲಸಿಕೆಗಳನ್ನು (HPV Vaccination ) ತಮ್ಮ ರಾಷ್ಟ್ರೀಯ ಲಸಿಕಾ ವೇಳಾಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಸ್ತನಕ್ಯಾನ್ಸರ್ ಬಳಿಕ ಅತೀ ಹೆಚ್ಚು ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್ ಇದಾಗಿದ್ದು ಗರ್ಭಕಂಠ ಕ್ಯಾನ್ಸರ್ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪಣತೊಟ್ಟಿದೆ.



